ಬೆಂಗಳೂರು : ಮೈಶುಗರ್ ಕಾರ್ಖಾನೆಗೂ ಮಂಡ್ಯ ಜಿಲ್ಲೆಗೂ ಭಾವನಾತ್ಮಕ ಸಂಬಂಧವಿದೆ. ಅದು ವ್ಯಾಪಾರದ ವಸ್ತು ಆಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರು ನಡೆಸಬಹುದು ಎಂದಾದರೆ ಸರ್ಕಾರಕ್ಕೆ ಮೈಶುಗರ್ ಕಾರ್ಖಾನೆಯನ್ನು ನಡೆಸಲು ಆಗುವುದಿಲ್ಲವಾ ? ಏನಾದರೂ ನ್ಯೂನತೆ ಇದ್ದರೆ ಸರಿ ಮಾಡಕೊಂಡು ಕಾರ್ಖಾನೆ ನಡೆಸಬೇಕು.
ಖಾಸಗಿಯವರಿಗೆ ಕೊಡಬಾರದು. ಸರ್ಕಾರದ 300 ಎಕರೆ ಆಸ್ತಿ ಅದು. ಹಾಗಾಗಿ ಖಾಸಗಿಯವರಿಗೆ ಕೊಡಬಾರದು. ಒಂದು ವೇಳೆ ಸರ್ಕಾರಕ್ಕೆ ಮೈಶುಗರ್ ಕಾರ್ಖಾನೆ ನಡೆಸಲು ಆಗುವುದಿಲ್ಲ ಎಂದು ಹೇಳಿದರೇ ನಮ್ಮ ಕೇಳಲಿ. ಹೇಗೆ ಕಾರ್ಖಾನೆ ನಡೆಸಬೇಕು ಎಂದು ಸರ್ಕಾರಕ್ಕೆ ಹೇಳಿ ಕೊಡುತ್ತೇವೆ ಎಂದು ಸರ್ಕಾರವನ್ನು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದರು.








