ನ್ಯೂಸ್ ಡೆಸ್ಕ್ : ಭಾರತ ಮತ್ತು ಚೀನಾ ವಾಸ್ತವ ಗಡಿ ರೇಖೆಯಲ್ಲಿ 5 ದಶಕಗಳ ಬಳಿಕ ರಕ್ತದ ಕೋಡಿ ಹರಿದಿದೆ. ಇದರಿಂದಾಗಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಏ) 45 ಸೈನಿಕರು ಹತರಾಗಿದ್ದಾರೆ. ಹಾಗಾಗಿ ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ.
ಘರ್ಷಣೆ ವೇಳೆಯಲ್ಲಿ ಕರ್ನಲ್ ಬಿ. ಸಂತೋಷ್ ಬಾಬು, ಹವಾಲ್ದಾರ್ ಪಳನಿ, ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದಾರೆ. ಅಲ್ಲದೆ ಚೀನಾದ ದಾಳಿ ಸಮಯದಲ್ಲಿ ಗಾಯಗೊಂಡ 17 ಯೋಧರು ಹುತಾತ್ಮರಾಗಿದ್ದಾರೆ. ಮೃತಪಟ್ಟ ಯೋಧರು ಅತಿ ಎತ್ತರದ ಪ್ರದೇಶದಲ್ಲಿದ್ದರು . ಅಲ್ಲಿರುವ ಅತಿ ಹೆಚ್ಚು ಚಳಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸರ್ಕಾರ ಹೇಳಿದೆ.
ಸಂಘರ್ಷಕ್ಕೆ ಕಾರಣವೇನು
ಚೀನಾ ಅಕ್ಷಾಯ್ ಚಿನ್ ಭಾಗದಲ್ಲಿ 38 ಸಾವಿರ ಚದರ ಕಿ,ಮೀ ಭೂ ಪ್ರದೇಶವನ್ನು ವಶಪಡಿಸಿಕೊಂಡಿದೆ ಎಂದು ಭಾರತ ಆರೋಪಿಸಿದೆ. ಅಲ್ಲದೆ ಅಕ್ಷಾಯ್ ಚಿನ್ ಪ್ರದೇಶದ ಗಡಿ ಪೂರ್ವ ಲಡಾಖ್ ಆಗಿದೆ. ಗ್ವಾಲನ್ ನದಿಯು ಅಕ್ಷಾಯ್ ಚಿನ್ ನಿಂದ ಲಡಾಖ್ ಗೆ ಹರಿಯುತ್ತದೆ. ಆದ್ದರಿಂದ ನದಿಯ ಪಶ್ಚಿಮ ಭಾಗವು ಚೀನಾಕ್ಕೆ ಸೇರುತ್ತದೆ ಎಂದು ಚೀನಾ ವಾದಿಸುತ್ತದೆ. ಆದರೆ ಭಾರತ ಚೀನಾ ಅಕ್ಷಾಯ್ ಚಿನ್ ಪ್ರದೇಶ ನಮಗೆ ಸೇರಿದ್ದು, ಅದನ್ನು ಚೀನಾ ವಶಪಡಿಸಿಕೊಂಡಿದೆ ಎಂದು ಹೇಳುತ್ತದೆ. ಇದರ ಜೊತೆಗೆ ಪಾಂಗಾಂಗ್ ಗಡಿವಿವಾದ ಇನ್ನು ಬಗೆ ಹರೆದಿಲ್ಲ. ಆದ್ದರಿಂದ ಭಾರತ ಮತ್ತು ಚೀನಾ ದೇಶಗಳ ನಡುವೆ ಆಗಾಗಾ ಸಂಘರ್ಷ ನಡೆಯುತ್ತಿರುತ್ತದೆ.
ಮೇ 5 ರಂದು ಉಭಯ ದೇಶಗಳು ಯೋಧರು, ಪೂರ್ವ ಲಡಾಖ್ ನ ಪಾಂಗಾಂಗ್ ತ್ಸೋ ಸರೋವರ ದಂಡೆಯಲ್ಲಿ ಮುಖಾಮುಖಿಯಾಗಿದ್ದರು. ಗಡಿ ಪ್ರದೇಶದಲ್ಲಿ ಗಸ್ತು ತಿರುಗುವುದು ಸಹಜವಾಗಿರುತ್ತದೆ. ಆದರೆ ಚೀನಾದ ಸೇನೆ ಭಾರತೀಯ ಸೇನೆ ನಿಯಮಿತವಾಗಿ ಗಸ್ತು ತಿರುಗುವು ಪ್ರದೇಶಕ್ಕೆ ಹೋಗಲು ಅಡ್ಡಿ ಉಂಟುಮಾಡಿತ್ತು. ಅಲ್ಲಿ ಚೀನಾ ಬಂಕರ್ ಗಳನ್ನು ನೀರ್ಮಾಣ ಮಾಡಿತ್ತು. ಗಾಲ್ವಾನ್ ಪ್ರದೇಶದಲ್ಲಿ ಭಾರತ ಆಕ್ರಮವಾಗಿ ಪ್ರವೇಶ ಮಾಡುತ್ತಿದೆ, ಜೊತೆಗೆ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದೆ ಎಂಬುದು ಚೀನಾದ ಆರೋಪವಾಗಿದೆ. ಇದಾದ ಬಳಿಕ ಉಭಯ ದೇಶದಗಳ ಸೇನಾಧಿಕಾರಿಗಳು ನಿರಂತರ ಸಭೆ ನಡೆಸಿದರು. ಸಭೆಯ ಪ್ರಕಾರ ಉಭಯ ದೇಶಗಳು ತಮ್ಮ ತಮ್ಮ ಸೇನೆಯನ್ನು ವಾಪಾಸ್ ಕರೆಸಿಕೊಳ್ಳುವ ಹಂತದಲ್ಲಿ ಸಂಘರ್ಷ ಶುರುವಾಗಿದೆ.








