ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶವನ್ನು 21 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಜನರೆಲ್ಲರೂ ಮನೆಯಲ್ಲಿ ಕಾಲ ಕಳೆಯುತ್ತಿದ್ದು, ಇಂಟರ್ ನೆಟ್ ಮೊರೆ ಹೋಗಿದ್ದಾರೆ. ಇದೀಗ ವಾಟ್ಸಾಪ್ ಸ್ಟೇಟಸ್ ಮೇಲೂ ಕೊರೊನಾ ಕರಿ ನೆರಳು ಆವರಿಸಿದೆ.
ಹೌದು..! ಇಷ್ಟು ದಿನ ವಾಟ್ಸಾಪ್ ನಲ್ಲಿ 30 ಸೆಕಂಡಿನ ವಿಡಿಯೋವನ್ನು ಸ್ಟೇಟಸ್ ಗೆ ಹಾಕಬಹುದಿತ್ತು. ಆದ್ರೆ, ಈಗ ಅದನ್ನ 15 ಸೆಕೆಂಡ್ ಗೆ ಇಳಿಸಲಾಗಿದೆ. ಇದಕ್ಕೆ ಕಾರಣ, ಕೊರೊನಾ.
ಎಸ್..! ಕೊರೊನಾದಿಂದಾಗಿ ಇಡೀ ದೇಶವೇ ಲಾಕ್ ಡೌನ್ ನಲ್ಲಿ ಇರೋದ್ರಿಂದ ಜನರೆಲ್ಲಾ ಮನೆಗಳಲ್ಲೇ ಇದ್ದಾರೆ. ಸಮಯ ಕಳೆಯೋಕೆ ಅವರು ಇಂಟರ್ ನೆಟ್ ಗೆ ಮೊರೆ ಹೋಗುತಿದ್ದಾರೆ. ಹೀಗಾಗಿ ಜನರಿಗೆ ಇಂಟರ್ ನೆಟ್ ಶಾರ್ಟೇಜ್ ಆಗಬಾರದು ಅನ್ನೋ ಕಾರಣಕ್ಕೆ ವಿಡಿಯೋ ಬ್ಯಾಂಡ್ ವಿಡ್ತ್ ಕಡಿಮೆ ಮಾಡಲಾಗಿತ್ತು. ಇದೀಗ ಸ್ಟೇಟಸ್ ಅವಧಿಯನ್ನ ಶೇಕಡ 50ರಷ್ಟು ಕಡಿತ ಮಾಡಲಾಗಿದೆ.
ಈ ಬಗ್ಗೆ ವಾಟ್ಸಾಪ್ ಬೇಟಾ ಇನ್ಫರ್ಮೇಷನ್ ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ಸ್ಟೇಟಸ್ 24 ಗಂಟೆಗಳ ಕಾಲ ಇರೋದ್ರಿಂದ 15 ಸೆಕೆಂಡ್ ಗೆ ಸೀಮಿತಗೊಳಿಸಲಾಗಿದ್ದು, ಇದರಿಂದ ಸರ್ವರ್ ಜಾಮ್ ಕಡಿಮೆ ಮಾಡಬಹುದು. ಇದು ತಾತ್ಕಾಲಿಕವಾಗಿದ್ದು, ಪರಿಸ್ಥಿತಿ ಸರಿ ಹೋದ ಮೇಲೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತೆ ಎಂದು ತಿಳಿಸಿದೆ.