ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಅತೀ ಹೆಚ್ಚು ಸೋಂಕಿತರನ್ನು ಅಮೆರಿಕಾದಲ್ಲಿ ಹೊಂದಿದೆ. ಕೊರೋನಾ ಕೇಂದ್ರ ಸ್ಥಾನ ಚೀನಾವನ್ನು ಹಿಂದಿಕ್ಕಿರುವ ಅಮೆರಿಕಾದಲ್ಲಿ ಸದ್ಯಕ್ಕೆ 82404 ಮಂದಿ ಸೋಂಕಿತರಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಷ್ಟ್ರ ಎಂಬ ಅಪ ಕೀರ್ತಿಗೆ ಪಾತ್ರವಾಗಿದೆ. ಅಮೆರಿಕಾ ಕೊರೋನಾ ಸೋಂಕಿನ ಸುಳಿಯೊಳಗೆ ಸಿಲುಕಿ ನಲುಗಲು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಉಡಾಫೆ ಕಾರಣ ಎಂದು ಹೇಳಲಾಗುತ್ತಿದೆ.
ಚೀನಾದ ಒಟ್ಟು ಸೋಂಕಿತರ ಸಂಖ್ಯೆ 81782. ಆದರೆ ಅಮೆರಿಕದಲ್ಲಿ ಇಲ್ಲಿಯವರೆಗೆ 82404 ಮಂದಿ ಸೋಂಕಿತರಿದ್ದಾರೆ. ಈವರೆಗೆ ಅಮೆರಿಕದಲ್ಲಿ ಸೋಂಕಿನಿಂದಾಗಿ 1300 ಜನ ಸಾವನ್ನಪ್ಪಿದ್ದಾರೆ.
ಅಮೆರಿಕ, ಕೊರೊನಾ ವೈರಸ್ ಪತ್ತೆ ಪರೀಕ್ಷೆಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಳಪಡಿಸುತ್ತಿದೆ. ಇದು ಕೊರೊನಾ ಸೋಂಕಿತ ಯಾವುದೇ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಿಂತಲೂ ದೊಡ್ಡ ಪ್ರಮಾಣದ್ದಾಗಿದ್ದು, ಈವರೆಗೆ 3.70 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ ಎಂಬುದಾಗಿ ಕೊರೊನಾ ವೈರಸ್ ಪ್ರತಿಕ್ರಿಯೆಗಳಿಗೆ ಶ್ವೇತ ಭವನದಲ್ಲಿ ನಿಯೋಜನೆಗೊಂಡಿರುವ ಡಾ. ಡಿಬೋರಾ ಬ್ರಿಕ್ಸ್ ತಿಳಿಸಿದ್ದಾರೆ.
ಆದರೆ ಸೋಂಕಿನ ಪ್ರಮಾಣ ಮಾತ್ರ ಅಮೆರಿಕದಲ್ಲಿ ವ್ಯಾಪಿಸುತ್ತಲೇ ಇದೆ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳದ ಅಧ್ಯಕ್ಷ ಟ್ರಂಪ್, ತಜ್ಞರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅವಶ್ಯಕತೆ, ಲಾಕ್ ಡೌನ್ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಎಷ್ಟೇ ಎಚ್ಚರಿಸಿದರೂ, ಎಲ್ಲರ ಸಲಹೆಗಳನ್ನು ಹಗುರವಾಗಿ ಪರಿಗಣಿಸಿದ್ದಾರೆ. ನಮ್ಮ ಜನರು ಕೈ ತೊಳೆದು ಕೊಳ್ಳುತ್ತಿದ್ದಾರೆ, ಹಸ್ತಲಾಘವ ಮಾಡುವುದನ್ನು ಬಿಟ್ಟಿದ್ದಾರೆ ಎಂಬ ವ್ಯಂಗ್ಯ ಭರಿತ ಮಾತುಗಳನ್ನು ಮುಂದುವರೆಸಿದ್ದಾರೆ.
ಈಗ ಅಮೆರಿಕಾ ಅತಿಹೆಚ್ಚು ಸೋಂಕು ಪೀಡಿತರನ್ನು ಹೊಂದಿರುವ ರಾಷ್ಟ್ರ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದರೂ, ಶುಕ್ರವಾರ ಶ್ವೇತ ಭವನದಲ್ಲಿ ಟ್ರಂಪ್, ಕೊರೊನಾ ಅಪಾಯಕಾರಿ ಸೋಂಕು ಅಲ್ಲ, ಇಂತಹ ಲಕ್ಷಾಂತರ ಪ್ರಕರಣಗಳು ನಮ್ಮ ಸುತ್ತಮುತ್ತ ನಡೆಯುತ್ತ ಇರುತ್ತದೆ. ಎಷ್ಟೋ ಜನರಿಗೆ ಸೋಂಕು ತಗುಲಿರುತ್ತದೆ. ನಾವೆಲ್ಲ ನಮ್ಮ ಕೆಲಸಗಳತ್ತ ಮುಖ ಮಾಡಬೇಕು. ನಾವು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದ ಕಾರಣ ಅಷ್ಟೊಂದು ಪ್ರಕರಣಗಳು ಪತ್ತೆಯಾಗಿದೆ. ಚೀನಾದಲ್ಲಿ ನಿಜವಾಗಿ ಎಷ್ಟು ಕೊರೊನಾ ಸೋಂಕು ಪೀಡಿತರಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ
ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...








