ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ‘ದೀದಿ’ ಫೋಟೋ : ಸಿಡಿದೆದ್ದ ಬಿಜೆಪಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದಿಂದ ನೀಡುವ ಉಚಿತ ಕೊರೊನಾ ಲಸಿಕೆಯ ಸರ್ಟಿಫಿಕೇಟ್ ಮೇಲೆ ಸಿಎಂ ಮಮತಾ ಬ್ಯಾನರ್ಜಿ ಫೋಟೋ ಮುದ್ರಣಗೊಳಿಸಲು ಟಿಎಂಸಿ ಸರ್ಕಾರ ನಿರ್ಧಾರಿಸಿದ್ದು, ಇದರ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಹೌದು ಕೊರೊನಾ ಲಸಿಕೆಯ ಮೂರನೇ ಹಂತದಲ್ಲಿ 18-44 ವರ್ಷದೊಳಗಿನ ಜನತೆ ಬಂಗಾಳ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಈ ಲಸಿಕಾರಣದ ಪ್ರಮಾಣಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರ ಫೋಟೋ ಹಾಕಲು ಸರ್ಕಾರ ತೀರ್ಮಾನಿಸಿದೆ. ಈ ಮೊದಲು ಮೊದಲ ಮತ್ತು ಎರಡನೇ ಹಂತದಲ್ಲಿ ಲಸಿಕೆ ನೀಡಿದಾಗ ಜನರಿಗೆ ನೀಡಿದ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಮುದ್ರಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿಗಳ ಫೋಟೋ ಇರೋದನ್ನ ಟಿಎಂಸಿ ಖಂಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿತ್ತು. ಸರ್ಟಿಫಿಕೇಟ್ ನಲ್ಲಿ ಮೋದಿ ಅವರ ಫೋಟೋ ಹಾಕಿದ್ದು, ಚುನಾವಣೆ ನೀತಿ ಸಂಹಿತಿಯ ಉಲ್ಲಂಘನೆ ಎಂದು ಟಿಎಂಸಿ ಆರೋಪಿಸಿತ್ತು. ಕೊರೊನಾ ವ್ಯಾಕ್ಸಿನ್ ಎಲ್ಲರಿಗೂ ಉಚಿತವಾಗಿ ಸಿಗುವಂತಾಗಬೇಕು. ಕೊರೊನಾ ಲಸಿಕೆಯ ಪ್ರಮಾಣಪತ್ರದಲ್ಲಿ ಪಿಎಂ ಮೋದಿ ಫೋಟೋ ಹಾಕಿದ್ದನ್ನು ಟೀಕಿಸಿದ್ದರು. ಆದ್ರೆ ಇದೀಗ ಮಮತಾ ಬ್ಯಾನರ್ಜಿ ಅವರ ಈ ನಡೆಯನ್ನು ಟಿಎಂಸಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರೇ ಇದನ್ನ ಮೊದಲು ಆರಂಭಿಸಿದ್ದು, ಅವರನ್ನ ನಾವು ಫಾಲೋ ಮಾಡಿದ್ದೇವೆ. ಬಿಜೆಪಿ ಫೋಟೋ ಹಾಕದಿದ್ರೆ ನಾವು ಹಾಕಲ್ಲ ಎಂದಿದೆ.
ಮತ್ತೊಂದೆಡೆ ಬಿಜೆಪಿ ಹಿರಿಯ ನಾಯಕ ಸಮಿಕ್ ಭಟ್ಟಾಚಾರ್ಯ ಈ ಬಗ್ಗೆ ಪ್ರತಿಕ್ರಿಯಿಸಿ ಟಿಎಂಸಿ ಪ್ರಧಾನಿಗಳನ್ನ ಗೌರವಿಸುತ್ತಿಲ್ಲ. ಬದಲಾಗಿ ತನ್ನದೇ ಒಂದು ಪ್ರತ್ಯೇಕ ದೇಶ ಎಂಬಂತೆ ವರ್ತಿಸುತ್ತಿದೆ. ಪಶ್ಚಿಮ ಬಂಗಾಳ ಭಾರತದಲ್ಲಿ ಒಂದು ರಾಜ್ಯ ಅನ್ನೋದನ್ನ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಕಿಡಿಕಾರಿದ್ದಾರೆ.








