ಮದ್ವೆ ಮನೇಲಿ ಡ್ಯಾನ್ಸ್ ಮಾಡುವಂತೆ ಎಳೆದಾಟ : ರೊಚ್ಚಿಗೆದ್ದ ವಧು ಮಾಡಿದ್ದೇನು ಗೊತ್ತಾ..?
ಲಕ್ನೋ : ಮದುವೆ ಸಮಾರಂಭದಲ್ಲಿ ವರನ ಸ್ನೇಹಿತರು ಡ್ಯಾನ್ ಮಾಡುವಂತೆ ಎಳೆದಾಡಿದ ಕಾರಣ ವಧು ವಿವಾಹವನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಶುಕ್ರವಾರ ವಧು ಹಾಗೂ ಆಕೆಯ ಕುಟುಂಬಸ್ಥರು ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ವಧು ವರರ ಇಬ್ಬರೂ ಪದವಿಧರರಾಗಿದ್ದು, ಬರೇಲಿ ಹಾಗೂ ಕಣ್ಣುಜ್ ಮೂಲದವರಾಗಿದ್ದಾರೆ.
ಇನ್ನು ಮದ್ವೆ ಸಮಾರಂಭದ ಸಂಗೀತ್ ವೇಳೆ ವರನ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನ ಎಳೆದಿದ್ದಾರೆ. ಇದಕ್ಕೆ ವಧು ಕೋಪಗೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎರಡೂ ಕಡೆಯವರ ಬಗ್ಗೆ ವಾಗ್ವಾದ ನಡೆದಿದೆ. ಬಳಿಕ ಇದು ತಾರಕಕ್ಕೇರಿದ್ದು, ಮದುವೆ ಕ್ಯಾನ್ಸಲ್ ಮಾಡಲಾಗಿದೆ. ಅಲ್ಲದೆ ವಧು ಮನೆಗೆ ವಾಪಸ್ ಆಗಿದ್ದು, ವರನ ವಿರುದ್ಧ ವಧುವಿನ ಕುಟುಂಬಸ್ಥರು ವರದಕ್ಷಿಣ ದೂರು ದಾಖಲಿಸಿದ್ದಾರೆ.
ಆ ಬಳಿಕ ಪೊಲೀಸರು ಮಾತುಕತೆ ಮೂಲಕ ಸಂಧಾನ ಮಾಡಿದ್ದಾರೆ. ಈ ಮಧ್ಯೆ ಭಾನುವಾರ ವರನ ಕುಟುಂಬಸ್ಥರು ವಧುವಿನ ಕುಟುಂಬದರವನ್ನು ಮನವೊಲಿಸಲು ಯತ್ನಿಸಿ ಸರಳ ವಿವಾಹ ಏರ್ಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದಕ್ಕೆ ಯುವತಿ ನೋ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









