ಪ್ರತಿಯೊಬ್ಬರಿಗೂ ತಮ್ಮ ಕೂದಲು ಯಥೇಚ್ಛವಾಗಿರಬೇಕು ಮತ್ತು ಕಪ್ಪಾಗಿರಬೇಕು ಎಂಬ ಆಸೆ ಇರುತ್ತದೆ ಅದನ್ನು ಸಾಧ್ಯವಾಗಿಸಲು ನೀವು
ನಿಮ್ಮ ಕೂದಲು ವೇಗವಾಗಿ ಬೆಳೆಯಲು ಈ ಸರಳ ಟಿಪ್ಸ್‌ಗಳನ್ನು ಅನುಸರಿಸಿ
ಪ್ರೋಟೀನ್:
ಕೆರಾಟಿನ್‌ನಂತಹ ಪ್ರೊಟೀನ್ ಕೂದಲ ಬೆಳವಣಿಗೆಗೆ ಮುಖ್ಯವಾಗಿದೆ. ಮೊಟ್ಟೆ, ಮೀನು, ಲೀನ್ ಮೀಟ್, ಧಾನ್ಯಗಳಿಂದ ಇದು ದೊರೆಯುತ್ತದೆ.
ಬಯೋಟಿನ್:
ಕೂದಲ ಬೆಳವಣಿಗೆಗೆ ಬಿ ವಿಟಮಿನ್ ಮುಖ್ಯವಾಗಿದೆ. ಬಯೋಟಿನ್‌ಯುಕ್ತ ಆಹಾರಗಳಾದ ಡ್ರೈ ಫ್ರುಟ್ಸ್, ಬೀಜಗಳು, ಸಿಹಿ ಗೆಣಸು, ಪಾಲಾಕ್ ಸೊಪ್ಪಿನ ಸೇವನೆ ಮಾಡುವುದು.
ಕಬ್ಬಿಣದ ಅಂಶ:
ಕೂದಲಿನ ನಷ್ಟಕ್ಕೆ ಕಬ್ಬಿಣದಂಶದ ಕೊರತೆ ಕೂಡ ಕಾರಣವಾಗುತ್ತದೆ. ಕಬ್ಬಿಣ ಸತ್ವಗಳಿರುವ ಆಹಾರಗಳಾದ ಕೆಂಪು ಮಾಂಸ, ಬೀನ್ಸ್, ಕಾಳು, ಹಸಿರು ಸೊಪ್ಪುಗಳನ್ನು ನಿಮ್ಮ ಆಹಾರದಲ್ಲಿ ಯಥೇಚ್ಛವಾಗಿ ಬಳಸುವುದು.
ಶಾಂಪು ಬಳಸಿ
ಕೂದಲಿನ ಆರೈಕೆಯ ಸಮಯದಲ್ಲಿ ಸರಿಯಾದ ಶ್ಯಾಂಪೂ ಹಾಗೂ ಕಂಡೀಷನರ್ ಬಳಕೆ ಮಾಡಿ.ಆದಷ್ಟು ನೈಸರ್ಗಿಕ ಅಂಶಗಳಿರುವ ಉತ್ಪನ್ನಗಳನ್ನು ಬಳಕೆ ಮಾಡಿ. ರಾಸಾಯನಿಕ ಪ್ರಾಡಕ್ಟ್‌ಗಳಿಂದ ದೂರವಿರಿ.
ಕೊನೆಯದಾಗಿ ನೆತ್ತಿಯ ಮೇಲೆ ಮಸಾಜ್ ಮಾಡುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ಕೂದಲಿನ ಕಿರುಚೀಲಗಳಿಗೆ ಹೆಚ್ಚಿನ ನ್ಯೂಟ್ರಿನ್ ಅನ್ನು ಒದಗಿಸುತ್ತದೆ. ಬೆರಳುಗಳಿಂದ ನೆತ್ತಿಯ ಮಸಾಜ್ ಮಾಡಿಕೊಳ್ಳಿ. ಮಸಾಜ್ ಅನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ತೆಂಗಿನೆಣ್ಣೆ, ಹರಳೆಣ್ಣೆ ಹಾಗೂ ರೋಸ್‌ಮೇರಿ ಎಣ್ಣೆಯನ್ನು ಹೆಚ್ಚಿಕೊಂಡು ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ.ನಂತರದ ದಿನಗಳಲ್ಲಿ ಉತ್ತಮ ರಿಸಲ್ಟ್ ನಿಮಗೆ ದೊರೆಯುತ್ತದೆ.