ನವದೆಹಲಿ : ವಾರಕ್ಕೆ 20 ಗಂಟೆ ಟಿವಿ ನೋಡಿ, 65 ಸಾವಿರ ರೂ.ವೇತನ ಪಡೀರಿ..!!! ಹೌದು, ಟಿವಿ ನೋಡೋದು ಯಾರಿಗೆ ಇಷ್ಟ ಇಲ್ಲ ಹೇಳಿ. ಪತ್ರಿ ಒಬ್ಬರು ಒಂದಲ್ಲಾ ಒಂದು ಸಮಯದಲ್ಲಿ ಟಿವಿ ನೋಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಟಿವಿ ನೋಡೋದನ್ನೇ ಕೆಲಸವನ್ನಾಗಿಸಿಕೊಂಡು ಬಿಟ್ಟಿರುತ್ತಾರೆ. ಅಂಥವರಿಗೆ ಕಂಪನಿಯೊಂದು ಪ್ರತಿ ವಾರ 20 ಗಂಟೆ ಟಿವಿ ನೋಡುವುದಕ್ಕಾಗಿಯೇ 65 ಸಾವಿರ ರೂ. ವೇತನ ನೀಡುತ್ತಿದೆ.
ಆನ್ ಬೈ ಎಂಬ ಕಂಪನಿ ಇಂತಹ ಪಾರ್ಟ್ ಟೈಮ್ ಜಾಬ್ ಕಲ್ಪಿಸಿದೆ. ಆದ್ರೆ ಈ ಕೆಲಸಕ್ಕೆ ಉತ್ತಮ ಬರವಣಿಗೆಯ ಕೌಶಲ್ಯ, ಇಂಗ್ಲಿಷ್ ನಲ್ಲಿ ಮಾತನಾಡುವವರೇ ಆಗಿರಬೇಕು. ಜೊತೆಗೆ ವಯಸ್ಸು 18 ವರ್ಷ ಮೀರಬೇಕು. ಹೀಗೆ ಕೆಲವು ನಿಯಮಗಳನ್ನು ಕಂಪನಿ ವಿಧಿಸಿದೆ. ಇದಕ್ಕೆ ಒಪ್ಪಿದರೆ ನೀವು ಪಾರ್ಟ್ ಟೈಮ್ ಜಾಬ್ ಮಾಡಬಹುದಾಗಿದೆ.
ಅಲ್ಲದೆ ಈ ಕೆಲಸ ಮಾಡಲು ಬಯಸುವವರು ಟಿವಿ, ಕ್ಯಾಮೆರಾ, ಸ್ಮಾರ್ಟ್ ಸಾಧನ, ಹೆಡ್ ಫೋನ್ ಮತ್ತು ಹೋಮ್ ಸಿನಿಮಾ ವ್ಯವಸ್ಥೆಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ ಹೊಂದಿಬೇಕು.
ಒಂದು ವೇಳೆ ನೀವು ಕೆಲಸಕ್ಕೆ ಆಯ್ಕೆಯಾದರೆ ಉತ್ಪನ್ನ ಪುಟವನ್ನು ಆನ್ ಬೈ ಸೈಟ್ ನಲ್ಲಿ ಪರೀಕ್ಷಿಸಲು ಪ್ರತಿ ತಿಂಗಳು ಉತ್ಪನ್ನಗಳ ಆಯ್ಕೆಯನ್ನು ಪಡೆಯುತ್ತೀರಿ. ಉತ್ಪನ್ನಗಳ ವಿನ್ಯಾಸ, ಕಾರ್ಯಕ್ಷಮತೆ, ಬಾಳಿಕೆ, ಧ್ವನಿ, ಪ್ರದರ್ಶನ, ಕಾರ್ಯಕ್ಷಮತೆ ಮತ್ತು ಹಣದ ಮೌಲ್ಯವನ್ನು ಪರೀಕ್ಷಿಸಬೇಕು. ಬಳಿಕ ನೀವು ಪರೀಕ್ಷಿಸಿದ ಉತ್ಪನ್ನದ ಬಗ್ಗೆ 200 ಪದಗಳ ವಿಮರ್ಶೆಯನ್ನು ಬರೆಯಬೇಕು. ಹೀಗೆ ಮಾಡಿದರೆ ನಿಮಗೆ ಆನ್ ಬೈ ಎಂಬ ಕಂಪನಿ 65 ಸಾವಿರ ರೂಪಾಯಿ ವೇತನ ನೀಡಲಿದೆ.