ಹಿಜಾಬ್ ಧರಿಸುವುದು ಇಸ್ಲಾಂ ಮಹಿಳೆಯರಿಗೆ ಅವಶ್ಯವಾದ ವಿಚಾರವಲ್ಲ: ಆರಿಫ್ ಮೊಹಮ್ಮದ್ ಖಾನ್ Saaksha Tv
ಕೇರಳ: ಮಹಿಳೆಯರು ಧರಿಸುವ ಹಿಜಾಬ್ ಬಗ್ಗೆ ಕುರಾನ್ ನಲ್ಲಿ 7 ಬಾರಿ ಉಲ್ಲೇಖವಿದೆ. ಆದರೆ ಇದು ಇಸ್ಲಾಂಗೆ ಅವಶ್ಯವಾದ ಅಥವಾ ಅನಿವಾರ್ಯವಾದ ವಿಚಾರವಲ್ಲ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದರು.
ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ತೀವ್ರ ವಿವಾದದ ಹಿನ್ನೆಲೆಯಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಹಿಜಾಬ್ ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಂತರ್ಗತವಾಗಿಲ್ಲ ಪಟ್ಟಭದ್ರ ಹಿತಾಸಕ್ತಿಗಳು ಯುವ ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಧರಿಸುವ ಹಕ್ಕಿಗಾಗಿ ಪ್ರತಿಭಟಿಸಲು ಪ್ರಚೋದಿಸುತ್ತಿವೆ ಎಂದು ಹೇಳಿದ್ದಾರೆ.
ಅಲ್ಲದೇ ಇಂಥವರು ಮುಸ್ಲಿಂ ಮಹಿಳೆಯರನ್ನು ಅಂಧಕಾರದ ಯುಗಕ್ಕೆ ತಳ್ಳಲು ಬಯಸುತ್ತಾರೆ, ಇಂತಹ ಪ್ರಚೋದನೆಗೆ ಒಳಗಾಗಬೇಡಿ, ಓದಿನ ಕಡೆ ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಆರಿಫ್ ಮೊಹಮ್ಮದ್ ಖಾನ್ ಎಂದು ವಿಶೇಷ ಸಂದರ್ಷನದಲ್ಲಿ ಹೇಳಿದ್ದಾರೆ.