ವಾಂಖೇಡೆ ಪಿಚ್ ಸಿಬ್ಬಂದಿಗೆ ಟೀಂ ಇಂಡಿಯಾದಿಂದ 35,000 ರೂ
ವಿಶ್ವ ಕ್ರಿಕೆಟ್ ನ ಬುದ್ಧ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆದ ಬಳಿಕ ಮೊದಲ ಅಗ್ನಿ ಪರೀಕ್ಷೆಯಲ್ಲೇ ಭರ್ಜರಿಯಾಗಿ ಗೆದ್ದಿದ್ದಾರೆ.
ಕಿವೀಸ್ ವಿರುದ್ಧದ ಟಿ 20 ಮತ್ತು ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ.
ಈ ಮಧ್ಯೆ ರಾಹುಲ್ ಮಹಿಮೆ ಎಂಬಂತೆ ಟೀಂ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆಗಳು ನಡೆಯುತ್ತಿದೆ.
ಇದಕ್ಕೆ ಸಾಕ್ಷಿ ವಾಂಖೇಡೆ ಪಿಚ್ ಸಿಬ್ಬಂದಿಗೆ ಟೀಂ ಇಂಡಿಯಾ 35,000 ರೂಪಾಯಿ ನೀಡಿರುವುದು.
ಹೌದು.. ಸೋಮವಾರ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನು 372 ರನ್ಗಳಿಂದ ಗೆದ್ದನಂತರ ಕೊಹ್ಲಿ ಸೇನೆ ವಾಂಖೆಡೆ ಸ್ಟೇಡಿಯಂನ ಮೈದಾನ ಸಿಬ್ಬಂದಿಗಳಿಗೆ 35 ಸಾವಿರ ರೂಗಳನ್ನು ನೀಡಿದೆ.
ಪಂದ್ಯ ಮೂರೇ ದಿನಗಳಲ್ಲಿ ಕೊನೆಗೊಳ್ಳದಂತೆ ಪಿಚ್ ನಿರ್ಮಿಸಿದ್ದಕ್ಕೆ ಮೆಚ್ಚುಗೆಯ ಸಂಕೇತವಾಗಿ ವಿರಾಟ್ – ದ್ರಾವಿಡ್ ಬಳಗ ಸಿಬ್ಬಂದಿಗೆ 35000 ರೂಪಾಯಿಗಳನ್ನು ನೀಡಿದೆ.
ಅಂದಹಾಗೆ ಪಿಚ್ ಸಿಬ್ಬಂದಿಗೆ ಹೀಗೆ ಹಣ ನೀಡುವ ಪರಂಪರೆಗೆ ನಾಂದಿಯಾಡಿದ್ದು, ಟೀಂ ಇಂಡಿಯಾದ ಹೆಚ್ ಕೋಚ್ ರಾಹುಲ್ ದ್ರಾವಿಡ್.
ಕಿವೀಸ್ ವಿರುದ್ಧದ ಸರಣಿಯ ಭಾಗವಾಗಿ ಟೀಂ ಇಂಡಿಯಾ ಕಾನ್ಪುರದಲ್ಲಿ ಮೊದಲ ಟೆಸ್ಟ್ ಆಡಿತು. ಆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ಇಲ್ಲಿ ಟೀಂ ಇಂಡಿಯಾ ಪಂದ್ಯಗೆಲ್ಲಲಿಲ್ಲ ಎಂಬ ವಿಚಾರಕ್ಕಿಂತ ರಾಹುಲ್ ದ್ರಾವಿಡ್ ವೈಯುಕ್ತಿಕವಾಗಿ ಕಾನ್ಪುರದಲ್ಲಿ ಪಿಚ್ ಸಿದ್ದಪಡಿಸಿದ ಸಿಬ್ಬಂದಿಗೆ 35,000 ಸಾವಿರ ನೀಡಿದ್ದರು.
ಇದೀಗ ಅದರ ಮುಂದುವರೆದ ಭಾಗವಾಗಿ ಟೀಂ ಇಂಡಿಯಾ ಮುಂಬೈನಲ್ಲಿ ವಾಂಕೇಡೆ ಮೈದಾನದ ಸಿಬ್ಬಂದಿಗೆ 35,000 ರೂಪಾಯಿ ನೀಡಿದ್ದಾರೆ.
ಟೀಂ ಇಂಡಿಯಾದಲ್ಲಿನ ಈ ಬದಲಾವಣೆ ಕ್ರಿಕೆಟ್ ಬುದ್ಧ ರಾಹುಲ್ ದ್ರಾವಿಡ್ ಅವರೇ ಕಾರಣ.








