ಗೋ ಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿಲ್ಲ : ಸಿದ್ದರಾಮಯ್ಯ
ಬಾಗಲಕೋಟೆ : ರಾಜ್ಯ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರಕಿದ್ದು, ಗೋ ಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿಲ್ಲ. ಆದ್ರೆ ಅದಕ್ಕೂ ಮುನ್ನ ತಜ್ಞರ ಜೊತೆ ಚರ್ಚಿಸಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಾಧಕ ಬಾಧಕಗಳ ಅರಿವಿಲ್ಲದೇ ಭಾವನಾತ್ಮಕವಾಗಿ ಕಾಯ್ದೆ ಮಾಡಿದ್ರೆ ಫ್ಯಾಶಿಸಂ ಆಗುತ್ತೆ. ವಯಸ್ಸಾದ ಜಾನುವಾರು ರೈತರು ಇಟ್ಟುಕೊಂಡು ಏನು ಮಾಡಬೇಕು.
ಕಾನೂನಿನ ಅನ್ವಯ ಅವುಗಳನ್ನು ಗೋಶಾಲೆಯಲ್ಲಿ ಇರಿಸಬೇಕು. ಅದಕ್ಕೆ ರೈತರು ಹಣ ಕೊಡಬೇಕು ಅನ್ನುತ್ತಾರೆ. ರೈತರು ಯಾಕೆ ದುಡ್ಡು ಕೊಡಬೇಕು. ಬದಲಿಗೆ ಸರ್ಕಾರವೇ ಖರೀದಿಸಲಿ ಎಂದು ಅಭಿಪ್ರಾಯಪಟ್ಟರು.
ಇನ್ನು ಗೋಹತ್ಯೆ ನಿಷೇಧ ಯಡಿಯೂರಪ್ಪ ಅವರ ಕಾರ್ಯಕ್ರಮವಲ್ಲ. ಬದಲಿಗೆ ಅರ್ ಎಸ್ ಎಸ್ ನವರದ್ದು. ಅವರೇ ಸಿಎಂ ಮೇಲೆ ಒತ್ತಡ ಹಾಕಿ ಕಾಯ್ದೆ ಜಾರಿಗೊಳಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಆರ್.ಅಶೋಕ್ ಅವರ ” ಸಿದ್ದರಾಮಯ್ಯ ರಾಸುಗಳನ್ನು ನನ್ನ ಮನೆಗೆ ಕಳುಹಿಸಿ” ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರಿಗೆ ನಾನೇಕೆ ರಾಸುಗಳನ್ನು ಕಳಿಸಲಿ, ರೈತರ ಹತ್ತಿರ ಹೋಗಿ ಅವರೇ ದುಡ್ಡು ಕೊಟ್ಟು ತೆಗೆದುಕೊಳ್ಳಲಿ ಎಂದು ಹೇಳಿದ್ರು.
ಬಳಿಕ ಬಿಜೆಪಿಗರ ಗೋ ಪೂಜೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸಗಣಿ ಎತ್ತೋದು, ಗಂಜಲ ಗೂಡಿಸೋದು, ಮೇವು, ಬೆರಣಿ ತೆಗೆಯೋದು, ಹಾಲು ಹಾಕೋದು ರೈತರು. ವಿಧಾನಸೌಧದ ಎದುರು ನಿಲ್ಲಿಸಿಕೊಂಡು ಪೂಜೆ ಮಾಡುವ ಇವರದ್ದೇನು ಕೆಲಸ ಎಂದು ವ್ಯಂಗ್ಯವಾಡಿದರು.
ಒಂದು ವೇಳೆ ಇವರಿಗೆ ಗೋವುಗಳ ಬಗ್ಗೆ ನಿಜವಾಗಲೂ ಪ್ರೀತಿ ಇದ್ದರೆ ಕೇಂದ್ರ ಸರ್ಕಾರ ಮೊದಲು ಗೋ ಮಾಂಸ ರಫ್ತು ನಿಲ್ಲಿಸಲಿ. ದೇಶದ ಮಾಂಸ ರಫ್ತಿನಲ್ಲಿ ಶೇ 75ರಷ್ಟು ದನದ ಮಾಂಸದ ಪಾಲು ಇದೆ. ಗೋಮಾಂಸ ರಫ್ತು ಮಾಡುವ ಲಾಲ್, ಗಫೂರ್‍ಗಳು ಇವರೆಲ್ಲಾ ಬಿಜೆಪಿ ಬೆಂಬಲಿಗರೇ ಆಗಿದ್ದಾರೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
https://www.youtube.com/watch?v=PJXAUYUadFg









