ನಮ್ಮದು ಡಕೋಟಾ ಬಸ್ಸಲ್ಲ : ಸಿದ್ದರಾಮಯ್ಯಗೆ ರಾಮುಲು ಟಾಂಗ್
ರಾಯಚೂರು : ನಮ್ಮದು ಡಕೋಟಾ ಬಸ್ ಅಲ್ಲ, ಸೂಪರ್ ಫಾಸ್ಟ್ ಜೆಟ್ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಶ್ರೀ ರಾಮುಲು ಟಾಂಗ್ ನೀಡಿದ್ದಾರೆ.
ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಡಕೋಟಾ ಬಸ್ ಅಂತ ಟೀಕೆ ಮಾಡಿದ್ದರು.
ಇದಕ್ಕೆ ಮಸ್ಕಿಯಲ್ಲಿ ಪ್ರತಿಕ್ರಿಯೆ ನೀಡಿದ ರಾಮುಲು, ನಮ್ಮದು ಡಕೋಟಾ ಬಸ್ ಅಲ್ಲ, ಸೂಪರ್ ಫಾಸ್ಟ್ ಜೆಟ್.
ನಮ್ಮ ಯಡಿಯೂರಪ್ಪನವರು ಜೆಟ್ ಪೈಲೆಟ್ ಇದ್ದಂಗೆ. ಆ ಜೆಟ್ ನಲ್ಲಿ ಕುಳಿತು ನಾವೆಲ್ಲ ಪ್ರಯಾಣ ಮಾಡುತ್ತಿದ್ದೇವೆ.
ಜೆಟ್ ಎಷ್ಟು ವೇಗವಾಗಿ ಹೋಗುತ್ತೋ ಅದೇ ಮಾದರಿಯಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಸಚಿವ ಸ್ಥಾನ ವಿಚಾರವಾಗಿ ಮಾತನಾಡಿ, ಉಪಚುನಾವಣೆ ಬಳಿ ಕಲ್ಯಾಣ ಕರ್ನಾಟಕದ ಇಬ್ಬರು ಮೂವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ತಿಳಿಸಿದರು.
ಇನ್ನು ಎಸ್ ಟಿ ಮೀಸಲಾತಿಗೆ ಕುರುಬ ಸಮುದಾಯದ ಸಮಾವೇಶದ ಬಗ್ಗೆ ಮಾತನಾಡಿ, ಮೀಸಲಾತಿಗಾಗಿ ಕುರುಬ ಹಾಗೂ ಪಂಚಮಸಾಲಿಯವರು ಹೋರಾಟ ಮಾಡುತ್ತಿದ್ದಾರೆ.
ಆದ್ರೆ ಕುರುಬರನ್ನು ಎಸ್ ಟಿಗೆ ಸೇರಿಸಲು ಒಂದಿಷ್ಟು ಲೀಗಲ್ ತೊಡಕುಗಳಿವೆ. ಕುಲಶಾಸ್ತ್ರದ ಅಧ್ಯಯನದ ಬಳಿಕ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









