ಗಲ್ಲಿಗೇರಿಸುವುದಕ್ಕು ಮುನ್ನ ಜಲ್ಲಾದ್ ಖೈದಿಯ ಕಿವಿಯಲ್ಲಿ ಹೇಳೋ ಆ ಮಾತು ಏನು ಗೊತ್ತಾ..!
ನ್ಯಾಯಾಲಯದಲ್ಲಿ ಯಾರಾದರೂ ನ್ಯಾಯಾಧೀಶರು ಖೈದಿಗೆ ಗಲ್ಲು ಶಿಕ್ಷೆ ನೀಡಿದಾಗ, ಅವರು ಯಾವ ಪೆನ್ನಿನಿಂದ ಆ ಶಿಕ್ಷೆಯನ್ನ ಬರೆಯುತ್ತಾರೋ ಆ ಪೆನ್ನಿನ ನಿಬ್ ಮುರಿಯುತ್ತಾರೆ. ಗಲ್ಲು ಶಿಕ್ಷೆ , ಅಥವ ಮರಣದಂಡನೆ ಶಿಕ್ಷೆಯ ಶಬ್ಧ ಕೇಳ್ತಿದ್ದಂತೆ ಅಪರಾಧಿಗಳು ಬೆವರುತ್ತಾ ನಡುಗಿಹೋಗ್ತಾರೆ. ಅವರ ಹಾರ್ಟ್ ಬೀಟ್ಸ್ ರೇಸ್ ಕುದುರೆಯ ಸ್ಪೀಡ್ ನಲ್ಲಿ ಹೊಡೆದುಕೊಳ್ಳೋದಕ್ಕೆ ಶುರುವಾಗುತ್ತೆ. ಬೆವರಿನಿಂದ ಒದ್ದೆಯಾಗಿರುತ್ತಾರೆ. ಕಾಲುಗಳು ನಿಲ್ಲುವ ಸ್ವಾಧೀನವನ್ನೇ ಕಳೆದುಕೊಂಡಿರುತ್ತಾವೆ. ಇಷ್ಟೆಲ್ಲಾ ಹೇಲ್ತಿರೋ ನಮಗೆ ಒಂದ್ ಕ್ಷಣ ಭಯ ಆಗುತ್ತೆ. ಆದ್ರೆ ಶಿಕ್ಷೆ ವಿಧಿಸಿದಾಗ ಆ ಖೈದಿಗಳ ಸ್ಥಿತಿಯನ್ನ ಊಹೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಹಾ ಶಿಕ್ಷೆಯಾಗ್ಲೇ ಬೇಕು. ಅವರು ಕ್ರೈಂ ಮಾಡಿದ್ದಾರೆ. ಅಪರಾಧಿಗಳು ಅನ್ನೋದು ನಿಜ. ಆದ್ರೂ ನಮಗೆ ಭಯ ಆಗೋದು ಸಹಜವೇ.

ನೇಣಿಗೇರಿಸೋ ಮುನ್ನ ಜಲ್ಲಾದ್ ಆ ಅಪರಾಧಿಯ ಕಿವಿಯಲ್ಲಿ ಆ ಒಂದು ಪದ ಹೇಳ್ತಾರೆ. ಆ ಪದದಲ್ಲಿ ಯಾವುದೇ ಕೋಪ, ದ್ವೇಷವಿರೋದಿಲ್ಲ. ಆ ಒಂದು ಪದ ಜಲ್ದಲಾದ್ ಪ್ರತಿ ಅಪರಾಧಿಯನ್ನ ಗಲ್ಲಿಗೇರಿಸುವ ಮುನ್ನ ಹೇಳ್ತಾರೆ. ಹೇಳಲೇಬೇಕು ಕೂಡ. ನಮ್ಮ ದೇಶದಲ್ಲಿ ಯಾವುದೇ ಅಪರಾಧಿಗೆ ಗಲ್ಲುಗೇರಿಸುವ ಸಮಯದಲ್ಲಿ ಜಲ್ಲಾದ್ ಅಪರಾಧಿಯ ಬಳಿ ಕ್ಷಮೆಯಾಚಿಸುತ್ತಾರೆ, ಕಿವಿಯಲ್ಲಿ ಹೇಳ್ತಾರೆ ‘ ನನ್ನನ್ನ ಕ್ಷಮಿಸಿಬಿಡು, ನನ್ನ ಕೈಯಲ್ಲಿ ಏನೂ ಇಲ್ಲ. ನನ್ನನ್ನ ಕ್ಷಮಿಸಿಬಿಡು ನಾನು ಸರ್ಕಾರದ ಗುಲಾಮ. ನಿನಗಾಗಿ ನಾನು ಏನೂ ಮಾಡೋದಕ್ಕೆ ಸಾಧ್ಯವಾಗೋದಿಲ್ಲ’ ಎನ್ನುತ್ತಾರೆ. ಅಪರಾಧಿ ಹಿಂದೂ ಆದ್ರೆ ಜಲ್ಲಾದ್ ರಾಮ್ ರಾಮ್ ಅಂತಾರೆ, ಮುಸ್ಲಿಂ ಆದ್ರೆ ಸಲಾಂ ಅಂತಾರೆ. ಅಷ್ಟೇ ಈ ಪದ ಕೇಳಿಸಿಕೊಳ್ತಿದ್ದಂತೆ ಅಪರಾಧಿಯನ್ನ ಗಲ್ಲಿಗೇರಿಸಲಾಗುತ್ತೆ.
ಹೀಗೆ ಹೇಳೋದಕ್ಕೆ ಕಾರಣ ಅಪರಾಧಿಯ ಆತ್ಮಕ್ಕೆ ಮುಕ್ತಿ ಸಿಗಲಿ ಶಾಂತಿ ಪ್ರಾಪ್ತಿಯಾಗಲಿ ಅಂತ ಇರಬಹುದು. ಅಥವ ಜಲ್ಲಾದ್ ಅಂತರಾತ್ಮಕ್ಕೆ ಇನ್ನಬೊಬ್ಬರ ಜೀವ ತೆಗೆಯುತ್ತಿರುವ ಪಾಪ ಪ್ರಜ್ಞೆ ಕಾಡುತ್ತಿರುವುದಕ್ಕೆ ಈ ಪದ ಹೇಳಬಹುದು. ಇದ್ರಿಂದ ಜಲ್ಲಾದ್ ಅಪರಾಧಿಯನ್ನ ಗಲ್ಲಿಗೇರಿಸಿದ ಮೇಲೆ ಆ ಅಪರಾಧಿ ನರಳಾಡುತ್ತಾ ಪ್ರಾಣ ಬಿಡುತ್ತಿರುವ ಆ ಭಯಾನಕ ದೃಶ್ಯ ನಿದ್ರೆ ಮಾಡೋವಾಗ ನಎಮ್ಮದಿಯ ನಿದ್ದೆ ಮಾಡಲು ಬಿಡುವುದಿಲ್ಲ ಎಂಬ ಬಾವನೆಯಿಂದಲೋ ಏನೋ ಹೀಗೆ ಜಲ್ಲಾದ್ ಆ ಭಯಾನಕ ಪದವನ್ನ ಹೇಳೋವಾಗ ಜಲ್ಲಾದ್ ಮನಸ್ಸಿನಲ್ಲಿ ಏನೆಲಾ ಒಡ್ತಿರುತ್ತೆ ಅನ್ನೋದು ಅವರಿಗೆ ಗೊತ್ತಿರುತ್ತೆ.
ಸಾಮಾನ್ಯವಾಗಿ ನಾವೆಲ್ಲರೂ ಕೇವಲ ಸಾಮನ್ಯ ಪರೀಕ್ಷೆಗಳನ್ನ ಬರೆಯೋದಕ್ಕಾಗಲಿ, ಸಂದರ್ಶನಕ್ಕಾಗಲೀ ಹೋದಾಗ್ಲೇ ನಾವು ಭಯದಲ್ಲಿ ನರ್ವಸ್ ಆಗಿಬಿಟ್ಟಿರುತ್ತೇವೆ. ಇಷ್ಕ್ಕೇ ನಮ್ಮ ಹಾರ್ಟ್ ರೇಟ್ ಜಾಸ್ತಿ ಆಗಿರುತ್ತೆ. ನಮಗೆ ಹೀಗೆ ಅನ್ನಿಸೋವಾಗ ಆ ಖೈದಿಯ ಪರಿಸ್ಥಿತಿ ಹೇಗಿರಬಹುದು ಅನ್ನೋದನ್ನ ಒಮ್ಮೆ ಯೋಚನೆ ಮಾಡಿ. ಜೈಲಿನ ತನ್ನ ಕೊಠಿಡಿಯಿಂದ ನೇಣಿಗೇರಿಸು ಸ್ಥಳಕ್ಕೆ ಆ ಖೈದಿಯನ್ನ ಕರೆದೊಯ್ಯುವಾಗ ಆ ಅಪರಾಧಿಗೆ ಯಾವ ರೀತಿಯಾದ ಅನುಭವ ಆಗ್ತಿರಬಹುದು. ಆತನ ಮುಖಕ್ಕೆ ಕಪ್ಪು ಬಟ್ಟೆ ಹಾಕೋವಾಗ ಯಾವ ರೀತಿ ಭಯ ಆಗಿರಬಹುದು. ಇದಾದ ಬಳಿಕ ಜಲ್ಲಾದ್ ಹೇಳುವ ಆ ಒಂದು ಭಯಾನಕ ಶಬ್ಧ ಕೇಳ್ತಿದ್ದಂತೆ ಖೈದಿಯ ಹೃದಯದ ಬಡಿತ ಸುತ್ತಲಿನವರು ಸಹ ಕೇಳಿಸಿಕೊಳ್ಳಬಹುದು. ಆ ಆ ಅನುಭವ ಎಷ್ಟು ಭಯಾನಕವಾಗಿರಬಹುದು.
ಗಲ್ಲಿಗೇರಿಸುವುದಕ್ಕೆ ಅನೇಕ ಕ್ರಮ ನಿಯಮಗಳಿವೆ. ಸಮಯ, ಗಲ್ಲಿಗೇರಿಸುವ ಜಾಗ, ಯಾವಾಗ ಗಲ್ಲಿಗೇರಿಸಬೇಕೆಂಬುದು ಎಲ್ಲವೂ ಕ್ರಮಬದ್ಧವಾಗಿ ಮೊದಲೇ ನಿರ್ಧರಿಸಲಾಗುತ್ತೆ. ಡೆತ್ ವಾರೆಂಟ್ ಜಾರಿಯಾಗ್ತಿದ್ದಂತೆ ಗಲ್ಲಿಗೇರಿಸುವ ಸಿದ್ಧತೆಗಳು ನಡೆಯುತ್ತವೆ. ಅಪರಾಧಿಯನ್ನ ಗಲ್ಲಿಗೇರಿಸುವ ದಿನದಂದು ಜೈಲಿನಲ್ಲಿ ಜಲ್ಲಾದ್ ಅಥವ ಹ್ಯಾಂಗ್ ಮನ್ , ಜೈಲಿನ ಅಧೀಕ್ಷರು, ವೈದ್ಯರು, ಎಕ್ಸ್ಯುಕ್ಯುಟಿವ್ ಮ್ಯಜಿಸ್ಟ್ರೇಟ್ ಉಪಸ್ಥಿತರಿರಲೇಬೇಕು. ಇವರೆಲ್ಲರ ಅನುಪಸ್ಥಿತಿಯಲ್ಲಿ ಅಪರಾಧಿಯನ್ನ ಗಲ್ಲಿಗೇರಿಸುವ ಹಾಗಿಲ್ಲ. ಇನ್ನೂ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗುವ ಅಪರಾಧಿಯ ಅಂತಿಮ ಕ್ಷಣ, ಕೊನೆಯ ಉಸಿರೆಳೆಯುವ ತನಕ ಆತನ ಜೊತೆಗೆ ಜಲ್ಲಾದ್ ಅಥವ ಹ್ಯಾಂಗ್ ಮನ್ ಇರುತ್ತಾರೆ. ಗಲ್ಲು ಶಿಕ್ಷೆಯಲ್ಲಿ ಅಪರಾಧಿಯನ್ನ ನೇಣಿಗೇರಿಸುವ ಕೆಲಸವನ್ನ ಮಾಡುವುದು ಜಲ್ಲಾದ್.

ನಿಮಗೆಲ್ಲಾ ಒಂದು ವಿಚಾರ ಗೊತ್ತಿರಬಹುದು. ನೇಣಿಗೇರಿಸುವ ಸಮಯ ಯಾವಾಗ್ಲೂ ಸೂರ್ಯೋದಯಕ್ಕೆ ಮುನ್ನ ಅಥವ ಸೂರ್ಯೋದಯದ ಆಸುಪಾಸಿನಲ್ಲೇ ಇರುತ್ತೆ. ಉದಾಹರಣೆಗೆ ನಿಭಯಾ ಅತ್ಯಾಚಾರದ ಅಪರಾಧಿಗಳನ್ನ ಭಾರತದ ಜಲ್ಲಾದ್ ಪವನ್ ಗಲ್ಲಿಗೇರಿಸಿದ್ದು ಸಹ ಸೂರ್ಯೋದಯಕ್ಕೂ ಮುನ್ನ. ಆದ್ರೆ ಯಾಕೆ ಇದೇ ಸಮಯದಲ್ಲೇ ನೇಣಿಗೇರಿಸಲಾಗುತ್ತದೆ. ಯಾಕಂದ್ರೆ ಜೈಲಿನಲ್ಲಿ ಎಲ್ಲ ಕೆಲಸಗಳು ಸಹ ಸೂರ್ಯೋದಯದ ನಂತರವೇ ಶುರುವಾಗುತ್ತೆ. ಗಲ್ಲು ಶಿಕ್ಷೆಯಿಂದಾಗಿ ಜೈಲಿನ ಇತರೇ ಕಾರ್ಯಗಳ ಮೇಲೆ ಪರಿಣಾಮ ಬೀರಬಾರದು ಅನ್ನುವ ಕಾರಣಕ್ಕೆ ಸೂರ್ಯೋದಯಕ್ಕೂ ಮುನ್ನವೇ ಅಪರಾಧಿಯನ್ನ ಗಲ್ಲಿಗೇರಿಸಲಾಗುತ್ತದೆ.
ಒಂದು ಮಾತಂತೂ ನಿಜ… ಜೀವನದಲ್ಲಿನಕೆಲವೊಂದು ಘಟನೆ ಕೆಲವೊಮದು ಪ್ರೇರಣೆ, ಕೆಲವೊಂದು ಪರಿಸ್ಥಿತಿ, ಕೆಲವೊಂದು ಅನುಭವ, ಇನ್ನೂ ಕೆಲ ಪರಿಸ್ಥಿತಿಗಳು ಮುಷ್ಯನನ್ನ ಯಾವ ಪರಿಸ್ಥಿತಿಗೆ ತಳ್ಳಿಬಿಡುತ್ತೆ ಅಂದ್ರೆ ಒಂದೋ ಆ ವ್ಯಕ್ತಿ ಪರಿಸ್ಥಿತಿಗಳಿಂದಾಗಿ ಕಾರಣಾಂತರಗಳಿಂದಾಗಿ ಅಪರಾಧ ಮಾಡಿರಬಹುದು, ಇನ್ನೂ ಕೆಲವು ಬಾರಿ ಆವ್ಯಕ್ತಿಗೆ ಅಪರಾಧ ಮಾಡೋದ್ರಲ್ಲಿ ಖುಷಿ ಸಿಗಬಹುದೇನೋ. ಕೆಲವರಿಗೆ ಶಿಕ್ಷೆಯಾಗುತ್ತೆ. ಇನ್ನೂ ಕೆಲವರು ದುಡ್ಡು, ಇಲ್ಲ ಇತರೇ ದಾರಿಗಳಿಂದ ಬಿಡುಗಡೆಯಾಗ್ತಾರೆ. ಮತ್ತೊಂದು ವಿಚಾರ ಈ ಪ್ರಪಂಚದಲ್ಲಿ ಬದುಕುತ್ತಿರುವ ಪ್ರತಿ ವ್ಯಕ್ತಿಯಲ್ಲು ಕೆಟ್ಟದ್ದೂ ಒಳ್ಳೆಯದ್ದು ಇದ್ದೇ ಇರುತ್ತೆ. ಅಂದ್ರೆ ಕೆಲವರು ದೊಡ್ಡ ತಪ್ಪು ಕೆಲವರು ಚಿಕ್ಕ ತಪ್ಪುಗಳನ್ನ ಮಾಡಿರುತ್ತಾರೆ. ಅದೇ ತಪ್ಪು ಮಿತಿ ಮೀರಿದಾಗ , ಅಪರಾಧವಾಗುತ್ತೆ. ಅಪರಾಧಕ್ಕೆ ಶಿಕ್ಷೆಯೂ ಅಪರಾಧದ ಮಟ್ಟದಲ್ಲಿರುತ್ತೆ.








