ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೊಲಿಟಿಕಲ್ ಡ್ರಾಮಾ ‘ಗೇಮ್ ಚೇಂಜರ್’ಚಿತ್ರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಪ್ರೇಕ್ಷಕರಲ್ಲಿ ಹಬ್ಬದ ವಾತಾವರಣ ಮೂಡಿಸಿದ್ದು, ಮೊದಲ ದಿನದ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ ಎಂದು ತಿಳಿದುಬಂದಿದೆ.
ಮಿಶ್ರ ವಿಮರ್ಶೆಗಳು:
ಚಿತ್ರವು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕ ಎಕ್ಸ್ ಬಳಕೆದಾರರು ಗೇಮ್ ಚೇಂಜರ್ ಅನ್ನು ಒಮ್ಮೆ ಮಾತ್ರ ವೀಕ್ಷಿಸಬಹುದಾದ ಚಿತ್ರ ಎಂದು ಉಲ್ಲೇಖಿಸಿದ್ದಾರೆ. ರಾಮ್ ಚರಣ್ ಅವರ ಅಭಿನಯವನ್ನು ಮೆಚ್ಚಿದರೂ, ಚಿತ್ರದ ನಿರೂಪಣೆ ಮತ್ತು ವೇಗಕ್ಕೆ ಟೀಕೆ ವ್ಯಕ್ತವಾಗಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್:
Sacnilk ವರದಿ ಪ್ರಕಾರ, ಗೇಮ್ ಚೇಂಜರ್ ಮೊದಲ ದಿನದಂದು ಭಾರತದಲ್ಲಿ ₹51.25 ಕೋಟಿ ಸಂಗ್ರಹಿಸಿದೆ. ತೆಲುಗು ಮಾರುಕಟ್ಟೆಯಲ್ಲಿ ₹42 ಕೋಟಿ, ತಮಿಳಿನಲ್ಲಿ ₹2.1 ಕೋಟಿ, ಹಿಂದಿಯಲ್ಲಿ ₹7 ಕೋಟಿ, ಮಲಯಾಳಂನಲ್ಲಿ ₹5 ಲಕ್ಷ ಮತ್ತು ಕನ್ನಡದಲ್ಲಿ ₹1 ಲಕ್ಷ ಗಳಿಸಿದೆ.
ಚಿತ್ರವು ತನ್ನ ಆಕ್ಷನ್ ತುಣುಕುಗಳು ಮತ್ತು ಸಾಂಗ್‌ಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ, ಸ್ಕ್ರಿಪ್ಟ್‌ನಲ್ಲಿ ಹೊಸತನದ ಕೊರತೆ ಮತ್ತು ನಿರೂಪಣೆಯಲ್ಲಿ ತರ್ಕಬದ್ಧತೆಯ ಕೊರತೆ ಕಂಡುಬಂದಿದೆ. ರಾಮ್ ಚರಣ್ ಮತ್ತು ಎಸ್.ಜೆ.ಸೂರ್ಯ ಅವರ ಅಭಿನಯವನ್ನು ಮೆಚ್ಚಿದರೂ, ಚಿತ್ರವನ್ನು ಕಾರ್ಯಗತಗೊಳಿಸುವಲ್ಲಿ ಎಡವಿದ್ದಾರೆಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ:
ಅನೇಕ ಅಭಿಮಾನಿಗಳು ಮತ್ತು ಸಿನಿಪ್ರಿಯರು ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ನೆಗೆಟಿವ್ ಪಾಸಿಟಿವ್ ಎರಡೂ ಪ್ರತಿಕ್ರಿಯೆಗಳು ಇದ್ದರೂ, ಬಹುತೇಕರು ರಾಮ್ ಚರಣ್ ಅವರ ಮ್ಯಾಗ್ನೆಟಿಕ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅಮೋಘ ಅಭಿನಯವನ್ನು ಪ್ರಶಂಸಿಸಿದ್ದಾರೆ.
450 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ‘ಗೇಮ್ ಚೇಂಜರ್’ ಚಿತ್ರವು ನಿರ್ಮಾಪಕರಿಗೆ ನಿರಾಶೆ ಮೂಡಿಸುವಂತೆ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ. ಆದಾಗ್ಯೂ, ಮೊದಲ ದಿನದ ಭರ್ಜರಿ ಕಲೆಕ್ಷನ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗುವ ನಿರೀಕ್ಷೆಯನ್ನು ಮೂಡಿಸಿದೆ.