ವಿಜಯಪುರ : ಭಾರಿ ಮಳೆ ಹಿನ್ನೆಲೆ ಮಹಾರಾಷ್ಟ್ರದಿಂದ ಭೀಮಾ ( Bhima ) ನದಿಗೆ ಹೆಚ್ಚುವರಿ ನೀರು ಹರಿಸುತ್ತಿರುವ ಕಾರಣ ಕ್ಷಣ ಕ್ಷಣಕ್ಕೂ ಭೀಮಾ ( Bhima ) ನದಿ ಉಕ್ಕಿ ಆರ್ಭಟಿಸುತ್ತಿದೆ.
ಭೀಮಾ ನದಿಗೆ ಸೊನ್ನ ಬ್ಯಾರೇಜ್ ನಿಂದ 8 ಲಕ್ಷ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ, ಕುಮಸಗಿ ಗ್ರಾಮಗಳು ನೀರಿನಿಂದ ಸುತ್ತುವರೆದಿದೆ.
ಈ ಗ್ರಾಮಗಳ ಮನೆಗಳಿಗೆ ನೀರು ಆವರಿಸಿ, ಮನೆಗಳು ಮುಳುಗಡೆಯಾಗಿದ್ದು, ಕುಮಸಗಿ ಗ್ರಾಮಸ್ಥರು ಮನೆಗಳ ಮೇಲೇರಿ ಜೀವ ಉಳಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಕೃಷ್ಣ ನದಿ ತೀರದ 17 ಗ್ರಾಮಗಳಲ್ಲಿ ಪ್ರವಾಹ ಭೀತಿ
ಇನ್ನು ದೇವಣಗಾಂವದ ಬಸ್ ನಿಲ್ದಾಣ, ಪಶು ಚಿಕಿತ್ಸಾಲಯ, ಪ್ರಗತಿಪರ ಶಿಕ್ಷಣ ಸಂಸ್ಥೆ ಕಾಲೇಜು ಆವರಣ, ಮಹಿಳಾ ಆರೋಗ್ಯ ಕೇಂದ್ರ, ಗ್ರಂಥಾಲಯ, ಭೀಮಾ ನದಿಯ ನೀರು ಮಾಪನ ಕೇಂದ್ರೀಯ ತಂತಿ ಕೇಂದ್ರ, ಅಂಗನವಾಡಿ ಕೇಂದ್ರ ನೀರಿನಿಂದ ಆವೃತವಾಗಿದೆ.
ಇತ್ತ ಕಲಬುರಗಿ ಜಿಲ್ಲೆಯ ಅಫಜಲಪುರ – ದೇವಣಗಾಂವ ಸೇತುವೆಯ ಎತ್ತರಕ್ಕೆ ನೀರು ಹರಿಯುತ್ತಿದ್ದು, ಮೇಲ್ಭಾಗಕ್ಕೆ ತಲುಪಲು ಅರ್ಧ ಅಡಿ ಮಾತ್ರ ಬಾಕಿ ಇದೆ.
ಇದನ್ನೂ ಓದಿ : ಮುಂದಿನ ವಾರ ರಾಜ್ಯದಲ್ಲಿ ಎರಡು ದಿನ ಮಳೆ ಸಾಧ್ಯತೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel