ವೀಕೆಂಡ್ ಕರ್ಫ್ಯೂ : ಗುಲ್ಬರ್ಗಾ ವಿವಿ ಪರೀಕ್ಷೆ ರದ್ದು Weekend Curfew
ಕಲಬುರಗಿ : ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಗುಲ್ಬರ್ಗಾದಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ 14ರ ವರೆಗೆ ನಡೆಯಬೇಕೆದ್ದ ಪರೀಕ್ಷೆಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ ರದ್ದುಪಡಿಸಿದೆ.
ದಿನಾಂಕ 7, 8 ಮತ್ತು 14.08.2021ರ ವರೆಗಿನ ನಡೆಯಬೇಕಿದ್ದ ಪರೀಕ್ಷೆಗಳನ್ನು ವೀಕೆಂಡ್ ಕರ್ಫ್ಯೂ ಕಾರಣ ರದ್ದುಪಡಿಸಲಾಗಿದ್ದು, ತಿಂಗಳ 27ರ ಬಳಿಕ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ವಿವಿಯ ಮೌಲ್ಯಮಾಪನ ಕುಲಪತಿಗಳು ತಿಳಿಸಿದ್ದಾರೆ.
ಇನ್ನುಳಿದ ಎಲ್ಲಾ ಪರೀಕ್ಷೆಗಳು ಈ ಮುಂಚೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಯಾವುದೇ ಬದಲಾವಣೆ ಇಲ್ಲದೆ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 8 ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಅದರಂತೆ ಗಡಿ ಜಿಲ್ಲೆಯಾದ ಕಲಬುರಗಿಯಲ್ಲಿ ಶುಕ್ರವಾರದಿಂದ ಸೋಮವಾರ ಬೆಳಗಿನ ಜಾವದವರಗೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸ್ನಾ ಆದೇಶ ಜಾರಿಮಾಡಿದ್ದಾರೆ.









