ಒಂದೇ ತಿಂಗಳಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ಸ್ಥಗಿತಗೊಳಿಸಿದ ವಾಟ್ಸ್ ಆ್ಯಪ್..!
ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್ ಆ್ಯಪ್ ಒಂದೇ ತಿಂಗಳಲ್ಲಿ ಸುಮಾರು 20 ಲಕ್ಷ ಭಾರತೀಯರ ಖಾತೆಗಳನ್ನ ನಿಷ್ಕ್ರಿಯಗೊಳಿಸಿದೆ. ಹೌದು.. ಕೆಲ ತಿಂಗಳುಗಳ ಹಿಂದೆ ವಾಟ್ಸಾಪ್ ನ ಹೊಸ ಪ್ರೈವೆಸಿ ನೀತಿಯದ್ದೇ ಸುದ್ದಿಯಾಗಿತ್ತು. ಇದ್ರಿಂದಾಗಿ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭೀತಿಯಿಂದ ಎಲ್ಲರೂ ಹೊಸ ನಮೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಸಾಲದಕ್ಕೆ ಅನೇಕರು ಫೇಸ್‌ಬುಕ್ ಒಡೆತನದ ವಾಟ್ಸಾಪ್ ಗೆ ಗುಡ್ ಬೈ ಹೇಳಿ ಟಿಲಿಗ್ರಾಮ್ , ಸಿಗ್ನಲ್ ಗೂಗಲ್ ಕಡೆಗೆ ವಾಲಿದ್ದರು. ಅದಾಗ್ಯೂ ತನ್ನ ಷರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಭಾರತೀಯರ ಸುಮಾರು 20 ಲಕ್ಷ ಖಾತೆಗಳನ್ನು ಇದೀಗ ವಾಟ್ಸ್ ನಿಂದ ನಿಷೇಧಿಸಲಾಗಿದೆ.
ಈ ಬಗ್ಗೆ ವಾಟ್ಸ್‌ಆ್ಯಪ್ ಕಂಪನಿ ತಿಳಿಸಿದೆ. ಮಾಸಿಕ ದೂರು ಸ್ವೀಕಾರ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ 20 ಲಕ್ಷದ 70 ಸಾವಿರ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ. ಅಲ್ಲದೇ ಇದೇ ವೇಳೆ 420 ಕುಂದು ಕೊರತೆ ದೂರುಗಳನ್ನು ಆಗಸ್ಟ್ ತಿಂಗಳಲ್ಲಿ ವಾಟ್ಸ್‌ಆ್ಯಪ್ ಸ್ವೀಕರಿಸಿದೆ ಎಂದು ಕೂಡ ಬಹಿರಂಗವಾಗಿದೆ. ಜೂನ್ 16 ರಿಂದ ಜುಲೈ 31 ರವರೆಗೆ 30 ಲಕ್ಷ ಭಾರತೀಯರ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದ್ದು ಒಟ್ಟಾರೆಯಾಗಿ ದುರುಪಯೋಗ ತಡೆಯಲು ಹಾಗೂ ದೂರು ಸ್ವೀಕಾರದ ಅನುಸಾರವಾಗಿ ಜಗತ್ತಿನಲ್ಲಿ ಪ್ರತಿ ತಿಂಗಳು ಸರಾಸರಿ 80 ಲಕ್ಷ ಖಾತೆಗಳನ್ನು ವಾಟ್ಸ್‌ಆ್ಯಪ್ ನಿಷೇಧಿಸುತ್ತಿದೆ ಎಂಬ ವಿಚಾರ ತಿಳಿದುಬಂದಿದೆ.








