ಪ್ರಪಂಚದಲ್ಲೇ ವಿಚಿತ್ರ ನಿಯಮಗಳು, ಕಾನೂನುಗಳು…! ಭಾಗ -1
ಭಾರತ ಸೇರಿ ಪ್ರಪಂಚದಲ್ಲಿ ಅನೇಕ ವಿಚಿತ್ರ ಹಾಗೂ ಕಠಿಣ ಕಾನೂನುಗಳು ನಿಯಮಗಳಿವೆ. ಕೆಲವೊಂದು ತೀರಾನೆ ವಿಚಿತ್ರ ಎನಿಸಿದ್ರು, ಇವುಗಳು ಇರೋದಂತು ಸತ್ಯ. ಅಂತಹದ್ದೇ ಕೆಲ ಕಾನೂನುಗಳು, ಯಾವ ದೇಶಗಳಲ್ಲಿ ಜಾರಿಯಾಗಿವೆ. ಯಾತಕ್ಕಾಗಿ ಈ ಕಾನೂನುಗಳಿವೆ ಅನ್ನೋದನ್ನ ತಿಳಿಯೋಣ.
ಸಿಂಗಾಪುರ : ಚೀವಿಂಗಮ್ ಅಗೆಯುವುದು ಕಾನೂನುಬಾಹಿರ ( ಅಪರಾಧ)
ಸಾಮಾನ್ಯವಾಗಿ ಪ್ರಪಂಚದ ಎಲ್ಲೆಡೆ ಬಹುತೇಕ ಜನರು ಚೀವಿಂಗಮ್ ಅಗೆಯುತ್ತಾರೆ. ನಮ್ಮ ಭಾರತದಲ್ಲೂ ಇದು ಕಾಮನ್. ಆದ್ರೆ ಇದು ಸಿಂಗಾಪುರದಲ್ಲಿ ಇಲ್ಲೀಗಲ್ ಅಂದ್ರೆ ನೀವು ನಂಬ್ಲೇ ಬೇಕು. ಹೌದು ಸಿಂಗಾಪುರದಲ್ಲಿ 1992ರಲ್ಲಿ ಎಲ್ಲಾ ರೀತಿಯಾದ ಚೀವಿಂಗಮ್ ಅಗೆಯುವುದನ್ನ , ಮಾರಾಟ ಮಾಡುವುದನ್ನ, ತಯಾರಿಸುವುದನ್ನ ನಿಷೇಧಿಸಲಾಗಿದೆ. ಹೀಗೆ ಮಾಡಿದಲ್ಲಿ ದಂಡ ಅಥವ ಜೈಲು ಶಿಕ್ಷೆ ವಿಧಿಸಲಾಗುತ್ತದೆ. – ಇದಕ್ಕೆ ಕಾರಣ ಚೀವಿಂಗಮ್ ಗಳನ್ನ ರಸ್ತೆಯಲ್ಲಿ ಸ್ವಚ್ಛಗೊಳಿಸುವುದು ಬಹಳವೇ ಕಷ್ಟ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗ್ರೀಸ್ ನ ಅಕ್ರೋಪೋಲಿಸ್ : ಈ ಪ್ರದೇಶದಲ್ಲಿ ಹೈ ಹೀಲ್ಸ್ ಧರಿಸುವಿಕೆಯನ್ನ ಬ್ಯಾನ್ ಮಾಡಲಾಗಿದೆ.
ಹೌದು 2009ರಲ್ಲಿ ಇಲ್ಲಿ ಹೈ ಹೀಲ್ಸ್ ಗಳನ್ನ ಬ್ಯಾನ್ ಮಾಡಲಾಗಿದೆ. ಯಾರಾದರೂ ಹೈ ಹೀಲ್ಸ್ ಧರಿಸಿದ್ದು ಕಂಡುಬಂದ್ರೆ ಅಂಥವರಿಗೆ ದಂಡ ಅಥವ ಜೈಲು ಶಿಕ್ಷೆಯೂ ಆಗಬಹುದು. ಇದರಿಂದಾಗಿ ಪಾದಗಳಿಗೆ ಹಾನಿಯಾಗಬುದೆಂಬ ಕಾರಣಕ್ಕೆ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಶ್ರೀಲಂಕಾ : ಬುದ್ಧನ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ…!
ಇತ್ತೀಚೆಗೆ ಸೆಲ್ಫಿ ಕ್ರೇಜ್ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರ ವರೆಗೂ ಇದೆ. ಎಲ್ಲಾ ಜಾಗಗಳಲ್ಲೂ ಸೆಲ್ಫಿ ತೆಗೆದುಕೊಳ್ಲೋ ಕ್ರೇಜ್ ಇರುತ್ತೆ. ಆದ್ರೆ ಶ್ರೀಲಂಕಾದಲ್ಲಿ ಬುದ್ಧನ ಜೊತೆಗೆ ಸೆಲ್ಫಿ ತೆಗೆದುಕೊಳ್ಳೋ ಮುನ್ನ ಎಚ್ಚರ. ಇಲ್ಲಿ ಬುದ್ಧನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ್ರೆ ಅದು ಕಾನೂನುಬಾಹಿರ. ಆದ್ರೆ ಕೆಲವೆಡೆ ಮಾತ್ರವೇ ಈ ಕಾನೂನು ಲಾಗೂ ಆಗುತ್ತೆ. – ಇನ್ನೂ ಬುದ್ಧನಿಗೆ ಬೆನ್ನು ತೋರಿಸಿ ಬುದ್ಧನ ಕಡೆ ಬೆರಳು ಮಾಡಿ ತೋರಿಸಿಕೊಂಡು ಸೆಲ್ಫಿ ತೆಗೆದುಕೊಳ್ಳಬಾರದು. ಹೀಗೆ ಮಾಡೋದ್ರಿಂದ ಬುದ್ಧನಿಗೆ ಅಪಮಾನವಾದಂತೆ ಎಂಬುದು ಈ ನಿಯಮದ ಹಿಂದಿನ ಉದ್ದೇಶ.
ನಿಮ್ಮ ಮನೆಯಲ್ಲೂ ವಾಸ್ತು ದೋಷವೇ..? ತಪ್ಪದೇ ವಾಸ್ತು ಶಾಂತಿ ಪೂಜೆ ಮಾಡಿ..!
ಡೆನ್ಮಾರ್ಕ್ : ಮಾಸ್ಕ್ ಧರಿಸಿದ್ರೆ ಶಿಕ್ಷೆ ಕಾಯಂ
ಕೊರೊನಾ ಹಾವಳಿಯಿಂದ ಇಡೀ ಪ್ರಪಂಚದಲ್ಲಿ ಜನರು ಮಾಸ್ಕ್ ಇಲ್ಲದೇ ಮನೆಯಿಂದ ಆಚ ಬರುತ್ತಿಲ್ಲ.. ಆದ್ರೆ ಡೆನ್ಮಾರ್ಕ್ ನಲ್ಲಿ ಒಂದು ಕಾನೂನಿದೆ. ಅದೇನೆಂದ್ರೆ ಇಲ್ಲಿನ ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಹೆಲ್ಮೆಟ್, ಸ್ಕಾರ್ಫ್, ಹ್ಯಾಟ್ಸ್, ನಕಲಿ ದಾಡಿಗಳು, ಅಷ್ಟೇ ಯಾಕೆ ಬುರ್ಕಾಗಳನ್ನ ಧರಿಸೋ ಹಾಗಿಲ್ವಂತೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗಳನ್ನ ಮುಚ್ಚಿಕೊಂಡು ಓಡಾಡಿದ್ರೆ ಅದು ಅಪರಾಧವಂತೆ. ಈ ವಿವಾದಾತ್ಮಕ ಕಾನೂನು 2018ರಲ್ಲಿ ಜಾರಿಯಾಯ್ತು. ಇದಕ್ಕೆ ಹಲವು ವಿರೋಧಗಳು ಸಹ ವ್ಯಕ್ತವಾಗಿದ್ದವು. – ಅಂದ್ಹಾಗೆ ಕೆಲವು ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿರುವವರ ಪತ್ತೆ ಹಚ್ಚುವಿಕೆಗೆ ಜನರ ಮಧ್ಯೆಯೂ ಅಂತವರನ್ನ ಗುರುತಿಸುವ ಸಲುವಾಗಿ ಇಂತಹ ಕಾನೂನನ್ನ ಜಾರಿ ಮಾಡಲಾಗಿದೆಯಂತೆ.
ಆಸ್ಟ್ರೇಲಿಯಾ : ಗಾಳಿಪಟ ಹಾರಿಸುವುದು ಅಪರಾಧ
ನಮ್ಮಲ್ಲಿ ಸಾಮಾನ್ಯವಾಗಿ ಗಾಳಿಪಟ ಹಾರಿಸೋದನ್ನ ಎಲ್ಲರೂ ಇಷ್ಟ ಪಡ್ತೇವೆ. ಇದಕ್ಕಾಗಿ ಮೇಳವನ್ನೂ ಸಹ ಹಮ್ಮಿಕೊಳ್ಳಲಾಗುತ್ತೆ. ಆದ್ರೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಾಳಿಪಟ ಹಾರಿಸುವುದು ಕಾನೂನು ಬಾಹಿರವಾಗಿದೆ. ಹೌದು – ಇತರರಿಗೆ ತೊಂದರೆಯಾಗುವ ಸಾಧ್ಯತೆಯಿಂದ ಈ ಕಾನೂನನ್ನ ತರಲಾಗಿದೆ.
ಜಪಾನ್ : ಕತ್ತಲಾದ ನಂತರ ಅಂದ್ರೆ ಮಧ್ಯರಾತ್ರಿಯಲ್ಲಿ ಡ್ಯಾನ್ಸ್ ಮಾಡುವುದು ಅಪರಾಧ
ಹೌದು.. ಅಮೆರಿಕಾದ ಸೈನಿಕರು ಜಪಾನ್ ನ ವಶಪಡಿಸಿಕೊಂಡಿದ್ದ ವೇಳೆ ಅಂದ್ರೆ 1948 ರಲ್ಲಿ ಈ ಕಾನೂನನನ್ನ ತರಲಾಗಿತ್ತು. – ಜಪಾನ್ ನ ಒಳ್ಳೆಯ ಸಂಸ್ಕøತಿಯನ್ನ ಅಮೇರಿಕನ್ನರು ಹಾಳು ಮಾಡ್ತಿದ್ದಾರೆಂಬ ಉದ್ದೇಶಕ್ಕೆ ಈ ನಿಯಮ ಜಾರಿ ಮಾಡಲಾಗಿತ್ತು. ಆದ್ರೆ 2015ರಲ್ಲಿ ಈ ನಯಮವನ್ನ ಹಿಂಪಡೆಯಲಾಯಿತಾದರೂ ಮಧ್ಯರಾತ್ರಿಯಲ್ಲಿ ಡ್ಯಾನ್ಸ್ ಮಾಡಿದರೂ ಕತ್ತಲಲ್ಲಿ ನೃತ್ಯ ಮಾಡಿದ್ರೆ ತಕ್ಕ ದಂಡ ತೆರಬೇಕಾಗುತ್ತೆ. ‘
ಪಾಸಿಟಿವ್ ( ಸಕಾರಾತ್ಮಕ ) ಆಲೋಚನೆಗಳನ್ನ ಹೇಗೆ ರೂಢಿಸಿಕೊಳ್ಳಬೇಕು… ಈ ಟಿಪ್ಸ್ ಅನುಸರಿಸಿ..!
ರೋಮ್ : ನಾಯಿಗಳನ್ನ ಪ್ರತಿನಿತ್ಯ ವಾಕಿಂಗ್ ಮಾಡಿಸಲೇಬೇಕು
ರೋಮ್ ನಲ್ಲಿ ಪ್ರಾಣಿಗಳ ಹಿಂಸೆಯನ್ನ ತೀವ್ರವಾಗಿ ವಿರೋಧಿಸಲಾಗುತ್ತೆ. ಇಲ್ಲಿ ಪ್ರತಿನಿತ್ಯ ಸಾಕುನಾಯಿಗಳನ್ನ ವಾಕಿಂಗ್ ಕರೆದುಕೊಂಡು ಹೋಗಲೇಬೇಕು. ಇಲ್ಲದೇ ಇದ್ದ ಪಕ್ಷದಲ್ಲಿ 65 ಡಾಲರ್ ತಂಡ ತೆರಬೇಕಾಗಹುದು. ಇದು ಮಿನಿಮನ್. ಇನ್ನೂ ಹೆಚ್ಚಾಗಲೂಬಹುದು. ಅಷ್ಟೇ ಯಾಕೆ ಗೋಲ್ಡ್ ಫಿಶ್ ಗಳನ್ನ ಚಿಕ್ಕ ಬೌಲ್ ಅಥವ ಸಣ್ಣ ಅಕ್ವೇರಿಯಮ್ ನಲ್ಲಿ ಸಾಕುವಂತಿಲ್ಲ. ಬದಲಾಗಿ ದೊಡ್ಡ ಅಕ್ವೇರಿಯಮ್ ಅಥವ ಸ್ವಿಮ್ಮಿಂಗ್ ಫೂಲ್ ಗಳಲ್ಲೇ ಸಾಕಬೇಕು. ಇಲ್ಲ ತಂಡ ತೆರಬೇಕಾಗುತ್ತೆ.
ಸ್ಪೇನ್ : ಮರಳಿನ ಕಟ್ಟಡಗಳನ್ನ ಕಟ್ಟುವುದು ಅಪರಾಧ
ಸ್ಪೇನ್ ನಲ್ಲಿ ಸಮುದ್ರದ ಪಕ್ಕದಲ್ಲಿ ಮರಳಿನ ಕಾಸ್ಟಲ್ಸ್ ಅಥವ ಬ್ಯುಲ್ಡಿಂಗ್ಸ್ ಗಳನ್ನ ಕಟ್ಟುವುದು ಅಪರಾಧ. ಹೀಗೆ ಮಾಡಿದಲ್ಲಿ ಫೈನ್ ಕಟ್ಟಬೇಕಾಗುತ್ತೆ. ಮಕ್ಕಳು ಸಹ ಈ ಈ ರೀತಿಯಾದ ಮರಳಿನ ಕಟ್ಟಗಳನ್ನ ಕಟ್ಟುವಂತಿಲ್ಲ. ಹಾಗೆ ಮಾಡಿದ ಪಕ್ಷದಲ್ಲಿ ಪೋಷಕರು ತಂಡ ಕಟ್ಟಬೇಕು.
ವಾಟ್ಸಾಪ್ ಕಲರ್ ಅಲ್ಲ.. ನಿಮ್ಮ ಕಲರ್ ಚೇಂಜ್ ಆಗ್ಬಿಡುತ್ತೆ ಹುಷಾರ್..!
ಬೋಲಿವಿಯಾ : ಇಲ್ಲಿ ವಿವಾಹಿತ ಮಹಿಳೆಯರು ಒಂದಕ್ಕಿಂತ ಹೆಚ್ಚು ಕಪ್ ವೈನ್ ಸೇವಿಸುವಂತಿಲ್ಲ.
ಮದುವೆಯಾಗದ ಯುವತಿಗರಿಗೆ ಈ ಕಾನೂನು ಲಾಗೂ ಆಗೋದಿಲ್ಲ. ಆದ್ರೆ ಮದುವೆಯಾದ ಮಹಿಳೆಯರು ಮಾತ್ರ ಒಂದಕ್ಕಿಂತ ಹೆಚ್ಚು ಕಪ್ ವೈನ್ ಸೇವನೆ ಮಾಡುವಂತಿಲ್ಲ. ಅದ್ರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಆಲ್ಕೋಹಾಲ್ ಕುಡಿಯೋದು ಕಂಡು ಬಂದ್ರೆ ಅವರ ಪತಿ ಡೈವೋರ್ಸ್ ಸಹ ಕೊಡಬಹುದಾದ ಕಾನೂನು ಇದೆ. – ಇನ್ನೂ ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಮಹಿಳೆಯರು ತಪ್ಪು ದಾರಿ ಹಿಡಿಯಬಹುದೆಂಬ ನಂಬಿಕೆಯಿಂದ ಈ ಕಾನೂನು ಜಾರಿ ಮಾಡಲಾಗಿದೆ ಎನ್ನಲಾಗಿದೆ.
ಜಾರ್ಜಿಯಾ : ನಿಮ್ಮ ಸಾಕು ಕೋಳಿಗಳು ರಸ್ತೆ ದಾಟಿದ್ರೆ ಅಪರಾಧ
ಈ ದೇಶದಲ್ಲಿ ಜನರು ಅವರು ಸಾಕಿದ ಕೋಳುಗಳು ರಸ್ತೆ ದಾಟಿದ್ರೆ. ಅಪರಾಧ. ಇದಕ್ಕೆ ಸೂಕ್ತ ದಂಡವನ್ನೂ ತೆರಬೇಕಾಗುತ್ತೆ . ಕೋಳಿಗಳು ಕಳವಾದರೂ ಸಹ ನೀವು ಫೈನ್ ಕಟ್ಟಬೇಕಾಗುತ್ತೆ.
ಇಟಲಿ : ದಿನಕ್ಕೆ 3 ಬಾರಿ ನಾಯಿಗಳನ್ನ ವಾಕಿಂಗ್ ಕರೆದೊಯ್ಯುವುದು
ಇಟಲಿಯ ಟ್ಯೂರಿನ್ ನಲ್ಲಿ ಈ ನಿಯಮವನ್ನ ಜನರ ಫಾಲೋ ಮಾಡ್ಬೇಕಿದೆ. ದಿನಕ್ಕೆ 3 ಬಾರಿ ನಾಯಿಗಳನ್ನ ವಾಕಿಂಗ್ ಮಾಡಿಸಲೇಬೇಕು. ಇಲ್ಲದೇ ಹೋದ ಪಕ್ಷದಲ್ಲಿ 500 ಯೂರೋಗಳಿಂದ ದಂಡ ಕಟ್ಟಲೇಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel