ಕೊಲ್ಕತ್ತಾ – ಬಿಜೆಪಿ ಸಂಸದನ ಮನೆ ಮೇಲೆ ಬಾಂಬ್ ದಾಳಿ – ಟಿಎಂಸಿ ಕೈವಾಡ..?
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಚಾಚಾರ ಮುಂದುವರೆದಿದೆ. ಬಿಜೆಪಿ ಸಂಸದದ ಅರ್ಜುನ್ ಸಿಂಗ್ ಮನೆಯ ಬಳಿ ಕಚ್ಚಾ ಬಾಂಬ್ ಎಸೆದು ದಾಳಿ ನಡೆಸಲಾಗಿದೆ. ಇನ್ನೂ ಬಿಜೆಪಿಯು ಟಿಎಂಸಿಯೇ ದಾಳಿ ನಡೆಸಿರುವುದಾಗಿ ಆರೋಪ ಮಾಡಿದೆ. ಇಂದು ಬೆಳಗ್ಗೆ ಮೂರು ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ. ಅವು ಕೋಲ್ಕತ್ತದಿಂದ ಸುಮಾರು 100 ಕಿ.ಮೀ. ದೂರದ ಜಗತ್‌ದಲ್‌ನಲ್ಲಿರುವ ಅರ್ಜುನ್ ಸಿಂಗ್ ಅವರ ಮನೆಯ ಗೇಟ್‌ಗೆ ಬಾಂಬ್ ಗಳು ಬಂದು ಅಪ್ಪಳಿಸಿವೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಆದ್ರೆ ಕೆಲವರು ಗಾಯಗೊಂಡಿರೋದಾಗಿ ಅರ್ಜುನ್ ಸಿಂಗ್ ತಿಳಿಸಿರುವುದಾಗಿ ವರದಿಯಾಗಿದೆ. ಆದದ್ರೂ ಸ್ಥಳದಲ್ಲಿ ಆತಂಕದ ವಾತಾವರಣಿವಿದೆ. ಇನ್ನ ಈ ಬಗ್ಗೆ ಬಿಜೆಪಿ ಮುಖಂಡ ದಿಲೀಪ್ ಘೋಷ್ ಪ್ರತಿಕ್ರಿಯಿಸಿ, ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಕೆಲಸ ಎಂದು ಆರೋಪಿಸಿದ್ದಾರೆ.
ಸೂಕ್ತ ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು ಬಂಗಾಳದ ಪೊಲೀಸರಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರರುವ ಅರ್ಜುನ್ ಸಿಂಗ್ ಅವರು ಮುಂಜಾನೆ 6.10 ರ ಸಮಯದಲ್ಲಿ ಈ ಘಟನೆ ಸಂಭವಿವಿದೆ ಎಂದಿದ್ದಾರೆ. ಇನ್ನೂ ಪೊಲೀಸರ ತಂಡ ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಇನ್ನೂ ವರೆಗೂ ಒಟ್ಟಾರೆ ಗಾಯಗೊಂಡವರ ಸಂಖ್ಯೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ರಾಜ್ಯಪಾಲರಾದ ಜಗಗದೀಪ್ ಧನಕರ್ ಅವ್ರು ವಾಂಟನ್ ಹಿಂಸೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸದಸ್ಯರ ಸಂಸತ್ತಿನ ನಿವಾಸದ ಹೊರಗೆ ಇಂದು ಬೆಳಿಗ್ಗೆ ಬಾಂಬ್ ಸ್ಫೋಟವಾಗಿದ್ದು, ಡಬ್ಲ್ಯೂಬಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅನುಮಾನ ತರಿಸುವಂತಾಗಿದೆ. ಸೂಕ್ತ ಭದ್ರತೆ ಒದಗಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಂಕಿನಾರಾ, ಭಟ್ಪರಾ, ನೈಹತಿ, ಹಲೀಶಹಾರ್ ಮತ್ತು ಬಿಜಪುರದಂತಹ ಬ್ಯಾರಕ್‌ಪೋರ್‌ನ ಪರಿಸ್ಥಿತಿ ಅಸ್ಥಿರವಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಾರಕ್‌ಪೋರ್ ಕ್ಷೇತ್ರವನ್ನು ಗೆಲ್ಲಲು ಸಿಂಗ್ ಟಿಎಂಸಿಯನ್ನು ಸೋಲಿಸಿದ ನಂತರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಬಿಗಡಾಯಿಸಿದೆ. ಕಳೆದ ಅಕ್ಟೋಬರ್‌ನಲ್ಲಿ, ಸಿಂಗ್ ಅವರ ನಿಕಟವರ್ತಿ ಮನೀಶ್ ಶುಕ್ಲಾ ಅವರನ್ನು ಟಿಟ್ ಘರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಒಟ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮುಂದುವರೆದಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನ ತೋರಿಸುತ್ತಿದೆ.