ಆರ್ ಸಿಬಿಯಿಂದ ಸುಂದರ್ ಔಟ್ | ಆಕಾಶ್ ದೀಪ್ ಇನ್
ಬೆಂಗಳೂರ : ಐಪಿಎಲ್ ಪಂದ್ಯಾವಳಿಗಳು ಆರಂಭಕ್ಕೂ ಮುನ್ನ ಆರ್ ಸಿಬಿಗೆ ಹಿನ್ನಡೆಯಾಗಿದ್ದು, ತಂಡದಿಂದ ಆಲ್ ರೌಂಡರ್ ವಾಷಿಂಗ್ ಟನ್ ಸುಂದರ್ ಹೊರಬಿದ್ದಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ವಾಷಿಂಗ್ ಟನ್ ಸುಂದರ್, ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯಲಿರುವ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್ ಬದಲು ಬಂಗಾಳ ಬೌಲರ್ ಆಕಾಶ್ ದೀಪ್ ಗೆ ಅವಕಾಶ ಸಿಕ್ಕಿದೆ.
ಇನ್ನು ಸುಂದರ್, ಐಪಿಎಲ್ 14ನೇ ಋತುವಿನ ಮೊದಲ ಭಾಗದಲ್ಲಿ ತಂಡದ ಪರ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಬ್ಯಾಟಿಂಗ್ ಆರ್ಡರ್ ನಲ್ಲೂ ಪ್ರಮೋಷನ್ ನೀಡಲಾಗಿತ್ತು.
ಆರ್ ಸಿಬಿ ಪರ ವಾಷಿಂಗ್ ಟನ್ ಸುಂದರ್ ಉತ್ತಮ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸುಂದರ್, ಸಾಕಷ್ಟು ಬಾರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.









