ಮತಾಂತರ ಆಗಲೇಬಾರದು ಅನ್ನೋದು ಯಾವ ನ್ಯಾಯ : ಹೆಚ್.ವಿಶ್ವನಾಥ್ H.Vishwanath saaksha tv
ಮೈಸೂರು : ದಲಿತರು ಮತಾಂತರ ಆಗಲೇ ಬಾರದು ಎಂದು ದಿಗ್ಬಂಧನ ಹಾಕುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಬಿಜೆಪಿ ಮುಖಂಡ ಹೆಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಂದಿತನ ತೋರಿಸುತ್ತಿದ್ದಾರೆ.
ಹರಟೆ ಹೊಡಿತ ಕುಳಿತು ಸಭೆಗೆ ಬರುವ ಮುನ್ನ ಕಾಯ್ದೆ ಮಂಡನೆ ಆಗಿತ್ತು. ಆಮೇಲೆ ಬಂದು ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಎಂಇಎಸ್ ಬಗ್ಗೆ ಮಾತನಾಡಿದ ವಿಶ್ವನಾಥ್, ಬೆಳಗಾವಿಯಲ್ಲಿ ದಾಂದಲೆಯಾದ್ರು ಬೆಳಗಾವಿ ಜಿಲ್ಲೆಯ ನಾಯಕರು ಯಾರು ಮಾತನಾಡುತ್ತಿಲ್ಲ.
ಇವರಿಗೆ ಕನ್ನಡಿಗರು ವೋಟ್ ಹಾಕಿಲ್ಲವಾ.? ಮರಾಠಿ ಮತದಾರರೆ ಹೆಚ್ಚಾದರಾ ಎಂದು ಪ್ರಶ್ನಿಸಿದರು.
ಅಲ್ಲದೇ ರಾಜ್ಯದಲ್ಲಿ ಎಂಇಎಸ್ ಅನ್ನು ಬ್ಯಾನ್ ಮಾಡಬೇಕು. ಕನ್ನಡ ನೀರು ಅನ್ನ ತಿಂದು ಕನ್ನಡ ಬಾವುಟ ಸುಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.