1999ರ ಭಾರತ ಪ್ರವಾಸ ವಾಸೀಮ್ ಅಕ್ರಮ್‍ಗೆ ಯಾಕೆ ಇಷ್ಟವಾಗಿದ್ದು…!
1999ರಲ್ಲಿ ಚೆನ್ನೈ ಪ್ರೇಕ್ಷಕರು ನೀಡಿದ್ದ ಗೌರವವನ್ನು ಎಂದಿಗೂ ಮರೆಯೋಕೆ ಆಗಲ್ಲ- ವಾಸೀಮ್ ಅಕ್ರಮ್.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಅದರ ಗಮ್ಮತ್ತೇ ಬೇರೆ. ಸಾಂಪ್ರದಾಯಿಕ ಬದ್ಧವೈರಿಗಳ ನಡುವಿನ ಕದನ ಅಂತನೇ ಬಿಂಬಿಸುವ ಉಭಯ ತಂಡಗಳು ಜಿದ್ದಿಗೆ ಬಿದ್ದು ಆಡುತ್ತಿರುತ್ತವೆ. ಅಭಿಮಾನಿಗಳು ಸೇರಿದಂತೆ ತಂಡಗಳ ಆಟಗಾರರಿಗೂ ಇಲ್ಲಿ ಗೆಲುವೇ ಮುಖ್ಯವಾಗಿರುತ್ತದೆ. ಈ ಎರಡು ದೇಶಗಳ ನಡುವಿನ ಪಂದ್ಯವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿವೆ.
1990ರ ದಶಕಗಳಲ್ಲಂತೂ ಭಾರತ -ಪಾಕ್ ನಡುವಿನ ಪಂದ್ಯ ಅಂದ್ರೆ ಅದು ಯುದ್ಧದಂತೆ ಭಾಸವಾಗುತ್ತಿತ್ತು. ಎರಡು ತಂಡಗಳಲ್ಲೂ ಅಪ್ರತಿಮ ಆಟಗಾರರು ಇದ್ರು. ಇನ್ನು, ವಾಸೀಮ್ ಅಕ್ರಮ್, ವಕಾರ್ ಯೂನಸ್ ವೇಗದ ಬೌಲಿಂಗ್ ಜೊತೆಗೆ ಸಕ್ಲೇನ್ ಮುಷ್ತಾಕ್ ಅವರ ದೂಸ್ರಾ ಎಸೆತಗಳು ಅಬ್ಬಾ ಅನ್ನುವಂತೆ ಇರುತ್ತಿದ್ದವು. ಹಾಗೇ 1999ರಲ್ಲಿ ತುಂಬಾ ವರ್ಷಗಳ ನಂತರ ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿತ್ತು. ಅದ್ರಲ್ಲೂ ಚೆನ್ನೈ ಟೆಸ್ಟ್ ಪಂದ್ಯವನ್ನು ಆಗಿನ ಪಾಕ್ ನಾಯಕನಾಗಿದ್ದ ವಾಸೀಮ್ ಅಕ್ರಮ್ ಈಗಲೂ ನೆನಪಿಸಿಕೊಳ್ಳುತ್ತಾರೆ.
ಅದು 90ರ ದಶಕ. ಭಾರತ ತಂಡವನ್ನು ನಾವು ಸಾಕಷ್ಟು ಬಾರಿ ಸೋಲಿಸಿದ್ದೇವು. ಈಗೀನದ್ದು ಬೇರೆನೇ ಕಥೆ. ಅದೇನೇ ಇರಲಿ, ಭಾರತದ ಪ್ರವಾಸ ಅಂದಾಗ ನನಗೆ ನೆನಪಿಗೆ ಬರೋದು 1999ರ ಚೆನ್ನೈ ಟೆಸ್ಟ್ ಪಂದ್ಯ. ಯಾಕಂದ್ರೆ ನಾವು ಭಾರತಕ್ಕೆ 10 ವರ್ಷಗಳ ನಂತರ ಪ್ರವಾಸ ಕೈಗೊಂಡಿರುವುದು ಅಂತ ಹೇಳ್ತಾರೆ ಅಕ್ರಮ್.
ವಾಸೀಮ್ ಅಕ್ರಮ್ ನಾಯಕತ್ವದ ಪಾಕ್ ತಂಡ ಮೊದಲ ಟೆಸ್ಟ್ (ಚೆನ್ನೈ) ಪಂದ್ಯವನ್ನು ಗೆದ್ದುಕೊಂಡಿತ್ತು. ಅದು ಕೇವಲ 12 ರನ್ ಗಳಿಂದ. ಎರಡನೇ ಇನಿಂಗ್ಸ್ ನಲ್ಲಿ ಸಚಿನ್ ತೆಂಡುಲ್ಕರ್ ಅಮೋಘ ಶತಕ ಕೂಡ ದಾಖಲಿಸಿದ್ದರು. ಬೆನ್ನು ನೋವಿನ ನಡುವೆಯೂ ಸಚಿನ್ ಸಕ್ಲೇನ್ ಮುಷ್ತಾಕ್ ಅವರ ದೂಸ್ರಾ ಎಸೆತಗಳು ಸೇರಿದಂತೆ ಪಾಕ್ ಬೌಲರ್‍ಗಳಿಗೆ ಬೆವರು ಸುರಿಸಿದ್ರು. ಕೊನೆಗೂ ಸಚಿನ್ ಔಟಾಗುತ್ತಿದ್ದಂತೆ ಭಾರತದ ಗೆಲುವಿನ ಕನಸು ಕೂಡ ಭಗ್ನಗೊಂಡಿತ್ತು. ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಸೋತಿತ್ತು.
ನಾನು ಆಗ ಪಾಕ್ ತಂಡಕ್ಕೆ ನಾಯಕನಾಗಿದ್ದೆ. ಚೆನ್ನೈನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ. ನಾನು ನನ್ನ ಹುಡುಗರಿಗೆ ಹೇಳಿದ್ದೆ. ಕ್ರೀಡಾಂಗಣ ಶಾಂತವಾಗಿರುತ್ತೆ. ಭಾರತದಲ್ಲಿ ನಮಗೆ ಎಂದಿಗೂ ಬೆಂಬಲ ಸಿಗುವುದಿಲ್ಲ. ಹಾಗೇ ಪಾಕಿಸ್ತಾನದಲ್ಲಿ ಭಾರತಕ್ಕೆ ಬೆಂಬಲ ಸಿಗುವುದಿಲ್ಲ. ನಾವು ನಮ್ಮ ಕೆಲಸವನ್ನು ಮಾಡಬೇಕು ಅಷ್ಟೇ ಎಂದು ಹೇಳಿದ್ದೆ ಅಂತಾರೆ ವಾಸೀಮ್ ಅಕ್ರಮ್.
ಆ ಪಂದ್ಯದಲ್ಲಿ ಸಕ್ಲೇನ್ ಮುಷ್ತಾಕ್ ಅತ್ಯದ್ಭುತವಾಗಿ ಬೌಲಿಂಗ್ ಮಾಡಿದ್ದರು. ದೂಸ್ರಾ ಎಸೆತಗಳ ಮೂಲಕ ಭಾರತದ ಬ್ಯಾಟ್ಸ್ ಮೆನ್‍ಗಳನ್ನು ತಬ್ಬಿಬ್ಬುಗೊಳಿಸ್ತಾ ಇದ್ರು. ಆ ಪಂದ್ಯದಲ್ಲಿ ಗೆದ್ದಾಗ ನಮಗೆ ಚೆನ್ನೈ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ್ರು. ಇದು ನನ್ನ ಮನದಲ್ಲಿ ಇಂದಿಗೂ ನೆನಪಿನಲ್ಲಿದೆ. ಹೀಗಾಗಿ 1999ರ ಭಾರತ ಪ್ರವಾಸ ನನ್ನ ನೆಚ್ಚಿನ ಪ್ರವಾಸವಾಗಿದೆ ಎಂದು ಅಕ್ರಮ್ ಹೇಳಿದ್ದಾರೆ.
ಹಾಗೇ ಎರಡನೇ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್‍ನಲ್ಲಿ ಹತ್ತೂ ವಿಕೆಟ್‍ಗಳ ಸಾಧನೆ ಮಾಡಿದ್ದರು. ಅದು ಕೂಡ ಅವಿಸ್ಮರಣೀಯ ಪಂದ್ಯವಾಗಿತ್ತು ಅನ್ನುತ್ತಾರೆ ಅಕ್ರಮ್. ಈ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರಿಗೆ ಹತ್ತನೆಯವರಾಗಿ ಬಲಿಯಾಗಿದ್ದು ಕೂಡ ವಾಸೀಮ್ ಅಕ್ರಮ್ ಅವರೇ.
ಎರಡನೇ ಟೆಸ್ಟ್ ಪಂದ್ಯವನ್ನು ಭಾರತ
ಗೆದ್ದುಕೊಂಡಿತ್ತು. ಅಲ್ಲಿ ಅಂತರ 1-1g ಸಮಗೊಂಡಿತ್ತು. ಆದ್ರೆ ಕೊಲ್ಕತ್ತಾದಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡು ಸರಣಿಯಲ್ಲಿ 2-1ರಿಂದ ಜಯ ಸಾಧಿಸಿತ್ತು. ವಾಸೀಮ್ ಅಕ್ರಮ್ ಮಾತು ಮುಂದುವರಿಸುತ್ತಾ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಇರುವಂತಹ ಒತ್ತಡಗಳನ್ನು ನಾನು ತುಂಬಾನೇ ಎಂಜಾಯ್ ಮಾಡ್ತಾ ಇದ್ದೆ. ನಾನು ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ರು.
ಇನ್ನು ನಾನು ಇಂಗ್ಲೆಂಡ್ ಮತ್ತು
ಆಸ್ಟ್ರೇಲಿಯಾದಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದೆ. ಭಾರತದಲ್ಲಿ ಪ್ರದರ್ಶನ ನೀಡಿರುವುದಕ್ಕೂ ಬೇರೆನೇ ಕಾರಣವಿರುತ್ತದೆ. ಯಾಕಂದ್ರೆ ಭಾರತದ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿದಾಗ ನಮ್ಮ ದೇಶದಲ್ಲಿ ಹೆಚ್ಚು ಸಮಯ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹಾಗೇ ಅದು ಭಾರತದಲ್ಲೂ ಅಷ್ಟೇ ಎನ್ನುವ, ಅಕ್ರಮ್ ಜಿಮ್‍ನಲ್ಲಿ ಕಸರತ್ತು ನಡೆಯಲು ಹೆಚ್ಚಿನ ಆಸಕ್ತಿ ಇರಲಿಲ್ಲ ಅಂತಾರೆ.
ನಾನು ನನ್ನ 33ರ ಹರೆಯದಲ್ಲಿ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿದೆ. ಅದಕ್ಕಿಂತ ಮುನ್ನ ನಾನು ಪ್ರತಿ ದಿನ ಓಡುತ್ತಿದೆ. ಬೌಲಿಂಗ್ ಮಾಡುತ್ತಿದೆ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಆಟಗಾರರು ಹೆಚ್ಚು ಫಿಟ್ ಆಗಿರುತ್ತಾರೆ. ಆದ್ರೆ ಬೌಲಿಂಗ್ ಮಾಡಿದಾಗ ಮಾತ್ರ ಹೆಚ್ಚು ಶಕ್ತಿಯಾಗಲು ಸಾಧ್ಯ. ನಾನು ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ನನಗೆ ಏನು ಅನ್ನಿಸುತ್ತಿರಲಿಲ್ಲ. ಜನರು ಅದಕ್ಕಾಗಿ ನನಗೆ ಹೇಳುತ್ತಿದ್ದರು, ನೀನು 90ರ ಹುಡುಗ ಅಂತ ಎಂಬುದನ್ನು ಈ ಸಂದರ್ಭದಲ್ಲಿ ವಾಸೀಮ್ ಅಕ್ರಮ್ ನೆನಪಿಸಿಕೊಂಡ್ರು








