ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಬಿಜೆಪಿ ನಾಯಕ ಬಿಜೊಯ್ ಭೂಯಿಯಾ ಎಂಬವವರನ್ನು ಅಪಹರಿಸಿ, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೊಯ್ ಭೂಯಿಯಾ ಅವರ ಮೃತ ದೇಹವು ರಸ್ತೆ ಬದಿಯಲ್ಲಿ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಟಿಎಂಸಿಯ ಗೂಂಡಾಗಳು ಭೂಯಿಯಾ ಅವರನ್ನು ಹತ್ಯೆಗೈದಿದ್ದಾರೆಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರಾಗಿದ್ದ ಭೂಯಿಯಾ ಅವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮನೋರಂಜನ್ ಹಝಾರಾ ಹಾಗೂ ಟಿಎಂಸಿಯ ಗೂಂಡಾಗಳು ದಾರಿ ಮಧ್ಯೆ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.
ಆರಂಭದಲ್ಲಿ ಭೂಯಿಯಾ ಅವರ ಪುತ್ರನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಆದರೆ, ಆತ ತಪ್ಪಿಸಿಕೊಂಡಿದ್ದು, ನಂತರ ಭೂಯಿಯಾನಿಗೆ ಬಂದೂಕು ತೋರಿಸಿ, ಎಳೆದುಕೊಂಡು ಹೋಗಿದ್ದಾರೆ. ಕೆಲವು ಗಂಟೆಗಳ ನಂತರ ಆತನ ಮೃತದೇಹ ಪತ್ತೆಯಾಗಿದೆ ಎಂದು ಬಿಜೆಪಿ ಶಾಸಕ ಅಶೋಕ್ ದಿಂಡಾ ಆರೋಪಿಸಿದ್ದಾರೆ. ಟಿಎಂಸಿ ಗೂಂಡಾಗಳಿಗೆ ಈ ಪ್ರದೇಶದಲ್ಲಿ ಬಾಂಬ್ ಗಳನ್ನು ಎಸೆದಿದ್ದು, ಅವರಿಗೆ ಪೊಲೀಸರ ಬೆಂಬಲವಿದೆ ಎಂದು ದಿಂಡಾ ಆರೋಪಿಸಿದ್ದಾರೆ.