ಬೆಂಗಳೂರು, ಜೂನ್ 7: ಅನೇಕ ಸಂದರ್ಭಗಳಲ್ಲಿ ನಾವು ಸ್ಮಾರ್ಟ್‌ಫೋನ್ ಅನ್ನು ಕಳೆದು ಕೊಂಡು ಬಿಡುತ್ತೇವೆ. ಕೆಲಮೊಮ್ಮೆ ಮರಳಿ ಸಿಕ್ಕಿದರೂ ಹೆಚ್ಚಿನ ಸಮಯದಲ್ಲಿ ಪುನಃ ಕೈ ಸೇರುವುದು ಕಷ್ಟ. ಹಾಗಾಗಿ ಸ್ಮಾರ್ಟ್‌ಫೋನ್ ಕಳೆದ ತಕ್ಷಣ ನಾವು ಏನು ಮಾಡಬೇಕು? ಹೇಗೆ ಹುಡುಕಬೇಕು ಎಂಬುದರ ಮಾಹಿತಿ ಇಲ್ಲಿದೆ.
ಕಳೆದು ಕೊಂಡ ಸ್ಮಾರ್ಟ್‌ಫೋನ್ ಗಳನ್ನು ಅದು ಯಾವ ಸ್ಥಳದಲ್ಲಿ ಇದೆ ಎಂದು ತಿಳಿಯುವ ಮೂಲಕ ಪತ್ತೆ ಹಚ್ಚಬಹುದು. ಆದರೆ ನಿಮ್ಮ ಸ್ಮಾರ್ಟ್‌ಫೋನ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು ಮಾತ್ರವಲ್ಲ, ಜಿಮೇಲ್ ಖಾತೆ ಲಾಗಿನ್ ಆಗಿರಬೇಕು.
ಸ್ಮಾರ್ಟ್‌ಫೋನ್ ಕಳೆದು ಹೋದ ತಕ್ಷಣ ನೀವು ನಿಮ್ಮ ಕಂಪ್ಯೂಟರ್ ನಿಂದ ಜಿಮೇಲ್ ಐಡಿಯೊಂದಿಗೆ ಜಿಮೇಲ್.ಕಾಮ್ನಲ್ಲಿ ಲಾಗಿನ್ ಮಾಡಿ
ಲಾಗಿನ್ ನಂತರ ನಿಮ್ಮ ಹೆಸರಿನ ಜೊತೆ ಇರುವ ಜಿಮೇಲ್ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
ನಂತರ ಸೆಕ್ಯುರಿಟಿ ಆಯ್ಕೆಯ ಮೂಲಕ ಫೈಂಡ್ ಎ ಲಾಸ್ಟ್ ಅಥವಾ ಸ್ಟೋಲನ್ ಫೋನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಆ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ಗೂಗಲ್ ಸಹಾಯದ ಮೂಲಕ ಕಳೆದು ಹೋದ ಫೋನ್ ಅನ್ನು ಗೂಗಲ್ ಮ್ಯಾಪ್ ಮುಖಾಂತರ ಯಾವ ಸ್ಥಳದಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ.
ಪ್ಲೇ ಸೌಂಡ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ರಿಂಗ್ ಟೋನ್ ಅನ್ನು ಪ್ಲೇ ಮಾಡಿ
ಹೀಗೆ ನೀವು ಕಳೆದುಕೊಂಡ ಸ್ಮಾರ್ಟ್‌ಫೋನ್ ಅನ್ನು ಪತ್ತೆ ಹಚ್ಚಬಹುದು. ಆದರೆ ಇಂಟರ್ನೆಟ್ ಸಂಪರ್ಕ ಮತ್ತು ಜಿಮೇಲ್ ಖಾತೆಗಳಿದ್ದರೆ ಮಾತ್ರ ಕಳೆದು ಹೋದ ಸ್ಮಾರ್ಟ್‌ಫೋನ್ ಅನ್ನು ಪತ್ತೆ ಹಚ್ಚಬಹುದಾಗಿದೆ.
ಫೋನ್ ಟ್ರ್ಯಾಕ್ ಮಾಡುವಾಗ ಗೂಗಲ್ ಮ್ಯಾಪ್ನಲ್ಲಿ ಹಸಿರು ಬಣ್ಣದ ಗುರುತು ತೋರಿಸಿದರೆ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಸಂಪರ್ಕವಿದೆ ಎಂದು ಅರ್ಥ. ಬೂದು ಬಣ್ಣ ತೋರಿಸಿದರೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ ಎಂದು ಅರ್ಥ.
ಸ್ಮಾರ್ಟ್‌ಫೋನ್ ಕಳೆದು ಕೊಂಡ ಮೇಲೆ ಅದರಿಂದ ಸಿಮ್ ಕಾರ್ಡ್ ಬೇರ್ಪಟ್ಟಿದ್ದರೆ. ಕೊನೆಯ ಬಾರಿಗೆ ಯಾವ ಸ್ಥಳದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಯಬಹುದಾಗಿದೆ.








