ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಗೆ ವಾಸೀಂ ಟಕ್ಕರ್ wasim-jaffer saaksha tv
ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ತೀವ್ರ ಮುಖಭಂಗ ಅನುಭಿಸಿದೆ. ಐದು ಮ್ಯಾಚ್ ಗಳ ಸರಣಿಯಲ್ಲಿ ಸತತ ಮೂರು ಮ್ಯಾಚ್ ಗಳನ್ನು ಗೆದ್ದು ಆಸ್ಟ್ರೇಲಿಯಾ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇತ್ತ ಮೂರಕ್ಕೆ ಮೂರು ಪಂದ್ಯಗಳನ್ನ ಸೋತಿರುವ ಇಂಗ್ಲೆಂಡ್ ತಂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಮೂರನೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಕೇವಲ 68 ರನ್ ಗಳಿಗೆ ಆಲೌಟ್ ಆಗಿದ್ದು, ಭಾರಿ ಮುಜುಗರ ಅನುಭವಿಸಿದೆ.
ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ವಾಸೀಂ ಜಾಫರ್, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಗೆ ಸಕತ್ ಟಾಂಗ್ ನೀಡಿದ್ದಾರೆ. ಏನು 100 ರನ್ ಒಳಗೆ ತಂಡ ಆಲೌಟ್ ಆಗುತ್ತಾ.. ಎಂಬ ವಾನ್ ಮಾಡಿದ್ದ ಟ್ವೀಟ್ ಗೆ ಕೌಂಟರ್ ಕೊಟ್ಟಿದ್ದಾರೆ.
2019ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 92 ರನ್ ಗಳಿಗೆ ಆಲೌಟ್ ಆಗಿತ್ತು. ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ವಾನ್.
92 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್, ಈ ಕಾಲದಲ್ಲೂ ಯಾವುದಾದ್ರೂ ಒಂದು ತಂಡ 100 ಒಳಗೆ ಆಲೌಟ್ ಆಗುತ್ತಾ..? ಎಂದು ವ್ಯಂಗ್ಯವಾಡಿದ್ದರು.
ಇದೀಗ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ 68 ರನ್ ಗಳಿಗೆ ಆಲೌಟ್ ಆಗಿದ್ದು, ವಾನ್ ಅವರನ್ನು ವಾಸೀಂ ಸಖತ್ ಟ್ರೋಲ್ ಮಾಡಿದ್ದಾರೆ. ಇದಕ್ಕೆ ವಾನ್ ವೆರಿ ಗುಡ್ ವಾಸೀಂ ಎಂದು ಫನ್ನಿ ಎಮೋಜಿ ಟ್ವೀಟ್ ಮಾಡಿದ್ದಾರೆ.