ಪ್ರೈವೆಸಿ ಪಾಲಿಸಿ ಹಿಂಪಡೆಯುವಂತೆ ‘ವಾಟ್ಸಾಪ್’ ಗೆ ಐಟಿ ಇಲಾಖೆ ಆದೇಶ
ನವದೆಹಲಿ : ವಾಟ್ಸಾಪ್ ನ ನೂತನ ಗೌಪ್ಯತಾ ನೀತಿ ಬಗ್ಗೆ ಅನೇಕ ಗೊಂದಲಗಳಿದೆ. ಖಾಸಗಿ ಮಾಹಿತಿಗಳ ಸೋರಿಕೆಯ ಭೀತಿಯಿದ್ದು, ಹಲವು ಬಳಕೆದಾರರು ವಾಟ್ಸಾಪ್ ನಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ..
ಈ ನಡುವೆ ವಾಟ್ಸಾಪ್ ಜಾರಿಗೊಳಿಸಿರುವ ಹೊಸ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವಾಟ್ಸ್ಆಯಪ್ ಗೆ ಆದೇಶಿಸಿದೆ ಎನ್ನಲಾಗಿದೆ.
ವಾಟ್ಸ್ಆಯಪ್ ನ ಗೌಪ್ಯತಾ ನೀತಿಯಲ್ಲಿ ಮಾಡಲಾಗಿರುವ ಬದಲಾವಣೆ ಮತ್ತು ಈ ಬದಲಾವಣೆಗಳನ್ನು ಜಾರಿಗೊಳಿಸಿದ ವಿಧಾನ ದೇಶದ ಕಾನೂನಿಗೆ ವಿರುದ್ಧವಾಗಿದ್ದು , ಮಾಹಿತಿ ನೀತಿ, ದತ್ತಾಂಶ ಸುರಕ್ಷತೆ ಮತ್ತು ಬಳಕೆದಾರರ ಆಯ್ಕೆಗೆ ಕೆಡುಕು ಉಂಟುಮಾಡುತ್ತದೆ. ಅಲ್ಲದೆ ದೇಶದ ನಾಗರಿಕರ ಹಕ್ಕು ಮತ್ತು ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಐಟಿ ಇಲಾಖೆ ಹೇಳಿದೆ.
ಈ ಕುರಿತು ವಾಟ್ಸಾಪ್ ಗೆ ನೋಟಿಸ್ ಜಾರಿಗೊಳಿಸಿದ್ದು 7 ದಿನದೊಳಗೆ ಸಮಾಧಾನಕರ ಪ್ರತಿಕ್ರಿಯೆ ಲಭ್ಯವಾಗದಿದ್ದರೆ ಕಾನೂನಿಗೆ ಅನುಗುಣವಾಗಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಮೇ 18ರಂದು ಗೌಪ್ಯತಾ ನೀತಿ ಹಿಂಪಡೆಯುವಂತೆ ಮತ್ತೊಮ್ಮೆ ಸೂಚಿಸಲಾಗಿದೆ. ದೇಶದ ನಾಗರಿಕರ ಹಕ್ಕು ಮತ್ತು ಹಿತಾಸಕ್ತಿ ಕಾಪಾಡುವುದು ತನ್ನ ಸಾರ್ವಭೌಮ ಜವಾಬ್ದಾರಿಯಾಗಿದೆ ಎಂದು ವಾಟ್ಸ್ಆಯಪ್ ಗೆ ತಿಳಿಸಲಾಗಿದೆ ಮತ್ತು ಭಾರತದ ಬಳಕೆದಾರರು ಮತ್ತು ಯುರೋಪಿಯನ್ ಬಳಕೆದಾರರ ನಡುವೆ ತಾರತಮ್ಯದಿಂದ ವರ್ತಿಸುತ್ತಿರುವ ಬಗ್ಗೆ ಆಕ್ಷೇಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.