ಬಳ್ಳಾರಿ: ನಾವು ನಾಯಿ ಜಾತಿಯವರು, ಹೇಗೆ ನಾಯಿ ಮನೆಯ ಊಟ ತಿಂದ ಮೇಲೆ ನಿಯತ್ತಿನಿಂದ ಇರ್ತದೋ ಹಾಗೆ ನಾವು, ಸಮಾಜಕ್ಕೆ ಒಳಿತಾಗಲಿ ಎಂದು ಹೋರಾಟ ಮಾಡುತ್ತಿದ್ದೇವೆ ಎನ್ನುವ ಮೂಲಕ ಸಚಿವ ಈಶ್ವರಪ್ಪ ಹಾಗೂ ಬಿಎಸ್‍ವೈ ಪುತ್ರ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಬಳ್ಳಾರಿಯಲ್ಲಿ ಮಾತನಾಡಿರುವ ಯತ್ನಾಳ್, ಹೋರಾಟ ಮಾಡಿದ್ರೆ ಏನೂ ಸಿಗೋದಿಲ್ಲಾ ಅಂದಿದ್ದ ಹಾಲುಮತದ ಒಬ್ಬ ಸಚಿವ ಇಂದು ಹೋರಾಟಕ್ಕೆ ಇಳಿದಿದ್ದಾರೆ. ಈಗ್ಯಾಕೆ ಮೀಸಲಾತಿ ಕೊಡಿ ಅಂತ ಹೋರಾಟಕ್ಕೆ ಬಂದ್ರು ಎಂದು ಹೆಸರು ಹೇಳದೇ ಸಚಿವ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೋರಾಟದಿಂದಲೇ ಇಂದು ಏನೇಲ್ಲಾ ಪಡೆಯೋಕೆ ಸಾಧ್ಯವಾಗಿದೆ, ಹೋರಾಟ ಮಾಡಿದ ಕಾರಣಕ್ಕೆ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಮೂಲಕ ನಾಯಿ ಜಾತಿಯ ವಿಷಯವನ್ನು ತಳಕು ಹಾಕಿದ್ದಾರೆ.

ಒಂದೇ ಮಾತು ಇರಬೇಕು, ಆಗೋಂದು, ಈಗೊಂದು ಇರಬಾರದು. ಇಂದು ಪಂಚಮಸಾಲಿ, ಹಾಲುಮತ, ವಾಲ್ಮೀಕಿ ಸಮಾಜಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ಮಾಡುತ್ತಿವೆ. ಆದ್ರೆ ಇಂದು ಮಾಧ್ಯಮಗಳು ತುಪ್ಪದ ಬೆಡಗಿ, ಯುವರಾಜನ ಹಿಂದೆ ಓಡುತ್ತಿವೆ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾರಾದ್ರೂ ಮಂತ್ರಿಯಾಗ್ತಾರೆ, ಮತ್ತೊಬ್ಬರು ಸಿಎಂ( ವಿಜಯೇಂದ್ರ) ಆಗ್ತಾರೆ ಅಂತ ಅರ್ಧ ಗಂಟೆ ಪ್ರೋಗ್ರಾಂ ಮಾಡ್ತಾರೆ. ಅದನ್ನು ಮಾಣಿಕ್ಯ ಮಾಡಿಸಿದ ಅಂತ ಮಾಧ್ಯಮಗಳು ಹೇಳ್ತಾವೆ, ಹೋಗಳ್ತಾವೆ, ಇಂತಹ ಪ್ರೋಗ್ರಾಂಗಳಿಗೆ ಎಷ್ಟು ಹಣ ಅಂತ ನನಗೆ ಗೊತ್ತಿದೆ. ಕೆಲವೊಮ್ಮೆ ನಾಟಕ ಕಂಪನಿಗಳು ಯಾವ್ಯಾವ ರೀತಿಯಲ್ಲಿ ಕೆಲಸ ಮಾಡ್ತಾವೆ ಅಂತ ಗೊತ್ತಿದೆ ಎಂದು ಯತ್ನಾಳ್ ಗುಡುಗಿದ್ದಾರೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಕೆಲವರು ಸಮಾಜದ ಹೆಸರು ಹೇಳಿ ಮಂತ್ರಿಗಳಾಗಿದ್ದಾರೆ, ಅವರು ಸಮಾಜಕ್ಕೆ ಬದ್ಧರಾಗಿರಬೇಕು. ಸರ್ಕಾರ ಪಂಚಮಸಾಲಿ ಮಠಕ್ಕೆ 20 ಲಕ್ಷ ಹಣ ಕೊಟ್ಟಿದ್ದು, ಆ ಹಣವನ್ನು ಅವರ ಮುಖದ ಮೇಲೆ ಎಸೆಯಬೇಕು ಎಂದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಬಸನಗೌಡ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








