ಕಪಿಲ್ ಶರ್ಮಾರ ಬದುಕಿನಲ್ಲಿ ಬದಲಾವಣೆಯಾಗಲು ಕಾರಣವೇನು?
ಮುಂಬೈ, ಜುಲೈ 20: ಹೆತ್ತವರು ಎನಿಸಿಕೊಳ್ಳುವುದು ಪ್ರತಿಯೊಬ್ಬರ ಜೀವನವನ್ನು ಬದಲಿಸುವ ಮ್ಯಾಜಿಕ್ ದಂಡ. ಅಲ್ಲಿಯವರೆಗೆ ನಿರಾತಂಕವಾಗಿದ್ದ ಬದುಕು ವ್ಯಾಮೋಹಕ್ಕೆ ಒಳಗಾಗುವವರೆಗೆ, ಪ್ರತಿ ದಂಪತಿಗಳು ಪೋಷಕರಾಗಿ ಬದಲಾಗುತ್ತಾರೆ. ಒಬ್ಬ ತಂದೆ ತನ್ನ ಪುಟ್ಟ ಮಗುವನ್ನು ಹಿಡಿದ ಕ್ಷಣದಿಂದ ಅವನ ಜೀವನವು ಯು-ಟರ್ನ್ ತೆಗೆದುಕೊಳ್ಳುತ್ತದೆ ಮತ್ತು ಅವನು ತನ್ನನ್ನು ತಾನು ಉತ್ತಮವಾಗಿ ಬದಲಾಯಿಸಿಕೊಳ್ಳುತ್ತಾ ಸಾಗುತ್ತಾನೆ. ದಿನಗಳು ಸರಿದಂತೆ, ಪ್ರತಿ ತಂದೆಯ ಭಾವನಾತ್ಮಕ ಭಾವನೆ ಅವನನ್ನು ಮೀರಿ ಬೆಳೆಯುತ್ತದೆ . ಅವನು ತನ್ನ ಪುಟ್ಟ ಕಂದಮ್ಮನ ಸಣ್ಣ ಬೆರಳುಗಳನ್ನು ಹಿಡಿದ ಕ್ಷಣದಿಂದ ಅವಳನ್ನು ಮದುವೆ ಮಾಡಿ ಕಳುಹಿಸಬೇಕಾದ ಸಂದರ್ಭದ ಬಗ್ಗೆ ಯೋಚಿಸಿ ಹೆದರುತ್ತಾನೆ.
ಹಾಸ್ಯನಟ, ಕಪಿಲ್ ಶರ್ಮಾ ಅವರು ತಂದೆಯಾದ ಬಳಿಕ ಅವರ ಪ್ರಪಂಚ ಬದಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಅವರ ಪುಟ್ಟ ದೇವತೆಗೆ ಗಿನ್ನಿ ಚತ್ರತ್ ಡಿಸೆಂಬರ್ 10, 2019 ರಂದು ಜನ್ಮ ನೀಡಿದಾಗ, ಅವರು ತಾನು ತಂದೆಯಾಗಿರುವ ಸಂತೋಷದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಒಂದು ತಿಂಗಳ ನಂತರ, ತನ್ನ ಹೆಣ್ಣು ಮಗುವಿನ ಚಿತ್ರವನ್ನು ಹಂಚಿಕೊಳ್ಳುತ್ತಾ, ಕಪಿಲ್ ನಮ್ಮ ಹೃದಯದ ಒಂದು ಭಾಗ ಅನೈರಾ ಶರ್ಮಾ ಎಂಬ ಅಡಿಬರಹದೊಂದಿಗೆ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದರು.
ಇತ್ತೀಚೆಗೆ ಮಾಧ್ಯಮದೊಂದಿಗಿನ ಸಂವಾದದಲ್ಲಿ, ಕಪಿಲ್ ಶರ್ಮಾ ಅವರ ಮಗಳು ಅನೈರಾ ಹುಟ್ಟಿದ ನಂತರ ಅವರ ಜೀವನವು ಹೇಗೆ ಬದಲಾಗಿದೆ ಎಂಬುದರ ಕುರಿತು
ಮಾತನಾಡಿದ್ದಾರೆ. ಅವರ ಮಗಳು ಅನೈರಾ ಶರ್ಮಾಗೆ ಈಗ ಏಳು ತಿಂಗಳು. ಸಂದರ್ಶನದಲ್ಲಿ ಕಪಿಲ್ ಅವರು ಜೀವನದ ಹೊಸ ಹಂತ, ತಂದೆಯಾದ ಬಳಿಕ ಜೀವನ ಹೇಗೆ ಬದಲಾಯಿತು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಹೌದು, ಇದು ಜೀವನವನ್ನು ಬದಲಾಯಿಸಿದೆ. ಈ ಮೊದಲು, ಜೀವನವು ವಿಭಿನ್ನವಾಗಿತ್ತು. ಮದುವೆಯ ನಂತರ ಎಲ್ಲವೂ ಬದಲಾಯಿತು ಮತ್ತು ನಾನು ನನ್ನ ಪತ್ನಿ ಗಿನ್ನಿಯೊಂದಿಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದೆ. ಮತ್ತು ಈಗ, ಮಗುವಿನ ಆಗಮನದ ನಂತರ ಅದು ಇನ್ನಷ್ಟು ಬದಲಾಗಿದೆ. ಒಂದು ಮಗು ನಮ್ಮ ಜೀವನದಲ್ಲಿ ಎಷ್ಟೊಂದು ಬದಲಾವಣೆ ತರುತ್ತದೆ ಎಂದು ಆಶ್ಚರ್ಯವೂ ಆಗುತ್ತದೆ. ಮದುವೆಯ ನಂತರ, ಪರಸ್ಪರರ ಬಗ್ಗೆ ನಮ್ಮ ಸಂಭಾಷಣೆಗಳು ಸಾಗಿದ್ದರೆ, ಮಗು ಬಂದ ಬಳಿಕ ಎಲ್ಲವೂ ಅವಳ ಸುತ್ತವೇ ಕೇಂದ್ರೀಕೃತವಾಗಿದೆ ಎಂದರು.
ತನ್ನ ಮಗಳು ಬೆಳಿಗ್ಗೆ 4 ಗಂಟೆಗೆ ಎಚ್ಚರವಾಗುತ್ತಾಳೆ ಮತ್ತು ಜಗತ್ತಿನಲ್ಲಿ ಕೇವಲ ಮೂವರು ಸದಸ್ಯರು ಮಾತ್ರ ಇರುವುದು ಎಂದು ಭಾವಿಸಿದ್ದಾಳೆ. ಜೀವನವು ಈಗ ಹೆಚ್ಚು ಶಿಸ್ತುಬದ್ಧವಾಗಿದೆ. ಮಗು ಬೆಳಿಗ್ಗೆ 4 ಗಂಟೆಗೆ ಎಚ್ಚರವಾದಾಗ, ನೀವು ಕೂಡ ಎಚ್ಚರಗೊಳ್ಳಬೇಕು. ಆದಾಗ್ಯೂ, ನನ್ನ ವಿಷಯದಲ್ಲಿ, ನನ್ನ ಮಗಳು ನನ್ನನ್ನು ಎಚ್ಚರಗೊಳಿಸಬೇಕಿಲ್ಲ. ನಾನು ನನ್ನ ಮಗಳಿಗಾಗಿ ಯಾವಾಗಲೂ 4 ಗಂಟೆಗೆ ಎದ್ದಿರುತ್ತೇನೆ ಎಂದು ಹೇಳಿರುವ ಕಪಿಲ್ ಹೆಣ್ಣುಮಕ್ಕಳಿಗೆ ತಂದೆಯೊಂದಿಗೆ ವಿಶೇಷ ಸಂಪರ್ಕವಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರಾಥ್ ತಮ್ಮ ಪುಟ್ಟ ರಾಜಕುಮಾರಿಯನ್ನು ಸ್ವಾಗತಿಸಿ ಸುಮಾರು ಏಳು ತಿಂಗಳಾಗಿದೆ ಮತ್ತು ದಿನ ಕಳೆದಂತೆ ಅವಳ ಪ್ರತಿ ಚಿತ್ರ / ವಿಡಿಯೋಗಳ ವ್ಯಾಮೋಹ ಹೆಚ್ಚುತ್ತಿದೆ. ಅನೈರಾ ಶರ್ಮಾ ತನ್ನ ನಗುವಿನಿಂದ ಕಪಿಲ್ ಶರ್ಮಾ ದಂಪತಿಗಳ ದಿನವನ್ನು ಸುಂದರವಾಗಿಸಿದ್ದರೆ, ಅವಳ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಂತೋಷಪಡುತ್ತಾರೆ.