ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ – 2ನೇ ಹಂತದ ಮತದಾನಕ್ಕೂ ಮುನ್ನ ಟಿಎಂಸಿ ಕಾರ್ಯಕರ್ತನ ಹತ್ಯೆ..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆ ಯಾಗುವುದಕ್ಕೆ ಮುಂಚೆಯಿಂದಲು ಗಲಾಟೆ, ಹೊಡೆದಾಟ, ಬಿಜೆಪಿ ಕಾರ್ಯಕರ್ತರು ಅಥವ ಬಿಜೆಪಿ ಕಾರ್ಯಕರ್ತರು ಸಾವನಪ್ಪುದು ಗಾಯಗೊಳ್ಳುವುದು ನಡೆಯುತ್ತಲೇ ಇದೆ. ಇದೀಗ ಸಾಕಷ್ಟು ಹೈಡ್ರಾಮಾಗಳ ನಡುವೆ ಇಂದು ಪಶ್ಚಿಮ ಬಂಗಾಳದಲ್ಲಿ ಮುಂಜಾನೆಯಿಂದಲೇ 2ನೇ ಹಂತದ ಮತದಾನ ನಡೆಯುತ್ತಿದೆ.
ಆದ್ರೆ 2ನೇ ಹಂತದ ಚುನಾವಣೆಗೆ ಮುನ್ನ ಕೇಶಪುರ ಬ್ಲಾಕ್ ನಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನ ಕೊಲೆಯಾಗಿದೆ. ಮೃತಪಟ್ಟವನ ಹೆಸರು ಉತ್ತಮ್ ಡೋಲುಯಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮದಿನಿಪುರ ವೈದ್ಯಕೀಯ ಕಾಲೇಜಿಗೆ ಗಂಭೀರವಾಗಿ ಗಾಯಗೊಂಡಿದ್ದ ಉತ್ತಮ್ ನನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಟಿಎಂಸಿ ಕಾರ್ಯಕರ್ತ ಉತ್ತಮ್ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 7 ಮಂದಿಯನ್ನ ಬಂಧಿಸಿ ವಿಚಾಣೆಗೊಳಪಡಿಸಿದ್ದಾರೆ.
ಇಂದು ದೇಶದಲ್ಲಿ ಕೊರೊನಾ ಮಹಾಸ್ಫೋಟ – ಒಂದೇ ದಿನ 72 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆ..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!








