ನವದೆಹಲಿ : ಸಾಂಕ್ರಾಮಿಕ ಪಿಡುಗು ಕೋವಿಡ್ 19 ನ ಕೆಟ್ಟ ಹಂತವನ್ನು ಭಾರತ ದಾಟಿದೆ, ಹೀಗಿದ್ದರೂ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ನಾವು ಕೆಟ್ಟ ಹಂತ ದಾಟಿದ್ದೇವೆ, ಆದರೆ ಇನ್ನೂ ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿಲ್ಲ, ಲಾಕ್ ಡೌನ್ ನಿಂದಾಗಿ ಬೇರೆ ದೇಶಗಳಿಗಿಂತ ಭಾರತದ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ. ಸದ್ಯ ಮೂರನೇ ಹಂತದ ಲಾಕ್ ಡೌನ್ ನಲ್ಲಿ ನಾವಿದ್ದೇವೆ, ಲಾಕ್ ಡೌನ್ ನಿಂದಾಗಿ ಕೊರೊನಾ ಹರಡುವ ಪ್ರಮಾಣ ಕಡಿಮೆಯಾಗುತ್ತದೆ, ಹೀಗಾಗಿ ಮತ್ತೆ 2 ವಾರಗಳ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು “ಈ ಸೋಂಕು ಚೀನಾದಿಂದ ಬಂದಿದೆ. ಆದರೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಹಾಗಾಗಿ ಕೊರೊನಾದಿಂದ ವಿಭಿನ್ನವಾಗಿ ಬದುಕಬೇಕಿದೆ. ಮುಖಕ್ಕೆ ಮಾಸ್ಕ್ ಧರಿಸುವುದು, ಪದೇ ಪದೇ ಕೈ ತೊಳೆಯುವುದು, ಸಾಮಾಜಿಕ ಅಂತರ ಪಾಲಿಸಬೇಕಿದೆ. ಕಳೆದ 40 ದಿನಗಳ ಲಾಕ್ ಡೌನ್ ನಲ್ಲಿ ಸಮಾಜವು ಈ ಬಗ್ಗೆ ಚೆನ್ನಾಗಿ ಕಲಿತುಕೊಂಡಿದೆ” ಎಂದಿದ್ದಾರೆ.







