Warangal -ಕ್ಷುಲಕ್ಕ ಕಾರಣಕ್ಕೆ ಯುವತಿಯೋಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ಬೆಳಕಿಗೆ ಬಂದಿದೆ .
ವಾರಂಗಲ್ ನ ಗುನ್ನೆಪಲ್ಲಿ ಗ್ರಾಮದ ನಿವಾಸಿಯಾದ ೧೯ ವರ್ಷದ ಮಾದುಲ ಹೇಮಲತ್ ರೆಡ್ಡಿ ಕಳೆದ ಮಂಗಳವಾರ ಅಂದರೆ ಮಾರ್ಚ ೨೮ ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳೆ. ಯುವತಿಯು ಹನುಮ ಕೊಂಡದ ಡಿಗ್ರಿ ಕಾಲೇಜಿನಲ್ಲಿ ದ್ವಿತಿಯ ವರ್ಷವ್ಯಾಸಂಗ ಮಾಡುತ್ತಿದ್ದು , ಯುಗಾದಿ ಹಬ್ಬಕ್ಕೆಂದು ಮನೆಗೆ ಬಂದಿದ್ದಳು ,
ಈ ಸಂದರ್ಭದಲ್ಲಿ ಯುವತಿಯ ತಂದೆ ಚಿನ್ನದ ಉಂಗುರವನ್ನು ಕೊಡಿಸಿದ್ದರು. ಆದರೆ ಉಂಗುರವನ್ನು ಕಳೆದು ಕೊಂಡ ಯುವತಿ ಪಾಲಕರು ಬೈಯುತ್ತಾರೆಂದು ಹೆದರಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಡೆತ್ ನೊಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದಾಳೆ . ಯುವತಿಯ ತಂದೆ ಮಾದುಲ ಜಾನಕಿರಾಮುಲು ಈ ಕುರಿತಾಗಿ ದೂರು ದಾಖಲಿಸಿದ್ದಾರೆ .
ಆದರೆ ಕ್ಷುಲ್ಲಕ ಕಾರಣಕ್ಕೆ ಯುವತಿ ಸಾವಿನ ಹಾದಿ ಹಿಡಿದಿರುವುದ ವಿಷಾದಕರ ಸಂಗತಿಯಾಗಿದೆ.