ಬಳ್ಳಾರಿ : ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕಿನ ಕಾರ್ಖಾನೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕುಡಿತಿನಿ ಪಟ್ಟಣ ಸ್ವಯಂಪ್ರೇರಿತವಾಗ ಲಾಕ್ ಡೌನ್ ಆಗಿದೆ. ಪಟ್ಟಣದ ಮುಖಂಡರು ಒಂದೆಡೆ ಸೇರಿ ಸ್ವಯಂಪ್ರೇರಿತವಾಗಿ ಪಟ್ಟಣವನ್ನು ಲಾಕ್ ಡೌನ್ ಮಾಡಲು ಪಟ್ಟಣದ ಜನರೊಂದಿಗೆ ಚರ್ಚಿಸಿ ಕೆಲವು ನಿಯಮಗಳನ್ನು ರಚಿಸಿಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನಿನ ನಿಯಮಗಳೇನೇ ಇರಲಿ, ಅವುಗಳು ನಮಗೆ ಅನ್ವಯಿಸುವುದಿಲ್ಲ. ಮಹಾಮಾರಿ ಕೊರೊನಾ ಸೋಂಕು ನಮ್ಮ ಪಟ್ಟಣದೊಳಗೆ ನುಸುಳದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ, ಕುಡುತಿನಿ ಪಟ್ಟಣದ ಜನರು ಒಗ್ಗೂಡಬೇಕಿದೆ ಎಂದು ಪಟ್ಟಣದ ಮುಖಂಡರು ಕರೆ ಕೊಟ್ಟಿದ್ದಾರೆ. ಹೀಗಾಗಿ ಕುಡುತಿನಿ ಪಟ್ಟಣಿಗರು ಇಂದಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ.
ಇನ್ನು ಪಟ್ಟಣದಲ್ಲಿ ಬಸ್, ಕಾರು, ಲಾರಿ, ಬೈಕ್ ಏನೇ ಬಂದ್ರೂ ನಿಲ್ಲಿಸುವುದಕ್ಕೆ ಸ್ಥಳೀಯರು ಅವಕಾಶ ನೀಡುತ್ತಿಲ್ಲ. ಅಗತ್ಯಬಿದ್ದರೆ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯನ್ನೇ ಬಂದ್ ಮಾಡಲು ಕುಟುತಿನಿಗರು ನಿರ್ಧಾರ ಮಾಡಿದ್ದು, ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದವರಿಗೆ ಶಾಶ್ವತವಾಗಿ ಊರಿಂದಲೇ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ.








