ಗಬ್ಬಾ ಟೆಸ್ಟ್ : ವಾಷಿಂಗ್ಟನ್ ಸುಂದರ್ ಬಳಿ ಇರಲಿಲ್ಲ ಪ್ಯಾಡ್ಸ್
ಗಬ್ಬಾ ಅಂಗಳದಲ್ಲಿ ಟೀಂ ಇಂಡಿಯಾ ಗೆಲುವಿನ ಹಬ್ಬ ಆಚರಿಸಲು ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಸುಂದರ್ ಬಳಿ ಬ್ಯಾಟಿಂಗ್ ಪ್ಯಾಡ್ಸ್ ಇರಲಿಲ್ಲ ಎಂಬ ವಿಚಾರ ಈ ಚರ್ಚೆಗೆ ಗ್ರಾಸವಾಗಿದೆ.
ಬ್ರಿಸ್ಪೇನ್ ಗೆಲುವಿನ ಬಗ್ಗೆ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್, ಅಶ್ವಿನ್ ಗಾಯಗೊಂಡ ಹಿನ್ನೆಲೆ ಗಬ್ಬಾ ಅಂಗಳದಲ್ಲಿ ನಡೆದ ಆಸೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸುಂದರ್ ಮೊದಲ ಟೆಸ್ಟ್ ಪಂದ್ಯವಾಡಿದ್ದರು. ಈ ಸಂದರ್ಭದಲ್ಲಿ ಅವರ ಬಳಿ ಬ್ಯಾಟಿಂಗ್ ಪ್ಯಾಡ್ಸ್ ಇರಲಿಲ್ಲ.
ಅವರಿಗಾಗಿ ಪ್ಯಾಡ್ಸ್ ಹುಡುಕಲು ಬಹಳ ಶ್ರಮಪಡಬೇಕಾಗಿತ್ತು. ಪಂದ್ಯ ಆರಂಭವಾದ ಬಳಿಕ ಅವರಿಗಾಗಿ ಹೊರಗಡೆ ಕ್ರಿಕೆಟ್ ಮಳಿಗೆಗೆ ತೆರಳಿ ಬಿಳಿ ಪ್ಯಾಡ್ಸ್ ಖರೀದಿಸಲಾಯಿತು ಎಂದು ತಿಳಿಸಿದರು.
ಇನ್ನು ಬ್ರೆಸ್ಪೇನ್ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಮೊದಲ ಇನ್ನಿಂಗ್ಸ್ ನಲ್ಲಿ 62 ರನ್ ಸಿಡಿಸಿದ್ದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಶಾರ್ದೂಲ್ ಜೊತೆಗೂಡಿ 7ನೇ ವಿಕೆಟ್ ಗೆ 123 ರನ್ ಜೊತೆಯಾಟವಾಡಿದ್ದರು. ಇನ್ನು ಎರಡನೇ ಇನ್ಸಿಂಗ್ಸ್ ನಲ್ಲಿ ಪಂತ್ ಉತ್ತಮ ಸಾಥ್ ನೀಡಿ 22 ರನ್ ಗಳಿಗಿಸಿದ್ದರು.
ಪಂತ್ ಜೊತೆ 55 ಎಸೆತಗಳಲ್ಲಿ 53 ರನ್ ಜೊತೆಯಾಟವಾಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel