ಶಿವಮೊಗ್ಗ: ಕ್ವಾರಂಟೈನ್ ನಲ್ಲಿ ಇರುವುದು 8-10 ದಿನ. ಆ ದಿನದಲ್ಲಿ ಅವರೇನು ಹನಿಮೂನ್ ಗೆ ಹೋಗಲ್ಲ. ಸ್ವಲ್ಪ ಹೊಂದಿಕೊಳ್ಳುವುದಕ್ಕೆ ಆಗಲಿಲ್ಲ ಅಂದರೆ ಹೇಗೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ಗರಂ ಆದರು. ರಾಜ್ಯದಲ್ಲಿನ ಅನೇಕ ಟಿವಿ ಚಾನಲ್ ನೋಡಿದರೆ, ಏನು ಪ್ರಪಂಚದಲ್ಲಿ ಇನ್ನೂ ಯಾರೂ ಬದುಕುವುದಿಲ್ಲವೇನೋ ಅನ್ನುವ ರೀತಿ ಹೈಲೈಟ್ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಮಾಡುತ್ತಿರುವ ವ್ಯವಸ್ಥೆ ಅನಾಗರೀಕ ವ್ಯವಸ್ಥೆ ಎನ್ನುವ ಭಾವನೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ಜನ ಹೋಂ ಕ್ವಾರಂಟೈನ್ ಗೆ ಅವಕಾಶ ಕೊಟ್ಟರು ಇಷ್ಟಪಡುತ್ತಿಲ್ಲ. ಈ ಮೊದಲು ಬಿಸಿ ನೀರು ಸಿಗುತ್ತಿಲ್ಲ. ಸರಿಯಾಗಿ ಶೌಚಾಲಯ ಸ್ವಚ್ಛತೆ ಇಲ್ಲ, ವ್ಯವಸ್ಥೆ ಸರಿ ಇಲ್ಲ ಅನ್ನುತ್ತಿದ್ದರು. ಈಗ ಎಲ್ಲಾ ವ್ಯವಸ್ಥೆ ಸರಿ ಇದೆ. ಕ್ವಾರಂಟೈನ್ ನಲ್ಲಿ ಇರುವುದು 8-10 ದಿನ. ಆ ದಿನದಲ್ಲಿ ಅವರೇನು ಹನಿಮೂನ್ ಗೆ ಹೋಗಲ್ಲ. ಸ್ವಲ್ಪ ಹೊಂದಿಕೊಳ್ಳುವುದಕ್ಕೆ ಆಗಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.








