ಹೃದಯಾಘತಕ್ಕೆ ಕಾರಣವೇನು..? ಹೇಗೆ ಉಂಟಾಗುತ್ತದೆ..?
ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದಾಗಿ ಇಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತಿಚಿನ ದಿನಗಳಲ್ಲಿ ಸಣ್ಣವಯಸ್ಸಿನಲ್ಲೇ ಹೃದಯಾಘಾತದಿಂದಾಗಿ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಹಾಗಾದ್ರೆ ಹೃದಯಾಘಾತ ಎಂದರೆ ಏನು ? ಇದು ಯಾವ ಕಾರಣದಿಂದ ಉಂಟಾಗುತ್ತದೆ ? ಇದರ ಲಕ್ಷಣಗಳೇನು ?
ಮನುಷ್ಯನ ದೇಹದ ಹೃದಯದಲ್ಲಿ ರಕ್ತನಾಳಗಳು ಇರುತ್ತವೆ. ದೇಹದಲ್ಲಿ ಒಟ್ಟು 3 ರಕ್ತನಾಳಗಳಿರುತ್ತವೆ. ಈ ಮೂರು ರಕ್ತನಾಳಗಳಿಂದ ಹೃದಯಕ್ಕೆ ರಕ್ತದ ಚಲನೆ ನಡೆಯುತ್ತಿರುತ್ತದೆ.
ಸಕ್ಕರೆ ಕಾಯಿಲೆ, ಹೈ ಕೊಲೆಸ್ಟ್ರಾಲ್ ಅಥವಾ ಹೆಚ್ಚು ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗುತ್ತಾ ಹೋಗುತ್ತದೆ.
ಇದರಿಂದ ರಕ್ತ ಚಲನೆಗೆ ಅಡ್ಡಿ ಉಂಟಾಗಿ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತ ಚಲನೆ ನಿಂತುಹೋಗುತ್ತದೆ. ಈ ಸಮಸ್ಯೆಯನ್ನು ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ
ಹೃದಯಾಘಾತ ಆದ ಸಂದರ್ಭಗಳಲ್ಲಿ ಹೃದಯಕ್ಕೆ ತೊಂದರೆಯಾಗಿ ಹೃದಯದ ಕೆಲಸ ನಿಂತುಹೋಗಿ ರಕ್ತ ಪೂರೈಕೆ ನಿಲ್ಲುತ್ತಾ ಹೋಗುತ್ತದೆ.
ಇದೇ ಕಾರಣಕ್ಕಾಗಿಯೇ ಕೆಲವರು ಹಠಾತ್ ಆಗಿ ಸಾಯುವುದನ್ನು ನೀವು ನೋಡಿರುತ್ತೀರಿ ಅಥವಾ ಇನ್ನು ಕೆಲವರಿಗೆ ಎದೆ ನೋವು ಕಾಣಿಸಿಕೊಂಡು ನಂತರ ಆಸ್ಪತ್ರೆಯಲ್ಲಿ ದಾಖಲಾಗಿ ಟ್ರೀಟ್ಮೆಂಟ್ ಫಲಕಾರಿ ಆಗದೆ ಕೊನೆಯುಸಿರು ಎಳೆದಿರುವುದನ್ನು ಕೇಳಿರುತ್ತೀರಿ.
ಸಾಮಾನ್ಯವಾಗಿ ಹೃದಯಾಘಾತವಾದಾಗ ಎದೆನೋವು ಕಾಣಿಸುತ್ತದೆ. ಮುಖ್ಯವಾಗಿ ಎದೆಯು ಬಿಗಿಯಾಗಿರುವಂತೆ, ಒತ್ತಿದಂತೆ ಅಥವಾ ಹಿಸುಕಿದಂತೆ ಅನುಭವವಾಗುತ್ತದೆ. ಇನ್ನು ಕೆಲವರಿಗೆ ಕೈಯಲ್ಲಿ ಬೆನ್ನಿನಲ್ಲಿ ಅಥವಾ ಹೊಟ್ಟೆಯಲ್ಲಿ ಸಹ ಇದರಿಂದ ನೋವು ಕಾಣಿಸಿಕೊಳ್ಳುತ್ತದೆ. ಇವೆಲ್ಲವೂ ಹೃದಯಾಘಾತದ ಚಿಹ್ನೆಗಳಾಗಿವೆ.









