ಕನ್ಯಾದಾನ.
******
ಕನ್ಯಾ ಆದಾನ ಅಲ್ಲ.
ಅದು ಕನ್ಯಾ ದಾನವೇ ಸರಿ
ಇದಕ್ಕೆ ಪುರಾಣ ಶಾಸ್ತ್ರಗಳಲ್ಲಿ ಪೂರಕವಾದ ಉದಾಹರಣೆಗಳು ಇವೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವಧುವಿನ ಮಾತಾಪಿತರು ಪ್ರತಿಜ್ಞಾಪೂರ್ವಕ ವರನ ಕೈಮೇಲೆ ನೀರಿನ ಧಾರೆ ಎರೆದು ಕನ್ಯೆಯನ್ನು ದಾನಮಾಡುವುದು ಕನ್ಯಾದಾನ ವಿಧಿ ಆಗಿರುತ್ತದೆ. ಕನ್ಯಾದಾನದಿಂದ ಪೃಥ್ವಿಯನ್ನೇ ದಾನನಾಡಿದ ಪುಣ್ಯ ಲಭಿಸುತ್ತದೆ, ಕುಲದ ಉದ್ಧಾರವಾಗುತ್ತದೆ, ಮೋಕ್ಷಪ್ರಾಪ್ತಿಯಾಗುತ್ತದೆ.
ಕನ್ಯಾದಾನ ಪ್ರಶಂಸಾ:-
“ಅಲಂಕೃತ್ಯ ತು ಯಃ ಕನ್ಯಾಂ ಭೂಷಣಾಚ್ಛಾದನಾದಿಭಿಃ | ದತ್ವಾ ಸ್ವರ್ಗಮವಾಪ್ನೋತಿ ಪೂಜ್ಯತೇ ವಾಸವಾದಿಭಿಃ || ವೃಕುಂದಶ್ಚಾಶ್ವ ಮೇದೀ ಚ ರಾಣದಾನಾಭಯೇಷು ಚ | ಸಮಂ ಯಾತಿ ರಥಾ ಯೇಷಾಂ ತ್ರಯೋ ವೈ ನಾತ್ರ ಸಂಶಯಃ || ಸಾಲಂಕೃತ ಕನ್ಯಾದಾತಾ ವೈಕುದಃ ||”
ಅರ್ಥ:-
ವಸ್ತ್ರಾಲಂಕಾರಭೂಷಿತಳಾದ ಕನ್ಯೆಯನ್ನು ದಾನ ಮಾಡಿದವನು ಮರಣಾನಂತರ ಸ್ವರ್ಗವನ್ನು ಸೇರಿ ದೇವತೆಗಳಿಂದ ಸ್ತುತಿಸಲ್ಪಡುತ್ತಾನೆ.
ಕನ್ಯಾದಾನ, ಅಶ್ವಮೇಧ, ಪ್ರಾಣರಕ್ಷಣೆ ಈ ಮೂರರ ಪುಣ್ಯ ಸಮನಾದುದು.
ತಮ್ಮ ಕುಲದಲ್ಲಿ ಕನ್ಯಾದಾನ ಮಾಡಿದ ವಾರ್ತೆಯನ್ನು ಕೇಳಿದ ಪಿತೃಗಳು ಪಾಪಮುಕ್ತರಾಗಿ ಬ್ರಹ್ಮಲೋಕವನ್ನು ಸೇರುತ್ತಾರೆ.
ಕನ್ಯಾದಾನದ ಸಮಯದಲ್ಲಿ ಹೇಳುವ ಮಂತ್ರ:-
“ಕನ್ಯಾಂ ಕನಕಸಂಪನ್ನಾಂ ಕನಕಾಭರಣೈರ್ಯುತಾಮ್ |
ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕಜಿಗೀಷಯಾ ||
ವಿಶ್ವಂಭರಂ ಪಂಚಭೂತಾಃ ಸಾಕ್ಷಿಣ್ಯೋ ಯತ್ರ ದೇವತಾಃ |
ಇಮಾಂ ಕನ್ಯಾಂ ಪ್ರದಾಸ್ಯಾಮಿ ಪಿತೃಣಾಂ ತಾರಣಾಯ ಚ ||”
ಅರ್ಥ:-
ಸುವರ್ಣದಂತೆ ಪ್ರಕಾಶಮಾನಳೂ, ಸುವರ್ಣಆಭರಣಗಳಿಂದ ಕೂಡಿದವಳೂ ಆದ ಈ ಕನ್ಯೆಯನ್ನು ಬ್ರಹ್ಮಲೋಕವನ್ನು ಗೆಲ್ಲುವುದಕ್ಕೋಸ್ಕರ ವಿಷ್ಣುರೂಪಿಯಾದ ನಿನಗೆ ಕೊಡುತ್ತಿದ್ದೇನೆ.
ಈ ಕನ್ಯೆಯು ದೇಹದ ಮುಂಬಾಗದಲ್ಲೂ, ಉಭಯ ಪಾರ್ಶ್ವಗಳಲ್ಲೂ, ಹಿಂಭಾಗದಲ್ಲೂ ಮತ್ತು ಸುತ್ತಲೂ ಇರಲಿ.
ಪಿತೃಗಳ ಉದ್ಧಾರಕ್ಕೋಸ್ಕರ ಈ ಕನ್ಯೆಯನ್ನು ಸರ್ವೇಶ್ವರ, ಪಂಚಭೂತಗಳು ಮತ್ತು ಎಲ್ಲ ದೇವತೆಗಳ ಸಾಕ್ಷಿಯಾಗಿ ಇಟ್ಟುಕೊಂಡು ನಿನಗೆ ಕೊಡುತ್ತಿದ್ದೇನೆ.
“ಕನ್ಯಾಂ ಸಾಲಕೃತಾಂಸಾಧ್ವೀಂ ಸುಶೀಲಾಯ ಸುಧೀಮತೇ |
ಪ್ರಯತೋಹಂ ಪ್ರದಶ್ಯಾಮಿ ಧರ್ಮಕಾಮ್ಯಾರ್ಥಸಿದ್ಧಯೇ ||
ಶ್ರೀರೂಪಿಣೀ ಮಿಮಾಂಕನ್ಯಾಂತುಭ್ಯಂ ಶ್ರೀಧರರೂಪಿಣೇ |
ಇತ್ಯುಕ್ತ್ವೋದಕ ಪೂರ್ವಾಂತಾಂ ದದಾಮ್ಯಸ್ಮೈತ್ರಿವಾಚಕಮ್ ||”
ಅರ್ಥ:-
ಯಥಾಶಕ್ತಿ ಸಾಲಂಕೃತಳೂ ಒಳ್ಳೆಯ ನಡತೆಯುಳ್ಳವಳೂ ಸಾಧ್ವಿಯೂ ಆದ ಈ ಕನ್ಯೆಯನ್ನು, ಒಳ್ಳೆಯ ನಡತೆಯುಳ್ಳವನೂ ಮೇಧಾಶಾಲಿಯೂ ಆದ ನಿನಗೆ ಸ್ಥಿರಮನಸ್ಸಿನಿಂದ ಕೊಡುತ್ತಿದ್ದೇನೆ.
ಇದರಿಂದ ನಿನಗೆ ಧರ್ಮ-ಅರ್ಥ-ಕಾಮಗಳು ಸಿದ್ಧಿಯಾಗಲೆಂದು ಹಾರೈಸುತ್ತೇನೆ.
ಲಕ್ಷ್ಮೀಸ್ವರೂಪಳಾದ ಈ ಕನ್ಯೆಯನ್ನು ವಿಷ್ಣುಸ್ವರೂಪನಾದ ನಿನಗೆ ಕೊಡುತ್ತಿದ್ದೇನೆ.
ಈ ರೀತಿಯಾಗಿ ಹೇಳಿ ಉದಕಪುರಸ್ಸರವಾಗಿ ಕಾಯೇನ ವಾಚಾ ಮನಸಾ ತ್ರಿಕರಣ ಶುದ್ಧಿಯಿಂದ ಈ ವರನಿಗೆ ಈ ಕನ್ಯೆಯನ್ನು ಕೊಡುತ್ತಿದ್ದೇನೆ.
ಸ್ತ್ರೀ ಪೂರ್ವಕವಾಗಿ ಮೂರು ಸಲ ಪ್ರವರೋಚ್ಚಾರಣ ಪೂರ್ವಕ ಇಂಥಹವರ ಮರಿಮಗಳೂ, ಇಂಥಹವರ ಮೊಮ್ಮಗಳೂ, ಇಂಥಹವರ ಮಗಳೂ, ಇಂಥಾ ಗೋತ್ರದವಳೂ, ಆದ ಈ ಕನ್ಯೆಯನ್ನು;
ಈ ಹೆಸರಿರುವವರ ಮರಿಮಗನೂ, ಈ ಹೆಸರಿರುವವರ ಮೊಮ್ಮಗನೂ, ಈ ಹೆಸರಿರುವವರ ಮಗನೂ, ಈ ಹೆಸರಿನಿಂದ ಕೂಡಿದ ಇಂಥಹ ಗೋತ್ರದಲ್ಲಿ ಹುಟ್ಟಿದ ಈ ವರನಿಗೆ, ಸಂತತಿ ಅಭಿವೃದ್ಧಿಗಾಗಿಯೂ ಯಜ್ಞಯಾಗಾದಿ ಕರ್ಮಗಳ ಅನಷ್ಠಾನಕ್ಕಾಗಿಯೂ ಈ ಕನ್ಯೆಯನ್ನು ನಿನಗೆ ಕೊಡುತ್ತೇನೆ ಎಂದು ಹೇಳುವುದು ಇದೆ.
ಹೀಗೆ ಕನ್ಯಾದಾನ ವು ಅತ್ಯಂತ ಪುಣ್ಯಪ್ರದವಾದ ಕಾರ್ಯವಾಗಿರುತ್ತದೆ.
ವಿವಾಹದಲ್ಲಿನ ಪರಸ್ಪರ ಬಂಧನದ ಬಲವರ್ಧನೆಗಾಗಿ ವರಪ್ರತಿಜ್ಞೆಯ ಕಾರ್ಯವೂ ಇರುತ್ತದೆ. ಇಲ್ಲಿ ವರನಿಂದ ಕನ್ಯೆಯ ಬಲಭುಜವನ್ನು ಮುಟ್ಟಿಸಿ, ಕನ್ಯೆಯ ತಂದೆಯು ವರನಿಗೆ ಈ ಕೆಳಗಿನಂತೆ ಹೇಳುತ್ತಾನೆ:-
“ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಿತವ್ಯಾ ತ್ವಯೇಯಮ್ ||”
ಅರ್ಥ:-
ಧರ್ಮದಿಂದಾಗಲೀ, ದ್ರವ್ಯದಿಂದಾಗಲೀ, ಕಾಮದಿಂದಾಗಲೀ ನನ್ನ ಮಗಳನ್ನು ವಂಚಿಸಬೇಡ.
ಅದಕ್ಕೆ ವರನು “ನಾತಿ ಚರಾಮಿ” ಎಂದು ಮೂರುಸಲ ಪ್ರತಿಜ್ಞೆ ಮಾಡಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಕನ್ಯಾದಾನ ಮಾಡಲು ಅಧಿಕಾರಿಗಳು ಯಾರು? ಎನ್ನುವುದಕ್ಕೆ ಶಾಸ್ತ್ರವು ಹೇಳುತ್ತದೆ:-
*”ಪಿತಾ ಪಿತಾಮಹೋ ಭ್ರಾತ್ರಾ ಪಿತ್ರವ್ಯೋ ಗೋತ್ರಿಣೋ ಗುರು:|
ಮತಾಮಹೋ ಮಾತುಲೋ ವಾ ಜನನೀ ಬಾಂಧವಾ: ಕ್ರಮಾತ್||
ಕನ್ಯಾಪ್ರದ: ಪೂರ್ವನಾಶೇ ಪ್ರಕೃತಿಸ್ಥ: ಪರ: ಪರ:|
ಪ್ರಕೃತಿಸ್ಥ ಉನ್ಮಾದಾದಿ ದೋಷಹೀನ:||”
ಅಂದರೆ:-
ತಂದೆ, ಅಜ್ಜ, ಅಣ್ಣ, ತಂದೆಯ ಸಹೋದರ, ಕೌಟುಂಬಿಕ ಆಚಾರ್ಯ, ತಾಯಿಯ ತಂದೆ, ತಾಯಿಯ ಇತರ ಬಂದುಗಳು – ಅನುಕ್ರಮವಾಗಿ ಒಬ್ಬನಿಲ್ಲದಿದ್ದಾಗ ಇನ್ನೊಬ್ಬನು ಅಧಿಕಾರಿಯಾಗುತ್ತಾನೆ.
*
ಸರ್ವಜನ ಸುಖಿನೋಭವಂತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು.