ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ನಾಳೆ ಕರೆನೀಡಿರುವ ಕರ್ನಾಟಕ ಬಂದ್ ಕೈಬಿಡುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರಿನ ಶಕ್ತಿಭವನದಲ್ಲಿ ಮಾತನಾಡಿದ ಸಿಎಂ, ಸರೋಜಿನಿ ಮಹಿಷಿ ವರದಿ ಜಾರಿಗೆ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಸಂಘಟನೆಗಳ ಜೊತೆ ಮಾತನಾಡಲು ಸಿದ್ಧನಿದ್ದೇನೆ. ವರದಿ ಸಂಬಂಧ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ನಾನು ಕನ್ನಡಿಗ, ಕನ್ನಡಿಗರ ಹಿತ ಕಾಯಲು ಬದ್ಧನಿದ್ದೇನೆ. ನಾಳೆ ಬೇಕಿದ್ದರೆ ನನ್ನ ಇಡೀ ಕಾರ್ಯಕ್ರಮ ರದ್ದು ಮಾಡಲು ಸಿದ್ದ. ನಮ್ಮ ಮನೆಗೆ ಬಂದು ಎಲ್ಲರೂ ಮಾತನಾಡಲಿ ಎಂದು ಹೇಳಿದ ಸಿಎಂ, ನಾಳೆ ಕರೆದಿರುವ ಬಂದ್ ನಿಲ್ಲಿಸಿ ಸಾರ್ವಜನಿಕರ ಸುಖಜೀವನಕ್ಕೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.








