ಪಶ್ಚಿಮ ಬಂಗಾಳದಲ್ಲಿ ನಡೆದ ಟ್ರೇನಿ ವೈದ್ಯೆಯ ಅತ್ಯಾಚಾರ ಪ್ರಕರಣಕ್ಕೆ ಇಡೀ ದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಆರೋಪಿಯು ದ್ವಂದ್ವ ಹೇಳಿಕೆ ನೀಡುತ್ತಿದ್ದಾನೆ.
ಆಸ್ಪತ್ರೆಯ ಸೆಮಿನಾರ್ ಹಾಲ್ ಗೆ ನಾನು ಬರುವುದಕ್ಕೂ ಮುನ್ನ ಮಹಿಳಾ ವೈದ್ಯೆ ಆಗಲೇ ಸಾವನ್ನಪ್ಪಿದ್ದಳು ಎಂದು ಆರೋಪಿ ಸಂಜಯ್ ರಾಯ್ ಪಾಲಿಗ್ರಾಪ್ ಪರೀಕ್ಷೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ ಅತ್ಯಾಚಾರ, ಕೊಲೆ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿರುವ ಸಂಜಯ್ ರಾಯ್, ಯೂಟರ್ನ್ ಹೊಡೆದಿದ್ದಾನೆ.
ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ್ದರು. ಸಂಜಯ್ ರಾಯ್ ಆ ವೇಳೆ ಆತಂಕಗೊಂಡಿದ್ದ, ಸಿಬಿಐ ಹಲವು ಸಾಕ್ಷ್ಯಗಳನ್ನು ಮುಂದಿಟ್ಟರೂ ಆತ ಸಮರ್ಥನೆ ನೀಡುತ್ತಿದ್ದ. ಅಲ್ಲದೇ, ತಾನು ತಪ್ಪು ಮಾಡಿಲ್ಲ ಎನ್ನುತ್ತಿದ್ದ ಎನ್ನಲಾಗಿದೆ.
ಘಟನೆಯ ನಂತರ, ಸಂಜಯ್ ರಾಯ್ ಅತ್ಯಾಚಾರ ಮತ್ತು ಕೊಲೆಯ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ, ನಂತರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ತಾವು ನಿರಪರಾಧಿ ಎಂದು ಹೇಳಿದ್ದಾನೆ.
ಆರೋಪಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾನೆ, ಆರೋಪಿಯು ತನ್ನ ಮುಖದ ಮೇಲೆ ಉಂಟಾದ ಗಾಯಗಳು ಮತ್ತು ಅಪರಾಧದ ಸಮಯದಲ್ಲಿ ಕಟ್ಟಡದಲ್ಲಿ ಇದ್ದ ಬಗ್ಗೆ ಯಾವುದೇ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದಿರುವುದು ದೃಢಪಟ್ಟಿದೆ.








