ಭೂ ಕಬಳಿಕೆ, ಅತಿಕ್ರಮಣ, ಪುಸ್ತಕ ಕಳ್ಳತನ, ವಿದ್ಯುತ್ ಕಳ್ಳತನ, ಪ್ರತಿಮೆ ಕಳ್ಳತನ, ಎಮ್ಮೆ ಕಳ್ಳತನ, ಮೇಕೆ ಕಳ್ಳತನಕ್ಕಾಗಿ ಹೀಗೆ ಹತ್ತು ಹಲವು ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೊಲೀಸ್ ರಿಗೆ ಚಳ್ಳೆ ಹಣ್ಣು ತಿನ್ನಿಸುತಿದ್ದ ಸಮಾಜವಾದಿ ಲೋಕಸಭಾ ಸದಸ್ಯ ಅಜಮ್ ಖಾನ್ ಕೋರ್ಟ್ ನಿಂದ ಯಾವುದೇ ನಿರೀಕ್ಷಣಾ ಜಾಮೀನು ಸಿಗದ ಕಾರಣ ಕೋರ್ಟ್ ಗೆ ಬುಧವಾರ ಶರಣಾಗಿದ್ದಾನೆ . ಇದೀಗ ಜೈಲಿನಲ್ಲಿ ತನ್ನನ್ನು ಅಮಾನವೀಯ ರೀತಿಯಲ್ಲಿ, ಭಯೋತ್ಪಾದಕನಂತೆ ನೋಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾನೆ. ಸೀತಾಪುರ ಜೈಲ್ ನಿಂದ ರಾಂಪುರ ನ್ಯಾಯಾಲಕ್ಕೆ ವಿಚಾರಣೆಗೆ ಕರೆದುಕೊಂಡು ಹೋಗಬೇಕಾದರೆ ಅಜಂ “ಬಹುತ್ ಅಮಾನ್ವಿಯಾ ಬರ್ತವ್ ಹುವಾ ಹೈ ಸಾಥ್,” ಎಂದು ಪೊಲೀಸ್ ರ ಮೇಲೆ ಚೀರಾಡಿದ್ದಾನೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಖಾನ್ ನ ಶಾಸಕಿ ಪತ್ನಿ ತಂಝೀನ್ ಫಾತಿಮಾ ಮತ್ತು ಅವರ ಮಗ,ಅನರ್ಹ ಶಾಸಕ ಅಬ್ದುಲ್ಲಾ ಅಜಮ್ ಅವರನ್ನು ಕೂಡ ಇಂದೊಂದು ಕೇಸ್ ವಿಚಾರಣೆಗೆ ಬಿಗಿ ಭದ್ರತೆಯ ನಡುವೆ ಕರೆದುಕೊಂಡು ಹೋಗಲಾಯಿತು. ಅಬ್ದುಲ್ಲಾ ಆಜಮ್ ವಿರುದ್ಧ ಜನ್ಮ ದಿನಾಂಕದ ದಾಖಲೆಗಳಲ್ಲಿ ನಕಲಿ ಪ್ರಕರಣ ದಾಖಲಾಗಿತ್ತು. ಇವರೆಲ್ಲ ಬುಧವಾರ ಕೋರ್ಟ್ ಗೆ ಶರಣಾಗಿದ್ದರು. ನ್ಯಾಯಾಲಯ ಹೆಚ್ಚಿನ ವಿಚಾರಣೆ ನಡೆಸಲು ಮಾರ್ಚ್ 2 ತನಕ ನ್ಯಾಯಾಂಗ ಬಂದಕ್ಕೆ ಆದೇಶ ನೀಡಿತ್ತು . ರಾಂಪುರದಿಂದ ಶೀತಪುರ ಜೈಲಿಗೆ ಗುರುವಾರ ವರ್ಗಾಯಿಸಲಾಗಿದೆ.
ಅಬ್ದುಲ್ಲಾ ಅಜಮ್ 2017 ಚುನಾವಣೆಯಲ್ಲಿ ನಕಲಿ ಜನನ ಪ್ರಮಾಣ ಪತ್ರ ನಮೂದಿಸಿದ ಕಾರಣ ಕೋರ್ಟ್ ಡಿಸೆಂಬರ್ ನಲ್ಲಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇದೆ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ಸಹ ಕಳೆದುಕೊಂಡರು.
ಅಜಮ್ ಖಾನ್ ರಾಂಪುರ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯಾದ ಕುಲಪತಿಗಳಾಗಿದ್ದಾಗ ಸುತ್ತಮುತ್ತ ಭೂ ಕಬಳಿಕೆ, ಅತಿಕ್ರಮಣ ಆರೋಪ ಕೇಳಿಬಂದಿತ್ತು. ಖಾನ್ ಕುಟುಂಬವು ನ್ಯಾಯಾಲಯಗಳು ತಮ್ಮ ವಿರುದ್ಧ ಸಲ್ಲಿಸಿದ ವಿವಿಧ ಪ್ರಕರಣಗಳಲ್ಲಿ ಸಮನ್ಸ್ ಅನ್ನು ನಿರ್ಲಕ್ಷಿಸುತ್ತಿತ್ತು, ಇದರ ಪರಿಣಾಮವಾಗಿ ಅವರ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.