Flag-code-of-conduct | ರಾಷ್ಟ್ರಧ್ವಜ ಸಂಹಿತೆ ತಿದ್ದಪಡಿ : ಉಮಾ ಶ್ರೀ ಹೇಳಿದ್ದೇನು ?
ಹುಬ್ಬಳ್ಳಿ : ರಾಷ್ಟ್ರಧ್ವಜ ಸಂಹಿತೆ ತಿದ್ದಪಡಿ ಜಾರಿಗೆ ಸಂಬಂಧ ಮಾಜಿ ಸಚಿವೆ, ನಟಿ, ಉಮಾ ಶ್ರೀ ಪ್ರತಿಕ್ರಿಯೆ ನೀಡಿದ್ದು, ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೆ ಆದ ಗೌರವ ಇದೆ.
ನಮ್ಮ ರಾಷ್ಟ್ರಧ್ವಜಕ್ಕೆ ಮೌಲ್ಯ, ಘನತೆ ಇದೆ, ಇದು ನಮ್ಮ ಸ್ವಾಭಿಮಾನದ ಸಂಕೇತ. ಇದನ್ನ ಹೊರದೇಶದವರು ಸಿದ್ದಪಡಿಸಬಾರದು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಇದೇನಾ ದೇಶಾಭಿಮಾನ ಎಂದು ಪ್ರಶ್ನಿಸಿದರು.
ಇವರ ರಾಷ್ಟ್ರಗೀತೆನೇ ಬೇರೆ, ಧ್ವಜನೇ ಬೇರೆ. ಇವರ ಆರ್‌ಎಸ್‌ಎಸ್ ಧ್ವಜವೇ ಬೇರೆ ಇದೆ. ರಾಷ್ಟ್ರಧ್ವಜ ಅವರ ಧ್ವಜ ಅಲ್ಲವೇ ಅಲ್ಲ,
ಅವರ ಧ್ವಜವೇ ಬೇರೆ, ಅವರು ಕಾಣುತ್ತಿರುವ ಕನಸೇ ಬೇರೆ, ಅವರ ಕಲ್ಪನೆ ಬೇರೆ ಇದೆ. ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ.
ಬಾಯಲ್ಲಿ ಮೇಕ್ ಇನ್ ಇಂಡಿಯಾ, ಧ್ವಜಗಳನ್ನ ತರಿಸಿಕೊಳ್ಳುವುದು ಚೀನಾದಿಂದ. ಪಾಲಿಸ್ಟರ್ ಬಟ್ಟೆಯ ಧ್ವಜಯನ್ನೆ ಬಳಸಬಹುದು ಎನ್ನುವ ಚಿಂತನೆ ರಾಷ್ಟ್ರದ್ರೋಹ.
ರಾಷ್ಟ್ರಧ್ವಜವನ್ನ ಹೊರದೇಶದಿಂದ ತರಿಸಿಕೊಳ್ಳವುದು ಸರಿಯಲ್ಲ. ದೇಶದಲ್ಲಿರುವ ರಾಷ್ಟ್ರಧ್ವಜ ತಯಾರಕ ಘಟಕದಿಂದ ಧ್ವಜಗಳನ್ನ ತರೆಸಿಕೊಂಡಿದ್ದರೆ ಅದರ ಮೌಲ್ಯ ಹೆಚ್ಚುತ್ತಿತ್ತು.
ಈ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು. ರಾಷ್ಟ್ರದ ಭಕ್ತಿ ಮಾತಿನಲ್ಲಿ ಬೇಡ, ಕೃತಿಯಲ್ಲಿ ಮಾಡಿ ತೋರಿಸಿ ಎಂದು ಉಮಾಶ್ರೀ ಹೇಳಿದ್ದಾರೆ.