ವೀಕೆಂಡ್ ಕರ್ಫ್ಯೂ ಜಾರಿ: ನಷ್ಟದಲ್ಲಿರುವ ವ್ಯಾಪಾರಸ್ತರು Saaksha Tv
ಮಂಡ್ಯ: ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೊರೊನಾಗೆ ಸಕ್ಕರೆ ನಾಡಿನ ಜನ ಎಚ್ಚೆತ್ತುಕೊಂಡಿದ್ದಾರೆ. ನಗರದಲ್ಲಿ ಸಾರ್ವಜನಿಕರು ಆಚೆಗೆಬಂದಿಲ್ಲ. ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ವಿರಳವಾಗಿದೆ.
ಹಾಗೇ ಅಗತ್ಯ ಸೇವೆ ಖರೀದಿಗೆ ಹೊರತುಪಡಿಸಿ ಉಳಿದೆಲ್ಲವುಗಳನ್ನು ಬಂದ್ ಮಾಡಲಾಗಿದೆ. ಅಂಗಡಿಗೆ ಗ್ರಾಹಕರಿಲ್ಲದೆ ವ್ಯಾಪಾರಸ್ಥರು ಬಣಗುಡುತ್ತಿದ್ದಾರೆ. ಸಾವಿರಾರು ರೂಪಾಯಿಗಳಷ್ಟು ಬಂಡವಾಳ ಹಾಕಿ ಖರಿದಿದಾರರು ಇಲ್ಲದೆ ನಿರಾಶೆಗೊಂಡ ಅಂಗಡಿ ಮಾಲಿಕರು. ಜನರನ್ನು ನಂಬಿ ಬಂಡವಾಳ ಹಾಕಿದ್ದ ತರಕಾರಿ ವ್ಯಾಪಾರಸ್ಥರಿಗೆ ನಷ್ಟವುಂಟಾಗಿದೆ.
ಅಲ್ಲದೇ ಬೆಳಿಗ್ಗೆಯಿಂದ ಒಂದೇ ಒಂದು ರೂಪಾಯಿ ವ್ಯಾಪಾರ ಇಲ್ಲದೆ ಕಂಗಾಲಾಗಿದ್ದಾರೆ. ಕರ್ಫ್ಯೂ ಜಾರಿ ಮಾಡಿ ವ್ಯಾಪಾರಕ್ಕೆ ಅವಕಾಶ ಕೊಟ್ರೆ ಜನರು ಹೇಗೆ ಬರುತ್ತಾರೆ. ಲಾಕ್ ಮಾಡುವುದರಿದ್ದರೆ ಸಂಪೂರ್ಣ ಮಾಡಲಿ, ಇದರಿಂದ ನಮಗೆ ಬಂಡವಾಳ ಹಾಕೋದು ತಪ್ಪುತ್ತದೆ. ಬಂಡವಾಳ ಹಾಕಿ ಜನ ಬಾರದಿದ್ದರೆ ನಷ್ಟವಾಗುತ್ತದೆ ಎಂದು ವ್ಯಾಪಾರಸ್ತರು ತಮ್ಮ ಅಳಲನ್ನು ತೋಡಿಕೊಂಡರು.