ಮಂಗಳೂರು : ಕೊರೊನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಅಂತರ್ ಜಿಲ್ಲೆ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ಜೊತೆಗೆ ಖಾಸಗಿ ಬಸ್ ಗಳು ಸಂಚಾರ ಪ್ರಾರಂಭಿಸಬಹುದು. ಆದರೆ ಮಂಗಳೂರು ಜಿಲ್ಲೆಯಲ್ಲಿ ಮಾತ್ರ ಜೂನ್ ತಿಂಗಳವರೆಗೆ ಖಾಸಗಿ ಬಸ್ ಓಡಾಟವಿಲ್ಲ. ಈ ಬಗ್ಗೆ ಇಂದು ಮಂಗಳೂರಿನ ಆರ್. ಟಿ.ಓ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಬಸ್ಸುಗಳ ಮಾಲೀಕರ ಸಂಘದ ಮುಖ್ಯಸ್ಥರು ಮತ್ತು ಆರ್ ಟಿಓ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಬಸ್ ಮಾಲೀಕರು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಮೇ ಅಂತ್ಯದವರಗೂ ಬಸ್ ಓಡಿಸಲು ಸಾಧ್ಯವಿಲ್ಲ.
ಆರು ತಿಂಗಳ ಟ್ಯಾಕ್ಸ್ ಕಡಿತ, ಟಿಕೆಟ್ ದರ ಹೆಚ್ಚಳ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಸ್ ಮಾಲೀಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಬೇಡಿಕೆಗಳ ಈಡೇರದಿದ್ದರೆ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರ ಸ್ಟಾಪ್ ಆಗಲಿವೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಬಸ್ ಮಾಲೀಕರ ಸಂಘದ ಸದಸ್ಯರು ಸರ್ಕಾರವನ್ನು ಎಚ್ಚರಿಸಿದ್ದಾರೆ.