ಶಾರೂಕ್‍ಖಾನ್ ಅವರ ಮನ್ನತ್ ಬಂಗಲೆ ಮೇಲೆ ಪ್ಲಾಸ್ಟಿಕ್ ಕವರ್ ಆಗಿರುವುದರ ಹಿಂದಿನ ರಹಸ್ಯ ಏನು ?
ಮುಂಬೈ, ಜುಲೈ 21: ಪ್ರಪಂಚದಾದ್ಯಂತದ ಅನೇಕ ಜನರು ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ ಮತ್ತು ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಇದು ಭಾರತ ಸೇರಿದಂತೆ ವಿಶ್ವದ ಹೆಚ್ಚಿನ ದೇಶಗಳ ಮೇಲೆ ಪರಿಣಾಮ ಬೀರಿದೆ.
ಆದಾಗ್ಯೂ, ಜನರ ಜೀವನೋಪಾಯ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಲಾಕ್ ಡೌನ್ ಮಾಡಿದ ನಂತರ ಅನ್ಲಾಕ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿತು. ವಿಶೇಷವೆಂದರೆ, ಕೊರೋನಾದ ಈ ಸಮಯದಲ್ಲಿ ಖ್ಯಾತನಾಮರು ಸಹ ಸಾಮಾನ್ಯ ಜನರಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ತಮ್ಮ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳ, ಫೋಟೋಗಳು, ವಿಡಿಯೋಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ನಡುವೆ, ಶಾರುಖ್ ಖಾನ್ ಅವರ ಬಂಗಲೆ ‘ಮನ್ನತ್’ ನ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಶಾರುಖ್ ಖಾನ್ ಅವರ ಬಂಗಲೆ ‘ಮನ್ನತ್’ ಪ್ಲಾಸ್ಟಿಕ್‌ನಿಂದ ಮುಚ್ಚಿರುವುದನ್ನು ವೈರಲ್ ಆಗಿರುವ ಚಿತ್ರಗಳಲ್ಲಿ ಕಾಣಬಹುದು. ಆದರೆ ಇದರ ಹಿಂದಿನ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.
ಪ್ಲಾಸ್ಟಿಕ್‌ನಿಂದ ಮುಚ್ಚಲ್ಪಟ್ಟ ಶಾರುಖ್ ಅವರ ಬಂಗಲೆ ನೋಡಿ, ಕೆಲವರು ಕೊರೋನವೈರಸ್ ಭಯದಿಂದ ಇದನ್ನು ಮಾಡಿದ್ದಾರೆ ಎಂದು ನಂಬಿದ್ದರೆ, ಇನ್ನೂ ಕೆಲವರು ಮುಂಬೈಯಲ್ಲಿ ಪ್ರತಿದಿನ ಭಾರಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಕವರ್ ಅಳವಡಿಸಲಾಗಿದೆ ಎಂದು ಕೆಲವರು ನಂಬಿದ್ದಾರೆ.

ಅಂದಹಾಗೆ, ಶಾರುಖ್ ಅವರ ಬಂಗಲೆ ಹೊರಗಿನಿಂದ ಕಾಣುವುದಕ್ಕಿಂತ ಒಳಗಿನಿಂದ ಹೆಚ್ಚು ಐಷಾರಾಮಿಯಾಗಿದೆ.
ಕೊರೋನವೈರಸ್ ಕಾರಣದಿಂದಾಗಿ ದೀರ್ಘಕಾಲದವರೆಗೆ ಶೂಟಿಂಗ್ ನಿಂದ ದೂರವಿದ್ದ, ಶಾರುಖ್ ಜೂನ್ 26 ರಂದು ತನ್ನ ಮನೆಯಲ್ಲಿ ಟಿವಿ ಕಾರ್ಯಕ್ರಮವೊಂದನ್ನು ಚಿತ್ರೀಕರಿಸಿದ್ದರು. ಖಾನ್ ಅವರ ಕೊನೆಯ ಚಿತ್ರ ಹೀರೋ ಡಿಸೆಂಬರ್ 2018 ರಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಈ ನಟ ಯಾವುದೇ ಹೊಸ ಚಿತ್ರದಲ್ಲಿ ನಟಿಸಿಲ್ಲ.
ನಟ ಆರ್.ಮಾಧವನ್ ಅವರ ಮುಂಬರುವ ಚಿತ್ರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಪತ್ರಕರ್ತನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದೆ.








