ಹಾರ ಬದಲಿಸಿಕೊಂಡ ಕೆಲವೇ ಗಂಟೆಯಲ್ಲಿ ವಧು ಸಾವು… ಸಹೋದರಿ ಜೊತೆಗೆ ಮದುವೆ
ಉತ್ತರಪ್ರದೇಶ : ಕೆಲವೇ ಕೆಲವು ಹೊತ್ತಿನಲ್ಲಿ ಮದುವೆ ಮನೆ ಸಾವಿನ ಮನೆಯಾಗಿ ಪರಿವರ್ತನೆಯಾಗಿ , ಮದುವೆ ಮನೆಯಲ್ಲಿ ಗೋಳಾಟ , ದುಃಖ ಆವರಿಸಿಬಿಟ್ಟಿತ್ತು.. ಹಾರ ಬದಲಿಸಿಕೊಂಡ ಕೆಲವೇ ಗಂಟೆಯಲ್ಲಿ ವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.. ಇಂತಹ ಮನಕಲಕುವ ಘಟನೆ ಉತ್ತರ ಪ್ರದೇಶದ ಇಟವಾದ ಸಮಸಪುರದಲ್ಲಿ ನಡೆದಿದೆ.
ಸುರಭಿ ಎಂಬಾಕೆಗೆ ಮಂಜೇಶ್ ಎಂಬಾತನ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಮೇ 25ರ ಸಂಜೆ ವರ ಸೇರಿದಂತೆ ಆತನ ಕುಟುಂಬಸ್ಥರು ವಧು ನಿವಾಸಕ್ಕೆ ಆಗಮಸಿದ್ದರು. ಸಂಜೆ ಜೋಡಿ ಈ ಜೋಡಿ ಹಾರ ಬದಲಿಸಿಕೊಂಡಿದ್ದರು. ಇದಾದ ಬಳಿಕ ಸಿಂಧೂರ ಹಚ್ಚುವ ರಿವಾಜು ಮುಗಿದಿದ್ದರೆ ಇಬ್ಬರು ಪತಿ ಪತ್ನಿಗಳಾಗಿ ಹೊಸ ಜೀವನಕ್ಕೆ ಕಾಲಿಡುವುದಕ್ಕೆ ಹೆಚ್ಚು ಸಮಯ ಬಾಕಿ ಇರಲಿಲ್ಲ.. ವಧು – ವರ ಇಬ್ಬರ ಸಂಬಮಧಿಕರೂ ಖುಷಿಯಲ್ಲಿದ್ದರು. ಆದ್ರೆ ವಿಧಿ ಆಟ ಬೇರೆಯೇ ಇತ್ತು..
ಇನ್ನೇನು ಸಪ್ತಪದಿ ತುಳಿಯಬೇಕು ಎನ್ನುವಷ್ಟರಲ್ಲೇ ವಧು ಸುರಭಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಪೋಷಕರು ಸಮೀಪದ ವೈದ್ಯರನ್ನ ಕರೆಸಿ ತಪಾಸಣೆ ನಡೆಸಿದ್ದಾರೆ. ಆದ್ರೆ ಅಷ್ಟರಲ್ಲಾಗ್ಲೇ ಆಕೆ ಹೃದಯಾಘಾತದಿಂದ ಸಾವನ್ನಪ್ಪಿರೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಆದ್ರೆ ವಧು ಸಾವನ್ನಪ್ಪುತ್ತಿದ್ದಂತೆ ಕುಟುಂಬಸ್ಥರು ಆಕೆಯ ಸಹೋದರಿಯ ಜೊತೆಗೆ ಮಂಜೇಶ್ ಜೊತೆಗೆ ಮದುವೆ ಮಾಡಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








