WHATSAPP ನಲ್ಲಿ ಸೀಘ್ರವೇ ಬರಲಿದೆ ಈ ಹೊಸ ಆಪ್ಶನ್..! ಉಪಯೋಗವೇನು..!
ಫೇಸ್ ಬುಕ್, ವಾಟ್ಸಾಪ್ ಟ್ವಿಟ್ಟರ್ , ಇನ್ಸ್ಟಾ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳ ಆಪ್ ಗಳಲ್ಲಿ ಲಾಗೌಟ್ ಆಪ್ಶನ್ ಇದ್ದು, ನಮ್ಮ ಗೌಪ್ಯತೆಯನ್ನ ಕಾಪಾಡಲು ಸಹಾಯಕವಾಗಿದೆ. ಆದ್ರೆ ಅತಿ ಹೆಚ್ಚಾಗಿ ವಯಕ್ತಿಕ ಹಾಗೂ ವ್ಯಾವಹಾರಿಕವಾಗಿ ಬಳಕೆಯಾಗುವ ವಾಟ್ಸಾಪ್ ನಲ್ಲಿ ಮಾತ್ರ ;ಇಲ್ಲಿಯವರೆಗೂ ಕೂಡ ಇಂತಹ ಆಪ್ಶನ್ ಇರಲಿಲ್ಲ. ಆದ್ರೆ ಇನ್ಮುಂದೆ ನಿಮಗೆ ಈ ಆಪ್ಶನ್ ಸಿಗಲಿದ್ದು, ನಿಮ್ಮ ಗೌಪ್ಯತೆ ಕಾಪಾಡಲು ಇದು ಸಹಾಯಕವಾಗಲಿದೆ.
ಹೌದು ಪ್ರಸ್ತುತ ವಾಟ್ಸ್ಯಾಪ್ ನವೀಕರಣದ ಅಡಿಯಲ್ಲಿ, ಆಯಪ್ ನಲ್ಲಿ ಲಾಗ್ ಔಟ್ ಫೆಸಿಲಿಟಿ ಯನ್ನು ಪರಿಚಯಿಸುತ್ತಿದೆ. ವಾಟ್ಸ್ಯಾಪ್ ನ್ನು ಹೆಚ್ಚಿನವರು ಅನೌಪಚಾರಿಕತೆಗೆ ಮಾತ್ರವಲ್ಲದೆ ಔಪಚಾರಿಕ ಸಂವಹನಕ್ಕೂ ಕೂಡ ಬಳಸುತ್ತಿದ್ದಾರೆ. ದಿನವಿಡೀ ಬರುವ ವಾಟ್ಸ್ಯಾಪ್ ನೋಟಿಫಿಕೇಶನ್ ಗಳಿಂದ ಕೆಲವರಿಗೆ ಕಿರಿಕಿರಿ ಕೂಡ ಆಗಬಹುದು. ಆದರೆ, ಫೇಸ್ಬುಕ್, ಟ್ವಿಟರ್ನಂತಹ ಇತರ ಸಾಮಾಜಿಕ ತಾಣಗಳಂತೆ, ಇದರಲ್ಲಿ ಲಾಗ್ ಔಟ್ ಆಪ್ಶನ್ ಇಲ್ಲ. ಇದೀಗ ವಾಟ್ಸ್ಯಾಪ್ ತನ್ನ ಬಳಕೆದಾರರಿಗೆ ತನ್ನ ಅಪ್ ಕಮಿಂಗ್ ವರ್ಶನ್ ನಲ್ಲಿ ಲಾಗ್ ಔಟ್ ಫೆಸಿಲಿಟಿ ನೀಡುತ್ತಿದ್ದು, ಇದು ಗೌಪ್ಯತೆಯ ವಿಚಾರದಲ್ಲೂ ಇದು ಸಹಕಾರಿಯಾಗಲಿದೆ.
ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಹೊಸ ಸೌಲಭ್ಯ ಒದಗಿಸಿದ UDPI
ಈ ವೈಶಿಷ್ಟ್ಯವನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ ಮತ್ತು ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಪ್ರೊಗ್ರಾಮ್ ಅಡಿಯಲ್ಲಿ ನವೀಕರಿಸಲಾಗುತ್ತಿದೆ ಎಂದು WHATSAPP ತಿಳಿಸಿದೆ. ವಾಟ್ಸ್ಯಾಪ್ ನಲ್ಲಿ ಲಾಗ್ ಔಟ್ ವೈಶಿಷ್ಟ್ಯವನ್ನು ನೀಡಲಾಗಿಲ್ಲ. ಯಾಕೆಂದರೆ, ಈ ವೈಶಿಷ್ಟ್ಯವನ್ನು ಇದುವರೆಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿಲ್ಲ. ಒಂದೊಮ್ಮೆ ಈ ಲಾಗ್ ಔಟ್ ವೈಶಿಷ್ಟ್ಯ ಪರಿಚಯಿಸಿದ ಬಳಿಕ ಡಿಲೀಟ್ ಅಕೌಂಟ್ ವೈಶಿಷ್ಟ್ಯ ಕಣ್ಮರೆಯಾಗಲಿದೆ ಎಂದೂ ಕೂಡ ಹೇಳಲಾಗುತ್ತಿದೆ. ಪ್ರಸ್ತುತ ಸಾಮಾನ್ಯ ಬಳಕೆದಾರರಿಗೆ ಕೇವಲ ವಾಟ್ಸ್ಯಾಪ್ ನ ವೆಬ್ ವರ್ಶನ್ ನಲ್ಲಿ ಮಾತ್ರ ಲಾಗ್ ಔಟ್ ವೈಶಿಷ್ಟ್ಯ ನೀಡಲಾಗಿದೆ.
ಸತತ 10ನೇ ದಿನವೂ ನಿಲ್ಲದ ತೈಲ ಬೆಲೆಗಳ ಓಟ : ನಮೋ ಸಮರ್ಥನೆ
ಅಂದ್ಹಾಗೆ ಇತ್ತೀಚೆಗೆ ವಾಟ್ಸಾಪ್ ಅಪ್ಲಿಕೇಶನ್ ತನ್ನ ಪ್ರವೆಸಿ ನೀತಿಯನ್ನ ಬದಲಾಯಿಸಲು ಹೊರಟಿತ್ತು. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಗೌಪ್ಯ ಮಾಹಿತಿಗಳು ಲೀಕ್ ಆಗುತ್ತೆ ಅನ್ನೋ ಗೊಂದಲಗಳಿಂದಾಗಿ ಅನೇಕರು ವಾಟ್ಸಾಪ್ ನ ಅನ್ ಇನ್ಸ್ಟಾಲ್ ಮಾಡಿ ಹೆಚ್ಚಿನ ಜನರು ಟೆಲಿಗ್ರಾಮ್ ಸಿಗ್ನಲ್ ಆಪ್ ಗಳತ್ತ ಮುಖ ಮಾಡಿದ್ರು. ಬಳಿಕ ಸುಪ್ರೀಂ ಕೋರ್ಟ್ ನ ಅಂಗಳದ ತನಕವೂ ಹೋಗಿತ್ತು. ಈ ವೇಳೆ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವುದು ಪ್ರಮುಖ ಕರ್ತವ್ಯ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಾಟ್ಸ್ಯಾಪ್ ಗೆ ಸಲಹೆ ನೀಡಿತ್ತು.








