ಹಿಂದಿ ದಿವಸ್.. ಕೇಂದ್ರ ಸರ್ಕಾರ ರಾಷ್ಟ್ರದ ಎಲ್ಲಾ ಕಡೆ ಆಚರಣೆ ಮಾಡುವಂತಹ ಕಾರ್ಯಕ್ರಮ. ಇದರ ವಿರುದ್ಧ ಕರ್ನಾಟಕದಲ್ಲಿ ಪರ- ವಿರೋಧ ಚರ್ಚೆಗಳು ಗರಿಗೆದರಿವೆ. ರಾಜಕೀಯ, ಸಿನಿ, ಸೇರಿದಂತೆ ಮುಂತಾದ ಕ್ಷೇತ್ರದಲ್ಲಿರುವ ಗಣ್ಯರು ಇದರ ವಿರುದ್ಧ ನಿಂತಿದ್ದಾರೆ. ಕನ್ನಡ ಪರ ಸಂಘಟನೆಗಳು ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಹಾಗಾದ್ರೆ ಇಷ್ಟು ವಿರೋಧಕ್ಕೆ ಕಾರಣವಾಗುತ್ತಿರುವ ಹಿಂದಿ ದಿವಸ್, ಆಚರಣೆಗೆ ಕಾರಣವೇನು..? ಹಿಂದಿ ದಿವಸ್ ಆರಂಭವಾದ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಅದು 1940ರ ದಶಕ, ಆಗ ನಾವೆಲ್ಲರೂ ಭಾರತೀಯರು, ಭಾರತೀಯರೆಲ್ಲಾ ಒಂದೇ, ನಮಗೆಲ್ಲಾ ಒಂದೇ ಕಾನೂನು, ಒಂದೇ ಆಡಳಿತ ಇರುವಂತೆಯೇ ಎಲ್ಲರೂ ಒಂದೇ ಭಾಷೆಯನ್ನು ಮಾತನಾಡುವಂತಿರಬೇಕು. ಅದು ಹಿಂದಿಯೇ ಆಗಿರಬೇಕು ಎಂದು ಒತ್ತಾಯಿಸಿ ಬೋಹರ್ ರಾಜೇಂದ್ರ ಸಿಂಹ, ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಲೇಲ್ಕರ್, ಮೈಥಿಲಿ ಶರಣ ಗುಪ್ತ ಮತ್ತು ಸೇಠ್ ಗೋವಿಂದ ದಾಸ್ ನೇತೃತ್ವದಲ್ಲಿ
ಬಹಳ ಹೋರಾಟಗಳು ನಡೆದವು. ಇವರು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕೆಂದು ಸಂಸತ್ತಿನ ಹೊರಗೆ, ಒಳಗೆ ತೀವ್ರವಾಗಿ ಹೋರಾಟ ಮಾಡಿದರು. ಆ ಹೋರಾಟ ಭಾರತದ ಸಂಸತ್ತಿನಲ್ಲಿ ಕಿಚ್ಚು ಹೊತ್ತಿಸಿತ್ತು.
ಹಿಂದಿ ಭಾಷೆ ಅತೀ ಹೆಚ್ಚು ಜನರು ಮಾತನಾಡುವ ವಿಶ್ವದ ನಾಲ್ಕನೇ ಭಾಷೆ ಆಗಿದೆ. ಹೀಗಾಗಿ ಇದೇ ಭಾಷೆಯನ್ನು ರಾಷ್ಟ್ರದ ಎಲ್ಲಾ ಜನರು ಮಾತನಾಡಬೇಕು. ಆ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಬೇಕೆಂಬುದು ಹೋರಾಟಗಾರರ ಒತ್ತಾಯವಾಗಿತ್ತು. ಇದಕ್ಕೆ ರಾಷ್ಟ್ರದ ಬಹುತೇಕ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು.
ಈ ಹೋರಾಟ ತೀವ್ರಗೊಂಡ ಪರಿಣಾಮ 1949ರ ಸೆಪ್ಟೆಂಬರ್ 14ರಂದು ರಾಷ್ಟ್ರದ ಅಧಿಕೃತ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಘೋಷಿಸಲಾಯಿತು. ಅದರಂತೆ ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 343ರ ಪ್ರಕಾರ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಅಳವಡಿಸಿಕೊಳ್ಳಲಾಯಿತು.
ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬೋಹರ್ ರಾಜೇಂದ್ರ ಸಿಂಹ ಜನ್ಮದಿನದ ನೆನಪಿಗಾಗಿ ಸೆಷ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
https://youtu.be/baYH_OEmLek