ಬೆಂಗಳೂರು : ಬೆಂಗಳೂರು ನಗರ ಪೊಲೀಸರು ದೊಡ್ಡ ಮಟ್ಟದಲ್ಲಿ ಸಂಗ್ರಹಿಸಲಾಗಿದ್ದ ಅತ್ಯಾಧುನಿಕ, ಅತ್ಯಂತ ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ನಗರದ ಸುದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಈ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲಾಗಿತ್ತು. ಇದರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಅವುಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ಮೊಹಮ್ಮದ್ ಜುನೈದ್, ಮಹಮ್ಮದ್ ತಬ್ರೇಜ್ ಅಹಮ್ಮದ್ ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ.
ವಿನಾಶಕಾರಿ ಸ್ಟನ್ ಗನ್ ಮಾದರಿಯ 7 ಪೈರ್ ಆರ್ಮ್ಸ್, 9 ಎಂಎಂ ಮಾದರಿಯ 11 ಪಿಸ್ತೂಲುಗಳು, 303 ಮಾದರಿಯ 10 ಬಂದೂಕುಗಳು ಸೇರಿ ಒಟ್ಟು 28 ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಾರಿ ದೊಡ್ಡ ಸಂಖ್ಯೆಯ ಮತ್ತು ಆಧುನಿಕ ವಿನಾಶಕಾರಿ ಶಸ್ತ್ರಾಸ್ತ್ರಗಳು ಬಂದದ್ದು ಎಲ್ಲಿಂದ, ಯಾವ ಕಾರಣಕ್ಕೆ ಅವನ್ನು ಇಟ್ಟುಕೊಳ್ಳಲಾಗಿತ್ತು ಎಂಬಿತ್ಯಾದಿ ಮಾಹಿತಿ ಪೊಲೀಸರಿಂದ ನಿರೀಕ್ಷಿಸಲಾಗಿದೆ.
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...








