ಬೆಂಗಳೂರು : ಕಲ್ಯಾಣ ಮಂಟಪಗಳು ಬುಕ್ಕಿಂಗ್ ಹಣ ವಾಪಾಸ್ ಕೊಡಬೇಕು ಎಂದು ಕಂದಾಯ ಆರ್. ಅಶೋಕ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಕುಟುಂಬಗಳು ಮದುವೆ ಮಾಡುಲು ಕಲ್ಯಾಣ ಮಂಟಪಗಳನ್ನು ಬುಕ್ಕಿಂಗ್ ಮಾಡಿರುತ್ತಾರೆ. ಲಾಕ್ ಡೌನ್ ನಿಂದಾಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆಸಲು ಆಗಿರುವುದಿಲ್ಲ. ಹಾಗಾಗಿ ಟ್ಯಾಕ್ಸ್ ಕಡಿತ ಮಾಡಿಕೊಂಡು ಉಳಿದ ಹಣವನ್ನು ಕುಟುಂಬಗಳಿಗೆ ವಾಪಾಸ್ ಕೊಡಬೇಕು. ಒಂದು ವೇಳೆ ಕುಟುಂಬದವರು ಮದುವೆಗೆ ಬೇರೆ ದಿನಾಂಕ ನಿಗದಿ ಮಾಡಿದ್ದರೇ ಆ ದಿನ ಕಲ್ಯಾಣಮಂಟಪದಲ್ಲಿ ಮದುವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ
ಈ ಬಗ್ಗೆ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಕಳೆದು ಎರಡು ತಿಂಗಳಲ್ಲಿ ಸಾವಿರಾರು ಮದುವೆಗಳಿಗೆ ಮುಹೂರ್ತ ಫಿಕ್ಸ್ ಆಗಿತ್ತು. ಹಾಗಾಗಿ ಮದುವೆ ಮಾಡಲು ಕುಟುಂಬದವರು ಕಲ್ಯಾಣ ಮಂಟಪಗಳನ್ನು ಬುಕ್ ಮಾಡಿದ್ದರು. ಲಾಕ್ ಡೌನ್ ನಿಂದಾಗಿ ಕೆಲವು ಮದುವೆಗಳು ಮುಂದೂಡಲ್ಪಟ್ಟರೆ ಇನ್ನೂ ಕೆಲವು ಮದುವೆಗಳು ಕುಟುಂಬದ ಸದಸ್ಯರೇ ಸೇರಿ ಮುದವೆ ಮಾಡಿದ್ದಾರೆ. ಆದ್ದರಿಂದ ಕಲ್ಯಾಣಮಂಟಪ್ಪದವರು ಕುಟುಂಬದವರಿಗೆ ಹಣ ವಾಪಾಸ್ ನೀಡಬೇಕು ಎಂದು ಸರ್ಕಾರ ಹೇಳಿದೆ.








