ಅಷ್ಟ ದಿಕ್ಪಾಲಕರು

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ.
ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ದೇವತೆಗಳಿದ್ದಾರೆ.
ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು:
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
:
೧.ಇಂದ್ರ :
ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿದೇವತೆ. ಐರಾವತ ಇವನ ವಾಹನ. ವಿಷ್ಣು ಪುರಾಣದ ಪ್ರಕಾರ, ಈ ಐರಾವತವು 4 ದಂತಗಳು ಮತ್ತು 7 ಸೊಂಡಿಲನ್ನು ಹೊಂದಿದೆ ಮತ್ತು ನಿಷ್ಕಳಂಕ ಬಿಳಿಯಾಗಿದೆ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ.
ಹೆಸರು : ಇಂದ್ರ
ದಿಕ್ಕು : ಪೂರ್ವ
ಮಂತ್ರ : ಓಂ ಲಂ ಇಂದ್ರಾಯ ನಮಃ
ಆಯುಧ : ವಜ್ರಾಯುಧ
ಒಡನಾಡಿ : ಶಚಿ
ಗ್ರಹ : ಸೂರ್ಯ
ವಾಹನ : ಐರಾವತ
೨. ಅಗ್ನಿ :
ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ, ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ.
ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ.
ಹೆಸರು : ಅಗ್ನಿ
ದಿಕ್ಕು : ಆಗ್ನೇಯ
ಮಂತ್ರ : ಓಂ ರಂ ಅಗ್ನಯೇ ನಮಃ
ಆಯುಧ : ಶಕ್ತಿ
ಒಡನಾಡಿ : ಸ್ವಾಹ
ಗ್ರಹ : ಮಂಗಳ
ವಾಹನ : ಟಗರು
೩. ಯಮ :
ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ
ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ. ಈತನ ಆಯುಧ ದಂಡ. ಯಮ ಸಾವು ಮತ್ತು ನ್ಯಾಯದ ದೇವರು, ಮತ್ತು ಅವನ ವಾಸಸ್ಥಾನವಾದ ಯಮಲೋಕದಲ್ಲಿ ಧರ್ಮದೇವತೆ
ಹೆಸರು : ಯಮ
ದಿಕ್ಕು : ದಕ್ಷಿಣ
ಮಂತ್ರ : ಓಂ ಮಂ ಯಮಾಯ ನಮಃ
ಆಯುಧ : ದಂಡ
ಒಡನಾಡಿ : ಯಮಿ
ಗ್ರಹ : ಬೃಹಸ್ಪತಿ
ವಾಹನ : ಕೋಣ
೪. ನಿಋತಿ :
ಈತ ನೈಋುತ್ಯ ದಿಕ್ಕಿನ ಒಡೆಯ. ನಿಋತಿಯ ಆಯುಧ ಖಡ್ಗ. ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ. ನಿಋತಿಯ ಆರಾಧನೆಯಿಂದ ದೀರ್ಘಾಯಸ್ಸು ಲಭಿಸುತ್ತದೆ.
ಹೆಸರು : ನಿಋತಿ
ದಿಕ್ಕು : ನೈರುತ್ಯ
ಮಂತ್ರ : ಓಂ ಕ್ಷಂ ರಕ್ಷಸಾಯ ನಮಃ
ಆಯುಧ : ಖಡ್ಗ
ಒಡನಾಡಿ : ಖಡ್ಗಿ
ಗ್ರಹ : ಬುಧ
ವಾಹನ : ಮನುಷ್ಯ
೫. ವರುಣ :
ಹಿಂದೂ ಪುರಾಣಗಳ ಪ್ರಕಾರ ನೀರಿನ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ, ಪಶ್ಚಿಮ ದಿಕ್ಕಿನ ಅಧಿಪತಿ, ವರುಣನ ಆಯುಧ ಪಾಶ. ಅವನು ಮಕರ (ಮೊಸಳೆ) ಮೇಲೆ ಆರೋಹಿಸಲ್ಪಟ್ಟಿರುವ ಮತ್ತು ಎಲ್ಲಾ ಜಲತತ್ವಗಳಿಗೆ ದೇವತೆ.
ಹೆಸರು : ವರುಣ
ದಿಕ್ಕು : ಪಶ್ಚಿಮ
ಮಂತ್ರ : ಓಂ ವಂ ವರುಣಾಯ ನಮಃ
ಆಯುಧ : ಪಾಶ
ಒಡನಾಡಿ : ವರುಣಿ
ಗ್ರಹ : ಶುಕ್ರ
ವಾಹನ : ಮೊಸಳೆ
೬. ವಾಯು :
ವಾಯುವ್ಯ ದಿಕ್ಕಿನ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಇವನ ಆಯುಧ ಅಂಕುಶ. ಹನುಮನ ತಂದೆ. ಈತನನ್ನು ಪವನ, ಪ್ರಾಣ ಎಂತಲೂ ಕರೆಯುತ್ತಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವಾದ ವಿಭೂತಿಯೋಗದಲ್ಲಿ ಶ್ರೀಕೃಷ್ಣನು ತನ್ನ ಭಾವ ವಾಯುವಿನಂತೆ ಇದೆ ಎಂದು ಹೇಳುತ್ತಾನೆ. ವೈದಿಕ ಗ್ರಂಥಗಳಲ್ಲಿ, ಅವನು ಪರಮಾತ್ಮನಾದ ವಿಶ್ವಪುರುಷನ ಉಸಿರಾಟದಿಂದ ಜನಿಸಿದನೆಂದು ಮತ್ತು ಸೋಮವನ್ನು ಸೇವಿಸಿದ ಮೊದಲನೆಯವನೆಂದು ಉಲ್ಲೇಖಿಸಲಾಗಿದೆ.
ಹೆಸರು : ವಾಯು
ದಿಕ್ಕು : ವಾಯುವ್ಯ
ಮಂತ್ರ : ಓಂ ಯಂ ವಾಯವೇ ನಮಃ
ಆಯುಧ : ಅಂಕುಶ
ಒಡನಾಡಿ : ಭಾರತಿದೇವಿ
ಗ್ರಹ : ಶನಿ
ವಾಹನ:ಸಾರಂಗ
೭. ಕುಬೇರ :
ಕುಬೇರ ಮಿಶ್ರವಶುವಿನ ಮಗ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಈತನ ಆಯುಧ ಗಧೆ ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಧನ ದೇವತೆ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ವಿಶ್ರಾವಸುವಿನ ಮಗ. ಬ್ರಹ್ಮ ಮಾನಸ ಪುತ್ರರಾದ ಪುಲಸ್ತ್ಯನ ಮೊಮ್ಮಗ
ಹೆಸರು : ಕುಬೇರ
ದಿಕ್ಕು : ಉತ್ತರ
ಮಂತ್ರ : ಓಂ ಶಂ ಕುಬೇರಾಯ ನಮಃ
ಆಯುಧ : ಗದೆ
ಒಡನಾಡಿ : ಕೌಬೇರಿ
ಗ್ರಹ : ಚಂದ್ರ
ವಾಹನ : ಆನೆ
೮. ಈಶಾನ :
ಪಶ್ಚಿಮ ದಿಕ್ಕಿನ ಅಧಿಪತಿ. ಅಷ್ಟದಿಕ್ಪಾಲಕರಲ್ಲೊಬ್ಬ. ಇವನ ಆಯುಧ ತ್ರಿಶೂಲ, ಸಂಪತ್ತು, ಆರೋಗ್ಯ ಹಾಗೂ ಯಶಸ್ಸಿನ ದೇವತೆ. ಈತ ಜ್ಞಾನವನ್ನು ಕೊಟ್ಟು, ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.
ಹೆಸರು : ಈಶಾನ
ದಿಕ್ಕು : ಈಶಾನ್ಯ
ಮಂತ್ರ : ಓಂ ಹಂ ಈಶಾನಾಯ ನಮಃ
ಆಯುಧ : ತ್ರಿಶೂಲ
ಒಡನಾಡಿ : ಪಾರ್ವತಿ
ಗ್ರಹ : ರಾಹು
ವಾಹನ : ನಂದಿ
ಆಧ್ಯಾತ್ಮ ಬಂಧುಗಳೇ…
ಮನೆ, ಮಠ,ಮಂದಿರಗಳಲ್ಲಿ ದೈವಿಕ ಕಾರ್ಯಗಳಲ್ಲಿ ರಾಮಾಯಣ,ಮಹಾಭಾರತ ಭಾಗವತ ಪುರಾಣ,ಗರುಡ ಪುರಾಣ ಮೊದಲಾದ ಅಷ್ಟಾದಶ ಪುರಾಣಗಳ ಪಾರಾಯಣ ಮತ್ತು ಪ್ರವಚನ
ಜಪ ತಪ ಹೋಮ ಅನುಷ್ಠಾನ ಗಳನ್ನು……
ವಿವಾಹಕ್ಕೆ ಸಂಬಂಧಪಟ್ಟ ಮೇಳಾ ಮೇಳಿ
ಮುಹೂರ್ತ ನಿರ್ಣಯ ಮೊದಲಾದ
ಜಾತಕ ವಿಮರ್ಶೆ ….ಪ್ರಶ್ನೆ ಚಿಂತನೆಯನ್ನು
ಯೋಗ್ಯತಾನುಸಾರ ಸರಳ ಮತ್ತು ಶ್ರದ್ಧೆಯಿಂದ ನಡೆಸಿಕೊಡಲಾಗುತ್ತದೆ
ಆಸಕ್ತ ಭಗವದ್ಭಕ್ತರು
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








