ಮೂರನೇ ಟೆಸ್ಟ್ – ಇಂಗ್ಲೆಂಡ್ ವಿರುದ್ಧ ಕೆರೆಬಿಯನ್ನರಿಗೆ ಸೋಲಿನ ಭೀತಿ..!
ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಯಲ್ಲಿದೆ. ಗೆಲ್ಲಲು 399 ರನ್ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಮೂರನೇ ದಿನದ ಅಂತ್ಯಕ್ಕೆ 10 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕ್ರೇಗ್ ಬ್ರಾತ್ ವೇಟ್ ಅಜೇಯ 2 ರನ್ ಹಾಗೂ ಶಾಯ್ ಹೋಪ್ 4 ರನ್ಗಳೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಈಗ ಏನಿದ್ರೂ ಎಂಟು ವಿಕೆಟ್ಗಳನ್ನಿಟ್ಟುಕೊಂಡು ಇಂಗ್ಲೆಂಡ್ಗೆ ಪ್ರತ್ಯುತ್ತರ ನೀಡಬೇಕಾಗಿದೆ.
ಇದಕ್ಕೂ ಮೊದಲು ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 226 ರನ್ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಹಾಗೇ, ಮೊದಲ ಇನಿಂಗ್ಸ್ ನಲ್ಲಿ 172 ರನ್ಗಳ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು. ಇಂಗ್ಲೆಂಡ್ ತಂಡದ ಪರ ರೋರಿ ಬನ್ರ್ಸ್ ಅವರು ಆಕರ್ಷಕ 90 ರನ್ ಸಿಡಿಸಿದ್ರು. ಹಾಗೇ ಮೊದಲ ವಿಕೆಟ್ಗೆ ರೋರಿ ಬನ್ರ್ಸ್ ಮತ್ತು ಡಾಮಿನಿಕ್ ಸಿಬ್ಲೇಯ್ (56 ರನ್) 114 ರನ್ ದಾಖಲಿಸಿದ್ರು. ನಂತರ ನಾಯಕ ಜಾಯ್ ರೂಟ್ ಮತ್ತು ಬನ್ರ್ಸ್ ಎರಡನೇ ವಿಕೆಟ್ಗೆ 112 ರನ್ಗಳ ಜೊತೆಯಾಟವಾಡಿ ವಿಂಡೀಸ್ಗೆ ಕಂಟಕವಾದ್ರು.
ಇನ್ನೊಂದೆಡೆ ವೆಸ್ಟ್ ಇಂಡೀಸ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದು ವೇಗಿ ಸ್ಟುವರ್ಟ್ ಬ್ರಾಡ್. ಎರಡನೇ ಇನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ನೀಡಿದ್ದರು. ಈ ಮೂಲಕ ತನ್ನ ಟೆಸ್ಟ್ ವಿಕೆಟ್ಗಳ ಸಂಖ್ಯೆಯನ್ನು 499ಕ್ಕೇರಿಸಿದ್ರು. ಈ ಪಂದ್ಯದಲ್ಲೇ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ 369 ಮತ್ತು ಎರಡನೇ ಇನಿಂಗ್ಸ್ 226/2 ಡಿಕ್ಲೇರ್
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ -197 ರನ್, ಎರಡನೇ ಇನಿಂಗ್ಸ್ 2 ವಿಕೆಟ್ಗೆ 10 ರನ್








